ಶಂಕರೇಶ್ವರ ಜಾತ್ರೆಯನ್ನು ಸಂಭ್ರಮಿಸಿದ ಭಕ್ತರು

| Published : Sep 01 2025, 01:03 AM IST

ಸಾರಾಂಶ

ತಾಲೂಕಿನ ಯಡಿಯೂರು ಮತ್ತು ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರನ ಬೆಟ್ಟದಲ್ಲಿ ಭಾನುವಾರ ಸಂಭ್ರಮ ಸಡಗರ ಹಾಗೂ ಭಕ್ತಿಭಾವದೊಂದಿಗೆ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ ತಾಲೂಕಿನ ಯಡಿಯೂರು ಮತ್ತು ಮಂಗಲ ಗ್ರಾಮಗಳ ನಡುವೆ ಇರುವ ಶಂಕರೇಶ್ವರನ ಬೆಟ್ಟದಲ್ಲಿ ಭಾನುವಾರ ಸಂಭ್ರಮ ಸಡಗರ ಹಾಗೂ ಭಕ್ತಿಭಾವದೊಂದಿಗೆ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಿತು.ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಾದ ಯಡಿಯೂರು, ಮಂಗಲ, ಮಹಾಂತಾಳಪುರ, ಹುಲ್ಲೇಪುರ, ಮಂಗಲ ಹೊಸೂರು ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಬೆಳಗ್ಗೆಯಿಂದಲೇ ಬೆಟ್ಟದ ಮೇಲಿರುವ ಶಂಕರೇಶ್ವರ ದೇವಾಲಯಲ್ಲಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು, ಮಹಾಮಂಗಳಾರತಿ ಮಾಡಿದ ನಂತರ ದೇವಸ್ಥಾನದ ಸುತ್ತಲೂ ದೇವರ ಉತ್ಸವ ನಡೆಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ತಪ್ಪಲಿನಲ್ಲಿರುವ ತಪ್ಪಲಿನಲ್ಲಿರುವ ಗಣೀಶ. ಬಸವೇಶ್ವರ .ವೀರಭದ್ರೇಶ್ವರ ದೇವರುಗಳಿಗೆ ಪೊಜೆ ನೆರವೇರಿಸಲಾಯಿತು ಸಿಂಗಾರ ಮಾಡಲಾಗಿತ್ತು. ಯಡಿಯೂರು ಗ್ರಾಮಸ್ಥರು ಶಂಕರೇಶ್ವರ ಉತ್ಸವ ಮೂರ್ತಿಯನ್ನು ತಮ್ಮ ಗ್ರಾಮದಿಂದ ಬೆಟ್ಟದ ತಪ್ಪಲಿನಲ್ಲಿರುವ ವೀರಭದ್ರೇಶ್ವರ ದೇವಾಲಯದ ಮುಂಭಾಗದಲ್ಲಿ ಬಸವ ವಾಹನದ ಮೇಲೆ ಉತ್ಸವ ಮೂರ್ತಿಯನ್ನು ಕುರಿಸಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ನಂದಿಧ್ವಜ ದೂಂದಿಗೆ ತಮ್ಮ ಗ್ರಾಮಕ್ಕೆ ತೆರಳಿ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಮುಂಗಲ ಗ್ರಾಮಸ್ಥರು ತಮ್ಮ ಗ್ರಾಮದಿಂದ ಶಂಕರೇಶ್ವರಸ್ವಾಮಿ ಮತ್ತು ಬೀರೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ವೀರಭದ್ರೇಶ್ವರ ದೇವಾಲಯ ದಲ್ಲಿ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ನಂತರ ವೀರಭದ್ರೇಶ್ವರ ದೇವಾಲಯ ಮುಂಭಾಗದಲ್ಲಿ ಬೀರೇಶ್ವರ ದೇವರನ್ನು ತಲೆಯ ಮೇಲೆ ಹೊತ್ತು ಕುಣಿಯುವ ದೃಶ್ಯ ಭಕ್ತರಿಗೆ ಆಕರ್ಷಣೆಯಾಗಿತ್ತು. ಉತ್ಸವ ಮೂರ್ತಿಗಳೂಂದಿಗೆ ತಮ್ಮ ಗ್ರಾಮಕ್ಕೆ ತೆರಳಿ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಣೇಶ ಮೂರ್ತಿ ಮತ್ತು ಶಂಕರೇಶ್ವರ.ಬೀರೇಶ್ವರ ದೇವರುಗಳನ್ನು ಮಂಗಳವಾಧ್ಯಗಳೊಂದಿಗೆ ಮೆರವಣಿಗೆ ಮಾಡಿದರು,

ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಾಹನಗಳ ಸಂಚಾರಕ್ಕೆ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ಬಂದೋ ಬಸ್ತು ಮಾಡಿದ್ದರು, ಜಾತ್ರೆಯ ದಿನ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವುದು ವಿಶೇಷ. ರಾಜ್ಯದ ವಿವಿಧೆಡೆಗಳಿಂದ ನೂರಾರು ಭಕ್ತರು ಆಗಮಿಸಿದ್ದರು.

ಇಂದು ಚಿಕ್ಕ ಜಾತ್ರೆ:ಜಾತ್ರೆಯಲ್ಲಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಾದ ಯಡಿಯೂರು, ಮಂಗಲ, ಮಹಾಂತಾಳಪುರ, ಹುಲ್ಲೇಪುರ, ಮಂಗಲ ಹೊಸೂರು ಗ್ರಾಮಸ್ಥರು ನೆಂಟರಿಷ್ಟರನ್ನು ಕರೆದು ಆತಿಥ್ಯ ನೀಡುವುದರಿಂದ ಜಾತ್ರೆಯಲ್ಲಿ ಭಾಗವಹಿಸುವುದಿಲ್ಲ ಸೋಮವಾರ ಇವರಿಗಾಗಿಯೇ ಚಿಕ್ಕ ಜಾತ್ರೆ ನಡೆಯಲಿದೆ.