ಸಾರಾಂಶ
ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್‌ನಲ್ಲಿ ಮಾದಿಗ ಸಮುದಾಯದ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿ ಮತ್ತು ಸೇರ್ಪಡೆ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ ಭಾಗವಹಿಸಿ ಮಾತನಾಡಿದರು.
ಕಮಲಾಪುರ: ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರವಾಗಿರುವ ಕಲಬುರಗಿಯತ್ತ ಎಲ್ಲರ ಚಿತ್ತವಿದೆ. ಡಾ.ಖರ್ಗೆ ಮಾಡಿದ ಅಭಿವೃದ್ಧಿ ಕಾರ್ಯಗಳೇ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈ ಬಾರಿ ಕಲಬುರಗಿಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ ಹೇಳಿದರು.
ತಾಲೂಕಿನ ಮಹಾಗಾಂವ ಕ್ರಾಸ್‌ನಲ್ಲಿ ಮಾದಿಗ ಸಮುದಾಯದ ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿ ಮತ್ತು ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ವಲಯದ ಅಧ್ಯಕ್ಷ ನಿಜಪ್ಪ ಕಾಂಬ್ಳೆ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡದ್ದಕ್ಕೆ ಮುನಿಸಿಕೊಂಡು ಮುಖಂಡರು ಪಕ್ಷ ತೊರೆದಿದ್ದು, ಇದೀಗ ಮತ್ತೆ ಕಾಂಗ್ರೆಸ್‌ಗೆ ವಾಪಸ್ಸಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನರಿದ್ದಾರೆ. ರಾಧಾಕೃಷ್ಣ ದೊಡ್ಮನಿ ಸರಳ ಸಜ್ಜನಿಕೆಗೆ ಹೆಸರುವಾಸಿಯಾದ ವ್ಯಕ್ತಿ, ಅಭಿವೃದ್ಧಿ ಪರ ವಿಚಾರ ಧಾರೆಯುಳ್ಳವರಾಗಿದ್ದಾರೆ ಎಂದರು.ಕಲಮೂಡ ಗ್ರಾಮದ ರಾಜು ಚಕ್ರಕರ, ಸುನೀಲ ವಿಕೆ ಸಲಗರ, ರಾಜಕುಮಾರ ಬೂಂಯರ್, ದಶರಥ ಪಂಗರಗಿ, , ಸತೀಶ ಕಿಣ್ಣಿ, ಶಾಮರಾವ್ ಕಿಣ್ಣಿಸಡಕ, ಇತರರು ಪಕ್ಷಕ್ಕೆ ಸೇರ್ಪಡೆಯಾದರು. ಮುಖಂಡ ವಿಠಲ ಕಾಂಬ್ಳೆ, ಸುನೀಲ ವಿಕೆ ಸಲಗರ ಮಾತನಾಡಿದರು, ಗುರುನಾಥ ಸಿಂಗೆ, ಹಣಮಂತ ಹೊಸಮನಿ ಇತರರು ಇದ್ದರು.
;Resize=(128,128))
;Resize=(128,128))
;Resize=(128,128))