ದೇವನಹಳ್ಳಿ: ಬಹುತೇಕ ಗ್ರಾಮಗಳಲ್ಲಿ ಸ್ಮಶಾನಗಳನ್ನು ಒತ್ತುವರಿ ಮಾಡುವುದು, ರಸ್ತೆ ಇಲ್ಲದಂತೆ ಮಾಡುವುದು, ಮೂಲಸೌಕರ್ಯಗಳನ್ನು ಕಡೆಗಣಿಸುವುದೇ ಸಾಮಾನ್ಯ. ಅದೇ ರೀತಿ ೧೯೯೩ರಿಂದ ನಿರಂತರ ಹೋರಾಡಿ ಸ್ಮಶಾನ ರಸ್ತೆ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿಗೆ ಸಹಕರಿಸಿ, ಗಿಡಮರ ಬೆಳೆಸಿದವರನ್ನು ಸನ್ಮಾನಿಸುವ ವಿನೂತ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಜೈಬೀಮ್ ಅಖಲ ಭಾರತ ದಲಿತ ಕ್ರಿಯಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು ಹೇಳಿದರು
ದೇವನಹಳ್ಳಿ: ಬಹುತೇಕ ಗ್ರಾಮಗಳಲ್ಲಿ ಸ್ಮಶಾನಗಳನ್ನು ಒತ್ತುವರಿ ಮಾಡುವುದು, ರಸ್ತೆ ಇಲ್ಲದಂತೆ ಮಾಡುವುದು, ಮೂಲಸೌಕರ್ಯಗಳನ್ನು ಕಡೆಗಣಿಸುವುದೇ ಸಾಮಾನ್ಯ. ಅದೇ ರೀತಿ ೧೯೯೩ರಿಂದ ನಿರಂತರ ಹೋರಾಡಿ ಸ್ಮಶಾನ ರಸ್ತೆ ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿಗೆ ಸಹಕರಿಸಿ, ಗಿಡಮರ ಬೆಳೆಸಿದವರನ್ನು ಸನ್ಮಾನಿಸುವ ವಿನೂತ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಜೈಬೀಮ್ ಅಖಲ ಭಾರತ ದಲಿತ ಕ್ರಿಯಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು ಹೇಳಿದರು.
ತಾಲೂಕಿನ ಬಂಡಿಕೊಡಿಗೇನಹಳ್ಳಿಯಲ್ಲಿ ಗ್ರಾಪಂ ಸಹಯೋಗದಲ್ಲಿ ಜೈಬೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಸ್ಮಶಾನ ಉದ್ಘಾಟನೆ ಹಾಗೂ ಸ್ಮಶಾನವನ ಅಭಿವೃದ್ಧಿಗೆ ಸಹಕರಿಸಿದವರನ್ನು ಸನ್ಮಾಸಿ ಮಾತನಾಡಿದ ಅವರು, ಮನುಷ್ಯ ಸತ್ತಾಗ ನೆಮ್ಮದಿ ಸಿಗುವ ಜಾಗವೇ ನಮಗೆ ಶಾಶ್ವತ. ಗ್ರಾಮದ ಸ್ಮಶಾನ ರಸ್ತೆ ತೆರವಿಗಾಗಿ ಗ್ರಾಮ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹಕಾರವೂ ಸ್ಮರಿಸವಂತದ್ದು. ಸ್ಮಶಾನದಲ್ಲಿ ಗಿಡಗಳನ್ನು ನೆಟ್ಟು, ಕೊಳವೆ ಬಾವಿ, ವಿದ್ಯುತ್ ದೀಪ, ಮಳೆ ಬಿಸಿಲಿಗೆ ತಂಗುದಾಣ ನಿರ್ಮಾಣ ಕಾವಲುಗಾರನ ನೇಮಕಕ್ಕೂಸಹಕರಿಸಬೇಕು ಎಂದು ಹೇಳಿದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸತ್ತಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಸ್ಮಶಾನ ಕೊಡಲಿಲ್ಲ. ಆದರೆ, ಪ್ರಧಾನಿ ಮೋದಿಯವರು ಅವರ ಸಮಾಧಿ ಸ್ಥಳವನ್ನು ಪೂಣ್ಯಭೂಮಿಯಾಗಿ ಅಭಿವೃದ್ದಿಪಡಿಸಿದ್ದಾರೆ. ಅಂದು ಅಂಬೇಡ್ಕರ್ ಅವರು ಉನ್ನತ ಸಂವಿಧಾನ ರಚಿಸಿ ಶೋಷಿತರು, ದಲಿತರಿಗೆ ಹಕ್ಕುಗಳನ್ನು ಕಲ್ಪಿಸದಿದ್ದಿದ್ದರೆ ನಮಗಿಂದು ಉನ್ನತ ಸ್ಥಾನಮಾನ ಲಭಿಸುತ್ತಿರಲಿಲ್ಲ. ಇಂದಿನ ನಮ್ಮ ಅವಕಾಶಗಳು, ಮೀಸಲಾತಿ ಅಂಬೇಡ್ಕರ್ ನಮಗೆ ನೀಡಿರುವ ಅತಿದೊಡ್ಡ ಕೊಡುಗೆ ಎಂದು ಹೇಳಿದರು.
ಗ್ರಾಪಂ ಕಾರ್ಯದರ್ಶಿ ಶಿವಣ್ಣ ಮಾತನಾಡಿ, ಒಳ್ಳೆಯ ಕೆಲಸಕ್ಕೆ ನಮ್ಮ ಸಹಕಾರ, ಸರ್ಕಾರದಿಂದ ಸಿಗುವ ನೆರವು ಕೊಡಿಸಲು ನಾವು ಸದಾ ಸಿದ್ದರಿದ್ದೇವೆ. ಇಂದು ಪುಣ್ಯದ ಕೆಲಸ ಸ್ಮಶಾನವನ ಉದ್ಘಾಟಿಸುವ ಭಾಗ್ಯ ನನ್ನ ಪಾಲಿಗೆ ಬಂದಿದೆ. ನಮ್ಮ ಪಿಡಿಒ ಬರಲಾಗದೆ ಅವರ ನಿದೇರ್ಶನದಂತೆ ನಾನು ಭಾಗವಹಿಸಿದ್ದೇನೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವಾರು ಯೋಜನೆಗಳಿವೆ. ಗ್ರಾಮಸ್ಥರು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಈ ಸ್ವತ್ತಿಗಾಗಿ ಎಲ್ಲರೂ ಅರ್ಜಿ ಸಲ್ಲಿಸಿ ಈ ಸ್ವತ್ತು ಮಾಡಿಸಿಕೊಳ್ಳಬೇಕು.ಗ್ರಾಮದ ಅಭಿವೃದ್ಧಿಗೆ ರಸ್ತೆ ಚರಂಡಿ ಮತ್ತಿತರ ಕಾಮಗಾರಿ ಮಾಡಲು ಹೋದಾಗ ಅಕ್ಕಪಕ್ಕದ ಗ್ರಾಮಸ್ಥರು ಸಹಕರಿಸಬೇಕು. ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಇರುವಷ್ಟು ದಿನ ಜನಸೇವೆ ಮಾಡೋಣ. ಯಾರಿಗೂ ಅಧಿಕಾರ ಶಾಶ್ವತವಲ್ಲ ಕೊನಗೆ ಸ್ಮಶಾನವೇ ಶಾಶ್ವತ ಎಂದರು.ಈ ವೇಳೆ ಜೈಬೀಮ್ ಅಖಲ ಭಾರತ ದಲಿತ ಕ್ರಿಯಾ ವೇದಿಕೆಯ ರಾಷ್ಟ್ರೀಯ ಉಪಾಧ್ಯಕ್ಷ ರಾಜಶೇಖರನ್, ಪಿವಿಸಿಎಸ್ ರಾಜ್ಯಾಧ್ಯಕ್ಷ ಅಯೂಬ್ಖಾನ್, ಪಿವಿಎಸ್.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಪ್ರಜಾಶಕ್ತಿ ಜನಪರ ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷೆ ರೇಖಾ, ಸಂಘಟನಾ ಕಾರ್ಯದರ್ಶಿ ಶೇಷಾದ್ರರಡ್ಡಿ, ಜೈಭೀಮ್ ಸಾಮ್ರಾಜ್ಯದ ಮಹಿಳಾ ಸಂಸ್ಥಾಪಕ ರಾಜ್ಯಾಧ್ಯಕ್ಷೆ ಸೌಭಾಗ್ಯ, ಪದಾಧಿಕಾರಿಗಳಾದ ನಿರ್ಮಲ, ಮಮತಾ, ಬಿಜೆಪಿಯ ಮುನಿರಾಜು, ಮುಂತಾದವರಿದ್ದರು ಭಾಗವಹಿಸಿದ್ದರು.
೦೨ ದೇವನಹಳ್ಳಿ ಚಿತ್ರಸುದ್ದಿ: ೦೧ದೇವನಹಳ್ಳಿ ತಾಲೂಕಿನ ಬಂಡಿಕೊಡಿಗೆಹಳ್ಳಿಯಲ್ಲಿ ಸ್ಮಶಾನ ವನವನ್ನು ಜೈಬೀಮ್ ಅಖಲ ಭಾರತ ದಲಿತ ಕ್ರಿಯಾ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು ಉದ್ಘಾಟಿಸಿದರು. ಉಪಾಧ್ಯಕ್ಷ ರಾಜಶೇಖರನ್, ಪಿವಿಸಿಎಸ್ ರಾಜ್ಯಾಧ್ಯಕ್ಷ ಅಯೂಬ್ಖಾನ್, ಗ್ರಾಪಂ ಕಾರ್ಯದರ್ಶಿ ಶಿವಣ್ಣ ಇತರರು ಉಪಸ್ಥಿತರಿದ್ದರು.