ಸಾರಾಂಶ
- ಭಕ್ತರಿಂದ ಪ್ರಭು ಶ್ರೀರಾಮನಿಗೆ ವಿಭಿನ್ನ ಸೇವೆ ಸಮರ್ಪಣೆ । ಬುಟೆಲ್‌ನಲ್ಲಿ ದರ್ಶನ್ ಪವಾರ್ ರಾಮ ಜನ್ಮಭೂಮಿಗೆ
ಕನ್ನಡಪ್ರಭ ವಾರ್ತೆ ದಾವಣಗೆರೆಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಷ್ಠಾಪನೆ, ಶ್ರೀರಾಮ ಮಂದಿರ ಉದ್ಘಾಟನೆಯ ದಿನಗಳು ಸಮೀಪಿಸುತ್ತಿರುವ ಬೆನ್ನಲ್ಲೇ ನಗರ, ಜಿಲ್ಲೆಯಲ್ಲೂ ರಾಮನಾಮ ಸ್ಮರಣೆ, ಪೂಜೆ, ಪ್ರಾರ್ಥನೆ, ಹೋಮ, ಅಯೋಧ್ಯೆಗೆ ಪ್ರವಾಸ, ಕರ ಸೇವಕರಿಗೆ ಕೈಲಾದ ನೆರವು ಹೀಗೆ ಭಕ್ತಾದಿಗಳು ತಮ್ಮ ತಮ್ಮ ಭಕ್ತಿ ಸಮರ್ಪಣೆಗೆ ಮುಂದಾಗಿದ್ದಾರೆ.ನಗರದ ಬಿಜೆಪಿ ಹಿರಿಯ ಮುಖಂಡ, ಸಂಘ ಪರಿವಾರ ಮೂಲದ ಎಂ.ಪಿ.ಕೃಷ್ಣಮೂರ್ತಿ ಪವಾರ್ ಪುತ್ರ, ರಾಮಭಕ್ತನಾದ ದರ್ಶನ್ ಕೆ.ಪವಾರ್ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ದಾವಣಗೆರೆಯಿಂದ ಹುಬ್ಬಳ್ಳಿ ಮಾರ್ಗವಾಗಿ ಅಯೋಧ್ಯೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ನಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಪ್ರಭು ಶ್ರೀರಾಮಚಂದ್ರನ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ನಗರದಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ದರ್ಶನ್ ಪವಾರ್‌ಗೆ ತಂದೆ ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗದ ಅಧ್ಯಕ್ಷರೂ ಎಂ.ಪಿ.ಕೃಷ್ಣಮೂರ್ತಿ ಪವಾರ್, ತಾಯಿ ಲಕ್ಷ್ಮೀ ಪವಾರ್, ಕುಟುಂಬ ವರ್ಗ, ಎಕೆ ಫೌಂಡೇಷನ್ ಅಧ್ಯಕ್ಷ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ, ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ ಪೂಜಾರಿ, ಆರ್.ಪ್ರತಾಪ್, ಗೋಪಾಲ ರಾವ್ ಸಾವಂತ್, ಶಂಕರಗೌಡ ಬಿರಾದಾರ್, ಪ್ರವೀಮ ಜಾಧವ್, ಪಾಲಿಕೆ ಸದಸ್ಯ ಆರ್.ಎಲ್.ಶಿವಪ್ರಕಾಶ, ಯುವ ಮುಖಂಡ ನವೀನ, ಸೇರಿದಂತೆ ಹಿರಿ-ಕಿರಿಯ ಕಾರ್ಯಕರ್ತರು ಶುಭಾರೈಸಿ, ಅಯೋಧ್ಯೆಗೆ ಬೀಳ್ಕೊಟ್ಟರು.ಮುಖಂಡರಾದ ಜಿ.ಕೆ.ಶಿವಶಂಕರ, ಸಂತೋಷ ಪೈಲ್ವಾನ್, ಹರೀಶ ಪವಾರ್, ತಿಪ್ಪೇಶ ರಾವ್ ಚೌಹಾಣ್, ಬಿ.ನೀಲಪ್ಪ, ವಿಹಿಂಪ ರವೀಂದ್ರ ಜಿ, ಪ್ರವೀಣ ಸೇರಿದಂತೆ ಅನೇಕರು ಅಯೋಧ್ಯೆಗೆ ಬುಲೆಟ್‌ನಲ್ಲಿ ಪ್ರವಾಸ ಕೈಗೊಂಡ ದರ್ಶನ್ ಕೃಷ್ಣಮೂರ್ತಿ ಪವಾರ್‌ಗೆ ಶುಭಾರೈಸಿ, ಬೀಳ್ಕೊಟ್ಟರು. ಇದೇ ವೇಳೆ 90ರ ದಶಕದಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ. ನಂತರ ಕೋಮು ಗಲಭೆಯಲ್ಲಿ ಹುತಾತ್ಮರಾದ ಚಂದ್ರಶೇಖರ ಸಿಂಧೆ ಕುಟುಂಬಕ್ಕೆ 10 ಸಾವಿರ ರು., ಆಗಿನ ಗೋಲಿಬಾರ್‌ನಲ್ಲಿ ನೋವುಂಡಿದ್ದ ಶೈಲೇಶ್ ಕುಮಾರ್ ರಿಗೆ 5 ಸಾವಿರ ರು., ಸೆರೆಮನೆ ವಾಸ ಅನುಭವಿಸಿದ್ದ ಮಟ್ಟಿಕಲ್ಲು ವೀರಭದ್ರ ಸ್ವಾಮಿಗೆ 5 ಸಾವಿರ ರು. ನಗದು ನೀಡಿ, ಗೌರವ ಸಮರ್ಪಿಸಲಾಯಿತು.
ಶ್ರೀರಾಮ ಜಯ ಜಯರಾಮ ತಾರಕ ಮಂತ್ರ ಜಪ
ದಾವಣಗೆರೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಮಂದಿರ ಉದ್ಘಾಟನೆ, ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದ ಕೆ.ಬಿ.ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಒಂದು ಲಕ್ಷ ಶ್ರೀರಾಮ ನಾಮ ಶ್ರೀರಾಮ ಜಯರಾಮ ಜಯ ಜಯರಾಮ ತಾರಕ ಮಂತ್ರ ಜಪ ಸಮರ್ಪಣಾ ಹೋಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಯಾವುದೇ ಅಡೆತಡೆ ಇಲ್ಲದೇ, ಸುಗಮವಾಗಿ ನೆರವೇರಲೆಂದು ಸಂಕಲ್ಪ ಮಾಡಿ ಶ್ರೀರಾಯರ ಮಠದಲ್ಲಿ ಶ್ರೀ ಗುರುರಾಜ ಸೇವಾ ಸಂಘದಿಂದ ಒಂದು ಲಕ್ಷ ರಾಮ ನಾಮ ಜಪ ಸಮರ್ಪಣಾ ಹೋಮವನ್ನು ನಡೆಸಿ, ತುಪ್ಪದ ರೂಪದಲ್ಲಿ ರಾಮನಾಮ ಜಪವನ್ನು ಹೋಮದಲ್ಲಿ ಸಮರ್ಪಿಸಲಾಯಿತು.ರಾಮ ಮಂದಿರ ಉದ್ಘಾಟನೆ ದಿನಾಂಕ ನಿಗದಿಯಾದ ದಿನದಿಂದ 60ಕ್ಕೂ ಹೆಚ್ಚು ಜನರಿಗೆ ಕೋಟಿ ರಾಮನಾಮ ಜಪ ಆರಂಭಿಸಲು ಗುರುರಾದ ಸೇವಾ ಸಂಘ ದಿಂದ ಸೂಚಿಸಲಾಗಿತ್ತು. ಅದರಂತೆ ಬುಧವಾರ ಒಂದು ಲಕ್ಷ ರಾಮ ನಾಮ ಜಪದ ಸಮರ್ಪಣಾ ಹೋಮವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸ ಲಾಯಿತು. ತಾರಕ ಮಂತ್ರದ ಜಪ ಹಾಗೂ ಜಪದ ಸಮರ್ಪಣಾ ಹೋಮವು ಕಡೂರು ಪ್ರಾಣೇಶಾ ಚಾರ್, ಕಂಪ್ಲಿ ಗುರುರಾಜಾಚಾರ್, ಆನಂದ ತೀರ್ಥಾಚಾರ್, ವಾಚಸ್ಪತಿ ಆಚಾರ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಶಶಿಕಾಂತ್, ಗೌರವಾಧ್ಯಕ್ಷ ಸತ್ಯನಾರಾಯಣರಾವ್, ಭಕ್ತರು, ಮಹಿಳಾ ಭಕ್ತರ ಸಮ್ಮುಖದಲ್ಲಿ ನಡೆಯಿತು.