ಸೇವಾ ಮನೋಭಾವನೆ ಇದ್ದರೆ ಸಮಾಜದ ಅಭಿವೃದ್ಧಿ ಸಾಧ್ಯ: ಕೆ.ಟಿ.ಹನುಮಂತು

| Published : May 06 2024, 12:39 AM IST

ಸಾರಾಂಶ

ಅಲಯನ್ಸ್ ಸಂಸ್ಥೆ 23 ದೇಶಗಳಲ್ಲಿ ಸುಮಾರು 30 ಸಾವಿರ ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿ ಇದು 20ನೇ ಶಾಖೆಯಾಗಿ ಉದ್ಘಾಟನೆಗೊಂಡಿದೆ. ಈ ಕ್ಲಬ್‌ನಲ್ಲಿ ಭಾರತೀನಗರದಲ್ಲಿ ಮಹಿಳೆಯರೇ ಸ್ಥಾಪನೆ ಮಾಡಿದ್ದಾರೆ. ಇದರ ಉದ್ದೇಶ ಸ್ನೇಹ ಮತ್ತು ಸೇವೆಯ ಜೊತೆ ನಾಯಕತ್ವ ಗುಣಗಳು ಬೆಳೆಯುತ್ತವೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಸೇವಾ ಮನೋಭಾವನೆ ಇದ್ದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಸೋಷಿಯೇಷನ್ ಆಫ್ ಅಲಯನ್ಸ್ ಕಬ್ಲ್ ಇಂಟರ್ ನ್ಯಾಷಿನಲ್ ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ತಿಳಿಸಿದರು.

ಅಸೋಷಿಯೇಷನ್ ಆಫ್ ಅಲಯನ್ಸ್ ಕಬ್ಲ್ ಇಂಟರ್ ನ್ಯಾಷಿನಲ್ ಜಿಲ್ಲೆ 268 ಎಸ್ ಮಂಡ್ಯ ಶಾಖೆ ವತಿಯಿಂದ ನೂತನ ಭಾರತೀನಗರ ಅಲಯನ್ಸ್ ಸಂಸ್ಥೆ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಮತ್ತು ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾಮನೋಭಾವ ಮನುಷ್ಯ ಬೆಳೆಸಿಕೊಳ್ಳಬೇಕಾದ ಪ್ರಮುಖ ಗುಣ. ಈ ಸಂಸ್ಥೆಯಿಂದ ಶಿಕ್ಷಣ, ಆರೋಗ್ಯ ಪರಿಸರಕ್ಕೆ ಸಂಬಂಧಿಸಿದ ಹಲವು ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಸೇವೆಯಲ್ಲಿ ತೊಡಗುವವರಿಗೆ ಈ ಸಂಸ್ಥೆಗಳು ಅತ್ಯವ್ಯಕವಾಗಿವೆ ಎಂದರು.

ಈ ಸಂಸ್ಥೆ 23 ದೇಶಗಳಲ್ಲಿ ಸುಮಾರು 30 ಸಾವಿರ ಸದಸ್ಯರನ್ನು ಹೊಂದಿದೆ. ಜಿಲ್ಲೆಯಲ್ಲಿ ಇದು 20ನೇ ಶಾಖೆಯಾಗಿ ಉದ್ಘಾಟನೆಗೊಂಡಿದೆ. ಈ ಕ್ಲಬ್‌ನಲ್ಲಿ ಭಾರತೀನಗರದಲ್ಲಿ ಮಹಿಳೆಯರೇ ಸ್ಥಾಪನೆ ಮಾಡಿದ್ದಾರೆ. ಇದರ ಉದ್ದೇಶ ಸ್ನೇಹ ಮತ್ತು ಸೇವೆಯ ಜೊತೆ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದರು.

ಸಂಸ್ಥೆ 1ನೇ ಉಪರಾಜ್ಯಪಾಲ ಎಚ್.ಮಾದೇಗೌಡ ಪ್ರತಿಜ್ಞಾವಿಧಿ ಬೋಧಿಸಿದರು. 2ನೇ ಉಪರಾಜ್ಯಪಾಲ ಜಿಲ್ಲೆ 268 ಎಸ್ ಮಂಡ್ಯ ಕೆ.ಆರ್.ಶಶಿಧರ್ ಈಚಗೆರೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕಬ್ಲ್‌ನ ಪ್ರಾಂತೀಯ ಅಧ್ಯಕ್ಷ ಕೆ.ಎನ್.ನೀನಾ ಪಟೇಲ್, ವಲಯಾಧ್ಯಕ್ಷೆ ಪ್ರಮೀಳಾಕುಮಾರಿ, ಜಿಲ್ಲಾಧ್ಯಕ್ಷ ವಸಂತ, ನೂತನ ಪದಾಧಿಕಾರಿಗಳಾದ ಕಾರ್ಯದರ್ಶಿ ಪ್ರಭಾವತಿ, ಖಜಾಂಚಿ ಅನುಪಮಾ, 1ನೇ ಉಪಾಧ್ಯಕ್ಷರಾದ ಯೋಶೋಧಮ್ಮ, ಲೀಲಾರಾಮೇಗೌಡ, ಪಿಆರ್‌ಓ ಶಿವಮ್ಮ, ನಿರ್ದೇಶಕರಾದ ಸುಜಾತ, ಶೋಭಾ, ಶಶಿಕಲಾ, ಗೀತಾ, ಮಮತ, ನಂದಿನಿ, ಸವಿತ, ನಾಗರತ್ನಮ್ಮ, ಮಂಗಳಗೌರಿ ಸೇರಿದಂತೆ ಹಲವರಿದ್ದರು.