ನ್ಯಾಮತಿಯಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಭಕ್ತರ ಸಂಭ್ರಮ

| Published : Jan 23 2024, 01:49 AM IST

ನ್ಯಾಮತಿಯಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಭಕ್ತರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ ಗಂಗಾ ಪೂಜೆ, ಶ್ರೀರಾಮತಾರಕ ಹೋಮ, ಆಂಜನೇಯ ಮೂರ್ತಿ, ರಾಮನ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿ ದೇಗುಲದ ಮುಂಭಾಗದಲ್ಲಿ ಬಾಳೆ ಕಂದಿನಿಂದ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ರಾಮನ ಮೂರ್ತಿ ಕೂರಿಸಿ ಪೂಜಿಸಿದರು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರು ಸಂಭ್ರಮಿಸಿದರು.

ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಪಟ್ಟಣದ ಆಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ ಗಂಗಾ ಪೂಜೆ, ಶ್ರೀರಾಮತಾರಕ ಹೋಮ, ಆಂಜನೇಯ ಮೂರ್ತಿ, ರಾಮನ ಉತ್ಸವ ಮೂರ್ತಿಗೆ ವಿಶೇಷ ಅಭಿಷೇಕ ಪೂಜೆ ಸಲ್ಲಿಸಿ ದೇಗುಲದ ಮುಂಭಾಗದಲ್ಲಿ ಬಾಳೆ ಕಂದಿನಿಂದ ನಿರ್ಮಿಸಿರುವ ಮಂಟಪದಲ್ಲಿ ಶ್ರೀ ರಾಮನ ಮೂರ್ತಿ ಕೂರಿಸಿ ಪೂಜಿಸಿದರು. ಭಕ್ತರ ಸಮೂಹವೂ ಪೂಜಿಸಲು ಸುಮಂಗಲಿಯರು ಆಗಮಿಸಿ ಶ್ರೀ ರಾಮನಿಗೆ ಭಕ್ತಿ ಸಮರ್ಪಿಸಿದರು.

ಶ್ರೀ ಪೇಟೆ ಬಸವೇಶ್ವರ ದೇಗುಲ ಹಾಗೂ ಶ್ರೀ ವಿಠಲ ಪಾಂಠುರಂಗ ದೇವಾಲಯದಲ್ಲೂ ಶ್ರೀ ರಾಮ ಮೂರ್ತಿಗೆ ಪೂಜೆ ಸಲ್ಲಿಸಿ ವಿಠಲ ರುಕುಮಾಯಿ ಭಕ್ತ ವೃಂದದವರು ಪಟ್ಟಣದ ಪ್ರಮುಖ ಬೀದಿಯಲ್ಲಿ ತಮಟೆ ಕಂಸಾಳೆಯೊಂದಿಗೆ ಶ್ರೀ ರಾಮ್‌, ಜೈ ರಾಮ್‌, ಜೈ ಜೈ ರಾಮ್‌, ಶ್ರೀ ರಾಮ ಎನ್ನುತ್ತಾ ಸಾಗಿದರು.

ಸುರಹೊನ್ನೆ ಗ್ರಾಮದ ಆಂಜನೇಯ ದೇಗುಲ, ಗೋವಿನಕೋವಿ ಗ್ರಾಮದ ತುಂಗಾ ಭದ್ರ ನಧಿಯ ತಟದಲ್ಲಿರುವ ಗೆಡ್ಡೆರಾಮೇಶ್ವರ, ತೀರ್ಥಗಿರಿಯ ತೀರ್ಥರಾಮೇಶ್ವರ ಶಿವಲಿಂಗನ ಮೂರ್ತಿಗೆ ವಿಶೇಷ ಪೂಜೆ, ಕೆಂಚಿಕೊಪ್ಪ ಗ್ರಾಮದ ರಾಮನ ಮಂದಿರದಲ್ಲಿ ಶ್ರೀರಾಮನ ಭಾವ ಚಿತ್ರವನ್ನಿಟ್ಟು ಪೂಜಿಸಿದರು.

ದೇವಾಲಯಗಳ ಟ್ರಸ್ಟ್‌, ಸಮಿತಿ, ಕಮಿಟಿ ವೃಂದದವರು ತಮ್ಮ ಬಿಳಿ ಶರ್ಟ್, ಬಿಳಿ ಪಂಚೆ, ಕೇಸರು ಶಾಲಿನಿಂದ ಕಂಗೋಳಿಸಿ ನೆರದ ಭಕ್ತ ಸಮೂಹಕ್ಕೆ ಅನ್ನ ಸಂತರ್ಪಣೆ ಮಾಡಿದರು.