ಜೋಯಿಡಾ ತಾಲೂಕಿನ ಬಾಮಣಗಿಯ ಹಸನ್ ಸಾಬ ತಂದೆ ರಾಜೇಸಾಬ ಅಮೀನಗಡ, ಧಾರವಾಡದ ಅಮ್ಮಿನಬಾವಿಯ ಮುಬಾರಕ್ ಮಾಸಿಮ್ ಮಕಾನದಾರ, ಮಹಮ್ಮದ ಖಾಸಿಂ ಸುಭಾನಿ ದಂಡಿನವರ ಹಾಗೂ ಅಬ್ಬಾಸಅಲಿ ಫೀರಸಾಬ ಮಕಾನದಾರ ಬಂಧಿತರು.
ಯಲ್ಲಾಪುರ: ತಾಲೂಕಿನ ಬಾಳಗಿಮನೆ ಗ್ರಾಮದ ಮೂಲೆಗುಂಡ್ಕಲ್ ನಲ್ಲಿ ಮನೆಯವರನ್ನು ಬೆದರಿಸಿ, ಹಣ, ಆಭರಣಗಳನ್ನು ದೋಚಿದ್ದ ನಾಲ್ವರು ದರೋಡೆಕೋರರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.ಜೋಯಿಡಾ ತಾಲೂಕಿನ ಬಾಮಣಗಿಯ ಹಸನ್ ಸಾಬ ತಂದೆ ರಾಜೇಸಾಬ ಅಮೀನಗಡ, ಧಾರವಾಡದ ಅಮ್ಮಿನಬಾವಿಯ ಮುಬಾರಕ್ ಮಾಸಿಮ್ ಮಕಾನದಾರ, ಮಹಮ್ಮದ ಖಾಸಿಂ ಸುಭಾನಿ ದಂಡಿನವರ ಹಾಗೂ ಅಬ್ಬಾಸಅಲಿ ಫೀರಸಾಬ ಮಕಾನದಾರ ಬಂಧಿತರು.ಇವರು ಕಳೆದ ನ. 5ರಂದು ರಾತ್ರಿ ಮೂಲೆಗುಂಡ್ಕಲ್ ನ ರಾಮಚಂದ್ರ ಮಹಾಬಲೇಶ್ವರ ಭಟ್ಟ ಅವರ ಮನೆಗೆ ಗುರುವಾರ ರಾತ್ರಿ ಬಂದ ಸುಲಿಗೆಕೋರರು, ಮನೆಯಲ್ಲಿದ್ದವರಿಗೆ ಚಾಕು ತೋರಿಸಿ ಹೆದರಿಸಿ ಒಳಗೆ ನುಗ್ಗಿದ್ದರು. ಮನೆಯಲ್ಲಿದ್ದ ಬಂಗಾರದ ಕರಿಮಣಿ ಸರ, ಕಿವಿಯೋಲೆ, ಲಾಕೆಟ್, ಉಂಗುರ, ಬಳೆ ಸೇರಿದಂತೆ 56 ಗ್ರಾಂ ಬಂಗಾರ, ಎರಡು ಬೆಳ್ಳಿಯ ಬಟ್ಟಲು, ಎರಡು ಮೊಬೈಲ್ ಗಳು, 12 ಸಾವಿರ ರು. ನಗದು ಹಾಗೂ ಟಿವಿಎಸ್ ಅಪಾಚೆ ಬೈಕನ್ನು ಕದ್ದೊಯ್ದಿದ್ದರು. ಬೈಕ್ಅನ್ನು ನಿಸರ್ಗಮನೆ ಸಮೀಪ ಕಾಡಿನಲ್ಲಿ ಬಿಟ್ಟು ಓಡಿ ಹೋಗಿದ್ದರು.
ಪೊಲೀಸರು ಸಣ್ಣ ಸುಳಿವಿನ ಜಾಡು ಹಿಡಿದು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಕಾರು, ಎರಡು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ,ಡಿವೈಎಸ್ಪಿ ಗೀತಾ ಪಾಟೀಲ ಮಾರ್ಗದರ್ಶನದಲ್ಲಿ ಸಿಪಿಐಗಳಾದ ಸುರೇಶ ಜಿ. ಕುಂಬಾರ, ಶ್ರೀಧರ ಎಸ್.ಆರ್., ಪಿಎಸ್ಐಗಳಾದ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ, ಮಹಾವೀರ ಕಾಂಬಳೆ, ಗಣಪತಿ ಆರ್ ಶೇರುಗಾರ, ಸಿಬ್ಬಂದಿ ಮಹಮ್ಮದ್ ಶಫೀ ಶೇಖ್, ಮಹಾವೀರ ಡಿ.ಎಸ್., ಸಂತೋಷ ಬಾಳೇಕೇರ, ಬಸವರಾಜ ಡಿ.ಕೆ., ಶ್ರೀಕಾಂತ ಕಟಬರ್, ಮಾರುತಿ ಕೆ.ಎಚ್., ನಾಗರಾಜ ನಾಯ್ಕ, ಸುರೇಶ ಕಂಟ್ರ್ಯಾಕ್ಟರ್, ಪರಶುರಾಮ ದೊಡ್ಡನಿ, ಪರಮೇಶ್ವರ ಎಸ್.ಕೆ., ರಾಜಪ್ಪ ಧನಗರ್, ವಿಶ್ವನಾಥ ಜಾಯನಗೌಡ್ರ, ಮಹೇಶ ಸಾವಸಂಗಿ, ಗಂಗಾಧರ ಚಲವಾದಿ, ದಶರಥ, ರೇಣಾ ಎಂ.ಎಸ್., ಕಾರವಾರದ ತಾಂತ್ರಿಕ ವಿಭಾಗದ ಸಿಬ್ಬಂದಿ ಉದಯ ಗುನಗ, ಬಬನ್ ಕದಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.