ಸಹಕಾರ ಕ್ಷೇತ್ರದ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ

| Published : Sep 22 2024, 01:49 AM IST

ಸಹಕಾರ ಕ್ಷೇತ್ರದ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಂಬಾ: ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದು ಎಂದು ಪಿಕೆಪಿಎಸ್ ಅಧ್ಯಕ್ಷ ದಯಾನಂದ ನಿಂಬಾಳ ಹೇಳಿದರು. ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಬೆಳೆಯಬೇಕಾದರೆ ರೈತರ ಸಹಕಾರ ಅವಶ್ಯ.

ಕನ್ನಡಪ್ರಭ ವಾರ್ತೆ ತಾಂಬಾ: ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದು ಎಂದು ಪಿಕೆಪಿಎಸ್ ಅಧ್ಯಕ್ಷ ದಯಾನಂದ ನಿಂಬಾಳ ಹೇಳಿದರು. ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಬೆಳೆಯಬೇಕಾದರೆ ರೈತರ ಸಹಕಾರ ಅವಶ್ಯ. ರೈತರ ಹಾಗೂ ಮಧ್ಯಮ ವರ್ಗದ ಜನರ ಆರ್ಧಿಕ ಪ್ರಗತಿಗೆ ಪಿಕೆಪಿಎಸ್ ಸಂಘಗಳು ಸಾಕಷ್ಟು ನೆರವು ನೀಡುತ್ತಿದ್ದು, ರೈತರು ಸಂಘದಿಂದ ಪಡೆದ ಸಾಲದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ರೈತರಾದ ಬಂದಗಿಸಾಬ ಹಚ್ಯಾಳ, ಶಿವರಾಜ ಕೆಂಗನಾಳ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಪಿ.ಗೊಂಗಿ ವರದಿ ವಾಚಿಸಿದರು. ಉಪಾಧ್ಯಕ್ಷರಾದ ಬಂದೆನಮಾಜ ಚಿಕ್ಕಗಸಿ, ಮಲ್ಲಿಕಾರ್ಜುನ ಚಿಂಚೋಳ್ಳಿ, ರಾಯಗೊಂಡ ಗಬಸಾವಳಗಿ, ಹಣಮಂತ ಕರನಿಂಗ, ಪರಶುರಾಮ ಪಾಟೀಲ, ಹಣಮಂತ ಹೊಲೇರ, ಶ್ರೀದೇವಿ ತಳವಾರ, ವಿಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿಗಳಾದ ಪ್ರೇಮನಗೌಡ ಬಿರಾದಾರ, ಉಮ್ಮರ ದಡೇದ, ಶ್ರೀಶೈಲ ಚಿಂಚೋಳ್ಳಿ, ಮಾಶೀಮ ವಾಲೀಕಾರ, ರಮೇಶ ಜೇವೂರ, ಶ್ರೀಕಾಂತ ಬಾಗೇಳ್ಳಿ, ಚೇತನ ಬೀಸನಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಸ್ವಾಗತಿಸಿದರು, ಶಿಕ್ಷಕ ಎಸ್.ಎನ್.ಅಳ್ಳಗಿ ನಿರೂಪಿಸಿದರು, ಆರ್.ಎ.ಹೊರ್ತಿ ವಂದಿಸಿದರು.

ಪೋಟೊ ಪೈಲ್: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಧ್ವಿತಿಯ ವರ್ಷದಲ್ಲಿ ಪ್ರಥಮ ಹಾಗೂ ಧ್ವಿತಿಯ ಸ್ಥಾನ ಪಡೆದ ಸದಸ್ಯರ ಮಕ್ಕಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತ್ತು.