ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಯನ್ನು ಆರಿಸಿದರೆ ಅಭಿವೃದ್ಧಿ ಸಲೀಸು: ಶ್ರೀನಿವಾಸ್

| Published : Mar 04 2024, 01:17 AM IST

ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಯನ್ನು ಆರಿಸಿದರೆ ಅಭಿವೃದ್ಧಿ ಸಲೀಸು: ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಯನ್ನು ಆರಿಸಿದರೆ ಅಭಿವೃದ್ಧಿ ಸಲೀಸಾಗಲಿದೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ.

ಅಧಿಕಾರದಲ್ಲಿರುವ ಪಕ್ಷದ ಅಭ್ಯರ್ಥಿಯನ್ನು ಆರಿಸಿದರೆ ಅಭಿವೃದ್ಧಿ ಸಲೀಸಾಗಲಿದೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವುದರಿಂದ ಅಭಿವೃದ್ಧಿ ಅವಕಾಶವಾಗಲಿದ್ದು, ನಿಮ್ಮ ಕೆಲಸ ಕಾರ್ಯಗಳಿಗೆ ಸುಲಭವಾಗಲಿದೆ. ಅಧಿಕಾರದಲ್ಲಿಲ್ಲದ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಿದರೆ ನಿಮ್ಮ ಕೆಲಸ ಕಾರ್ಯಗಳು ಆಗುವುದಿಲ್ಲ. ಯೋಚಿಸಿ ಮತ ಚಲಾಯಿಸಿ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ತಿಳಿಸಿದರು.ನಗರದ ಖಾಸಗಿ ಸಭಾಂಗಣದಲ್ಲಿ ನಡೆದ ಪದವೀಧರರ ಸಭೆ ಹಾಗೂ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಳೆದ ೧೮ ವರ್ಷಗಳಿಂದ ನೀವು ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿದ್ದೀರಿ. ಎರಡು ಬಾರಿ ಅವರ ಪಕ್ಷವೂ ಅಧಿಕಾರದಲ್ಲಿತ್ತು. ಆದರೆ ನಿಮ್ಮ ಯಾವುದೇ ಬೇಡಿಕೆಗಳ ಸ್ಪಂದಿಸಲಿಲ್ಲ. ಪದವೀಧರರ ಸಮಸ್ಯೆ ಈಡೇರಿಸಲು ಇಚ್ಛಾಶಕ್ತಿ ಬೇಕು ಎಂದರು.

೩೫ ತಾಲೂಕು, ೫ ಜಿಲ್ಲೆಗಳನ್ನು ಪ್ರತಿನಿಧಿಸುವ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ. ನಾನು ತಾಲೂಕಿನ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ, ಶಿಕ್ಷಕರ ಸಮಸ್ಯೆ ಆಲಿಸಿದ್ದೇನೆ. ಸಾಕಷ್ಟು ವರ್ಷಗಳಿಂದ ಒಪಿಎಸ್ ಜಾರಿ, ವೇತನ ತಾರತಮ್ಯ ಮತ್ತು ಹುದ್ದೆ ನಿಯೋಜನೆ ಭತ್ಯೆ, ೨೦೧೫ ರಿಂದ ಇಲ್ಲಿವರೆಗೂ ಅನುದಾನಿತ ಶಾಲೆಗಳಿಗೆ ನೇಮಕಾತಿ ನಡೆದಿಲ್ಲದಿರುವ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿದ್ದೇನೆ.

ಅನುದಾನಿತ ಕಾಲೇಜುಗಳ ಪ್ರಾಂಶುಪಾಲರ ಹುದ್ದೆ ಭರ್ತಿಯಾಗಿಲ್ಲ. ಬದಲಿ ಶಿಕ್ಷಕರನ್ನು ನೇಮಿಸಿಕೊಂಡ ತಪ್ಪಿಗೆ ಅಲ್ಲಿನ ಶಿಕ್ಷಕರು ತಮ್ಮ ಸಂಬಳದಿಂದ ಅವರಿಗೆ ಪಾಲು ಕೊಡುತ್ತಿದ್ದಾರೆ. ೨೦೦೬ ರಿಂದ ಒಟ್ಟು ೪ ಸಾವಿರ ಶಿಕ್ಷಕರಿಗೆ ಇಂತಹ ಸಮಸ್ಯೆ ಕಾಡುತ್ತಿದೆ. ಒಪಿಎಸ್‌ ಜಾರಿಗಾಗಿ ೧೪೨ ದಿನಗಳ ಹೋರಾಟ, ಮೂವರು ಶಿಕ್ಷಕರ ಸಾವು ಸೇರಿದಂತೆ ಇತರೆ ಸಮಸ್ಯೆಗಳ ಸುಳಿಯಿಂದ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರ ನಲುಗಿದೆ. ನನ್ನನ್ನು ಬೆಂಬಲಿಸಿದರೆ ಅಧಿಕಾರದಲ್ಲಿರುವ ಸರ್ಕಾರದಿಂದ ಪರಿಹಾರ ಪಡೆಯಲು ಸಾಧ್ಯ ಎಂದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳು, ಶಿಕ್ಷಕರು, ಮತ್ತಿತರರಿದ್ದರು.