Deviating from the path of truth ensures downfall: Nagabhushana Bhat

-ಮಾತಾನುಗ್ರಹ ಧ್ಯಾನ ಕೇಂದ್ರದಲ್ಲಿ ಶ್ರೀಧನ್ವಂತರಿ ಜಯಂತಿ

ಕನ್ನಡಪ್ರಭ ವಾರ್ತೆ ಕೊಪ್ಪ

ಎಷ್ಟೇ ಬಲಶಾಲಿಗಳಾದರೂ ಸತ್ಯಮಾರ್ಗ ಬಿಟ್ಟರೆ ಅವನತಿ ಖಚಿತ ಎಂಬುದು ಪುರಾಣಗಳಿಂದ ತಿಳಿಯುತ್ತದೆ. ಎಲ್ಲರಿಗೂ ಒಳಿತನ್ನು ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಶಕಟಪುರದ ಶ್ರೀ ನಾಗಭೂಷಣ ಭಟ್ ಹೇಳಿದರು.

ತಾಲೂಕಿನ ​ಭಂಡಿಗಡಿಯ ಹಂದಿಗೋಡಿನ ಮಾತಾನುಗ್ರಹ ಧ್ಯಾನಕೇಂದ್ರದಲ್ಲಿ ಭಾನುವಾರ ಶ್ರೀ ಧನ್ವಂತರಿ ಜಯಂತಿ ಹಾಗೂ ನುಡಿ ಕನ್ನಡೋತ್ಸವ ಪ್ರಯುಕ್ತ ಭಾವಗೀತೆ ಸ್ಪರ್ಧೆ ಮತ್ತು ಪಾರಂಪರಿಕ ವೈದ್ಯ ಮಾಹಿತಿ ​ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

​ನಿವೃತ್ತ ಪ್ರಾಂಶುಪಾಲ ಬಿ.ಹೆಚ್. ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಷ್ಟೇ ಭಾಷೆಗಳನ್ನು ಕಲಿತರೂ ಮಾತೃಭಾಷೆ ಕನ್ನಡದ ಮೇಲಿನ ಅಭಿಮಾನ ಸದಾ ಇರಬೇಕು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಬಿ.ಹೆಚ್. ದಿವಾಕರ್ ಭಟ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಬಿ.ಎನ್. ಬಿಷೇಜ್ ಮಾತನಾಡಿ, ಕಸಾಪ ವತಿಯಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗುತ್ತಿರುವುದನ್ನು ಶ್ಲಾಘಿಸಿದರು.

​ಅಧ್ಯಕ್ಷತೆ ವಹಿಸಿದ್ದ ಹರಿಹರಪುರ ಹೋಬಳಿ ಕಸಾಪ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಮಾತನಾಡಿ, ಹಿತ್ತಲಿನ ಗಿಡ ಹಾಗೂ ಅಡುಗೆಮನೆಯ ಸಾಂಬಾರು ಪದಾರ್ಥಗಳೇ ಮೊದಲ ಮನೆಮದ್ದು. ಸುತ್ತಲಿನ ಔಷಧೀಯ ಸಸ್ಯಗಳ ಸದ್ಬಳಕೆಯಿಂದ ಆರೋಗ್ಯ ರಕ್ಷಣೆ ಸಾಧ್ಯ ಎಂದರು. ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನದ ಅಧ್ಯಕ್ಷ ವೈದ್ಯ ಬಿ.ಹೆಚ್. ರಾಮಚಂದ್ರ ಪಾರಂಪರಿಕ ವೈದ್ಯದ ಅಗತ್ಯತೆ ಕುರಿತು ವಿವರಿಸಿದರು.

ಪ್ರಧಾನ ಸಂಚಾಲಕ ಶುಕುರ್ ಅಹಮದ್, ವೈದ್ಯರಾದ ಸುಬ್ರಮಣ್ಯ, ಅಬೂಬಕ್ಕರ್ ಹಾಗೂ ಶಂಕರಪ್ಪ ಗೌಡರು ಉಪಯುಕ್ತ ಮಾಹಿತಿ ಹಂಚಿಕೊಂಡರು.

​ಭಾವಗೀತೆ ಸ್ಪರ್ಧಾ ವಿಜೇತರು: ​ಸಾರ್ವಜನಿಕ ವಿಭಾಗ: ಶ್ರೀಮತಿ ನಾಗರತ್ನ (ಪ್ರಥಮ), ಶ್ರೀಮತಿ ಕಸ್ತೂರಿ (ದ್ವಿತೀಯ). ​ವಿದ್ಯಾರ್ಥಿ ವಿಭಾಗ: ಐಸಿರಿ (ಪ್ರಥಮ), ನಿಸರ್ಗ (ದ್ವಿತೀಯ), ಶಾಶ್ವತಿ (ತೃತೀಯ). ​ಮಹಿಮಾ ಪ್ರಾರ್ಥಿಸಿ, ರವಿಪ್ರಸಾದ್ ಸ್ವಾಗತಿಸಿದರು. ಕಸಾಪ ಭಂಡಿಗಡಿ ಗ್ರಾಮ ಘಟಕದ ಅಧ್ಯಕ್ಷೆ ಶ್ರೀಮತಿ ಅಸ್ಮಾ ಪ್ರಾಸ್ತಾವಿಕ ನುಡಿಗಳೊಂದಿಗೆ ನಿರೂಪಿಸಿದರು. ಸಫಾ ಶುಕುರ್ ಅಹಮದ್ ವಂದಿಸಿದರು. ಸಭೆಯಲ್ಲಿ ವಿಶ್ವನಾಥ್ ಅಂಬಳಿಕೆ, ಸರಳ ಶೇಷಾದ್ರಿ, ಮನ್ವಿತ್ ಹಿರಣ್ಯ, ಶೃತಿ, ನಾಗಭೂಷಣ ಭಟ್, ಶಿವರಾಜ್, ಜಾಹಿದ್, ಸೌಭಾಗ್ಯ ಇದ್ದರು.