ಚಿಕ್ಕಮಗಳೂರುಕಾಫಿನಾಡಿನ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಶ್ರೇಣಿ ಬಿಂಡಿಗ ದೇವೀರಮ್ಮ ಬೆಟ್ಟದಲ್ಲಿ ಭಾನುವಾರ ಭಕ್ತಿಭಾವ, ಸಂಭ್ರಮ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ದೇವೀರಮ್ಮ ದೀಪೋತ್ಸವ ಸಂಪನ್ನಗೊಂಡಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರ ಆಗಮನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಫಿನಾಡಿನ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಶ್ರೇಣಿ ಬಿಂಡಿಗ ದೇವೀರಮ್ಮ ಬೆಟ್ಟದಲ್ಲಿ ಭಾನುವಾರ ಭಕ್ತಿಭಾವ, ಸಂಭ್ರಮ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ದೇವೀರಮ್ಮ ದೀಪೋತ್ಸವ ಸಂಪನ್ನಗೊಂಡಿತು.
ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ದೇವೀರಮ್ಮ ತಾಯಿ ದರ್ಶನ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. ದೀಪಾವಳಿ ಹಬ್ಬದ ಜೊತೆಗೆ ವಾರಾಂತ್ಯದ ರಜೆ ಇದ್ದ ಕಾರಣ ಯುವಕರ ತಂಡಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬೆಟ್ಟದತ್ತ ಹರಿದುಬಂದಿದ್ದರು.ಭಾನುವಾರ ಬೆಳಗಿನ ಜಾವ 4 ಗಂಟೆಯಿಂದಲೇ ಬೆಟ್ಟ ಹತ್ತಲು ಭಕ್ತರು ಆರಂಭಿಸಿದ್ದರು. ಬೆಳಗ್ಗೆ 6 ಗಂಟೆಯಿಂದ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸುರಕ್ಷತೆ ದೃಷ್ಟಿಯಿಂದ ಮಧ್ಯಾಹ್ನ 3 ಗಂಟೆಗೆ ಬೆಟ್ಟ ಏರುವ ಪ್ರವೇಶ ದ್ವಾರವನ್ನು ಬಂದ್ ಮಾಡಲಾಯಿತು. ಮಾಣಿಕ್ಯಧಾರಾ, ಅರಿಶಿನಗುಪ್ಪೆ ಹಾಗೂ ಮಲ್ಲೇನಹಳ್ಳಿ ಭಾಗಗಳಿಂದ ಭಕ್ತರು ಬೆಟ್ಟವನ್ನೇರಿದರು.ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾನೆಯಿಂದಲೇ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದವು. ಬೆಟ್ಟದ ಹಾದಿಯಲ್ಲಿ ಭಕ್ತರ ಸುರಕ್ಷತೆಗಾಗಿ ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಇತರ ಸಿಬ್ಬಂದಿ ನಿಯೋಜಿಸಲಾಗಿತ್ತು. ಮಾಣಿಕ್ಯಧಾರಾ ಭಾಗದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆಗಾಗಿ ಹಗ್ಗ ಸೇರಿದಂತೆ ಅಗತ್ಯ ಪರಿಕರಗಳನ್ನು ಸಿದ್ಧವಾಗಿಡಲಾಗಿತ್ತು.
ಭಾನುವಾರ ಸಂಜೆ 7 ಗಂಟೆಗೆ ಬೆಟ್ಟದ ತುದಿಯಲ್ಲಿ ದೇವಿ ಗೋಪುರದ ಹಿಂಭಾಗದಲ್ಲಿ ಕರ್ಪೂರ, ಎಣ್ಣೆ, ಬೆಣ್ಣೆ ಹಾಗೂ ತುಪ್ಪ ವನ್ನು ಬಳಸಿ ಸವದೆ ಹಾಕಿ ದೀಪ ಬೆಳಗಿಸುವ ಮೂಲಕ ದೀಪೋತ್ಸವ ಆಚರಿಸಲಾಯಿತು. ಸಾಂಪ್ರದಾಯಿಕ ವಿಧಿವಿಧಾನ ಗಳು ಪೂರ್ಣಗೊಂಡ ಬಳಿಕ ಉತ್ಸವಕ್ಕೆ ತೆರೆ ಬಿದ್ದಿತು. ಬೆಟ್ಟದ ತುದಿಯಲ್ಲಿ ಬೆಳಗಿದ ದೀಪವನ್ನು ಜಿಲ್ಲೆಯ ವಿವಿಧ ಗ್ರಾಮಗಳ ಜನರು ಭಕ್ತಿಯಿಂದ ವೀಕ್ಷಿಸಿದರು. ಬಳಿಕ ಮನೆಮನೆಗಳಲ್ಲಿ ದೀಪ ಬೆಳಗಿಸಿ ದೀಪಾವಳಿ ಹಬ್ಬವನ್ನು ಆಚರಿಸಿದರು.--ಬಾಕ್ಸ್-----
ಪರಿಸರ ಕಾಳಜಿ ಮೆರೆದ ಯುವಕರುದೇವೀರಮ್ಮ ಬೆಟ್ಟಕ್ಕೆ ಆಗಮಿಸಿದ್ದ ಯುವಕರ ತಂಡವೊಂದು ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯಿತು. ಬೆಟ್ಟ ಹತ್ತುವಾಗ ಭಕ್ತರು ಅಲ್ಲಲ್ಲಿ ಎಸೆದಿದ್ದ ಖಾಲಿ ನೀರಿನ ಬಾಟಲಿಗಳನ್ನು ಸಂಗ್ರಹಿಸಿ ಕೆಳಗೆ ಹೊತ್ತು ತರುವ ಮೂಲಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಅಲ್ಲದೆ, ಬೆಟ್ಟದ ಮೇಲೆ ಪ್ಲಾಸ್ಟಿಕ್ ಕವರ್ ಹಾಗೂ ಖಾಲಿ ಬಾಟಲಿ ಗಳನ್ನು ಎಸೆಯದಂತೆ ಭಕ್ತರಲ್ಲಿ ಮನವಿ ಮಾಡುತ್ತಿದ್ದರು. ಯುವಕರ ಈ ಪರಿಸರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.---ಬಾಕ್ಸ್---
ನೀರು, ಮಜ್ಜಿಗೆ, ಜ್ಯೂಸ್ಗೆ ದುಬಾರಿ ಬೆಲೆ:ಬೆಟ್ಟ ಹತ್ತುವ ಮಾರ್ಗದ ಕೆಲವು ಸ್ಥಳಗಳಲ್ಲಿ ನೀರು, ಜ್ಯೂಸ್, ಮಜ್ಜಿಗೆ ಹಾಗೂ ಸೌತೆಕಾಯಿ ಮಾರಾಟ ನಡೆಯಿತು. ಆದರೆ, ವ್ಯಾಪಾರಿಗಳು ನಿಗದಿತ ಬೆಲೆಗಿಂತ ₹10-15 ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದ ದೃಶ್ಯ ಕಂಡುಬಂತು. ದೀರ್ಘ ಹಾದಿ ಕ್ರಮಿಸಿ ದಣಿದ ಭಕ್ತರು ಅನಿವಾರ್ಯವಾಗಿ ಹೆಚ್ಚಿನ ಬೆಲೆ ನೀಡಿ ಖರೀದಿಸುವಂತಾಯಿತು. -- ಬಾಕ್ಸ್---
ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರಿಗೆ ಗಾಯದೇವೀರಮ್ಮ ಬೆಟ್ಟದಿಂದ ಜಾರಿ ಬಿದ್ದು ಶನಿವಾರ ಸಂಜೆ ಮತ್ತು ಭಾನುವಾರ ಬೆಳಗ್ಗೆ ಯುವಕರು ಗಾಯ ಮಾಡಿಕೊಂಡ ಘಟನೆ ನಡೆದಿದೆ.
ಶನಿವಾರ ಬಿದ್ದ ಯುವಕ ತರೀಕೆರೆ ಮೂಲದ ದರ್ಶನ್ (21), ಇನ್ನು ಭಾನುವಾರ ಬಿದ್ದ ಯುವಕ ಮಂಡ್ಯ ಮೂಲದ ಸುನೀಲ್(32) ಎಂದು ತಿಳಿದಿದೆ.ಗಾಯಾಳುಗಳನ್ನು ಬೆಟ್ಟದಿಂದ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಬೆಟ್ಟದ ತುದಿಯಿಂದ ಜಾರಿ ಬಿದ್ದಿದ್ದಾರೆ. ಘಟನೆಯಲ್ಲಿ ಯುವಕರ ಕಾಲು ಹಾಗೂ ತಲೆಗೆ ಗಂಭೀರ ಗಾಯಗಳಾಗಿವೆ.
ಸುಮಾರು 3,500 ಅಡಿ ಎತ್ತರದ ಬೆಟ್ಟದ ಪ್ರದೇಶದಲ್ಲಿ ಯುವಕ ಗಾಯಗೊಂಡಿರುವ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡ ಯುವಕನನ್ನು ಸುರಕ್ಷಿತವಾಗಿ ಕೆಳ ಭಾಗಕ್ಕೆ ಹೊತ್ತು ತಂದು ಬಳಿಕ ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಾಯಾಳುವಿಗೆ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.-- ಬಾಕ್ಸ್ ---ಡಾ.ಸಿ.ಟಿ.ರವಿ ಅವರಿಂದ ದೇವಿರಮ್ಮನ ದರ್ಶನಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮಲ್ಲೇನಹಳ್ಳಿಯಿಂದ ಪಾದಯಾತ್ರೆ ಮೂಲಕ ಬೆಟ್ಟ ಏರಿದ ವಿಧಾನಪರಿಷತ್ತು ಸದಸ್ಯ ಡಾ.ಸಿ.ಟಿ.ರವಿ ದೇವಿರಮ್ಮಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು. ಇನ್ನೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಯಿಂದ ಭಕ್ತರಿಗೆ ಉಚಿತವಾಗಿ ವಿತರಣೆ ಮಾಡುತ್ತಿದ್ದ ಪಾನಕ ವಿತರಣೆ ಕೇಂದ್ರದಲ್ಲಿ ಕೆಲಕಾಲ ಭಕ್ತರಿಗೆ ಪಾನಕ ವಿತರಣೆ ಮಾಡಿದರು.
....ಬಾಕ್ಸ್.....ದೇವಿರಮ್ಮ ಬೆಟ್ಟದಲ್ಲಿ ಮುಂದಿನಮುಖ್ಯಮಂತ್ರಿ ಸಿ.ಟಿ.ರವಿ: ಜೈಕಾರದೇವಿರಮ್ಮದ ದರ್ಶನಕ್ಕೆ ವಿಧಾನಪರಿಷತ್ತಿನ ಸದಸ್ಯ ಡಾ.ಸಿ.ಟಿ.ರವಿ ಭೇಟಿನೀಡಿದ ವೇಳೆ ಅಭಿಮಾನಿಗಳೊಂದಿಗೆ ಫೋಟೊ ತೆಗೆದುಕೊಳ್ಳುವ ವೇಳೆ ಭಕ್ತರ ಸಾಲಿನಲ್ಲಿ ನಿಂತುಕೊಂಡಿದ್ದ ಅಭಿಮಾನಿಗಳು ಮುಂದಿನ ಮುಖ್ಯ ಮಂತ್ರಿ ಸಿ.ಟಿ.ರವಿ ಎಂಬ ಘೋಷಣೆ ಹಾಕಿದರು.--ಬಾಕ್ಸ್--- ಡಿ ಬಾಸ್ ಫೋಟೋ ಹಿಡಿದು ದರ್ಶನಕ್ಕೆ ಬಂದ ಭಕ್ತದೇವಿರಮ್ಮ ದೇವಿ ದರ್ಶನಕ್ಕೆ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಫೋಟೋ ಹಿಡಿದುಕೊಂಡು ದರ್ಶನಕ್ಕೆ ಆಗಮಿಸಿದ್ದು ಕಂಡು ಬಂತು.