ಸಾರಾಂಶ
ಭಾರತದ ಚರಿತ್ರೆಯಲ್ಲಿ ವೇದಾಂಗ ಕ್ಷೇತ್ರಕ್ಕೆ ಆದಿಗುರು ಶಂಕರಾಚಾರ್ಯರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಶೃಂಗೇರಿ ಶಂಕರ ಮಠದ ಅಧ್ಯಕ್ಷರಾದ ಆಂಜಿನೇಯ ಕುಲಕರ್ಣಿ ಹೇಳಿದರು.
ಕನ್ನಡಪ್ರಭ ವಾರ್ತೆ ಚವಡಾಪುರ
ಭಾರತದ ಚರಿತ್ರೆಯಲ್ಲಿ ವೇದಾಂಗ ಕ್ಷೇತ್ರಕ್ಕೆ ಆದಿಗುರು ಶಂಕರಾಚಾರ್ಯರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಶೃಂಗೇರಿ ಶಂಕರ ಮಠದ ಅಧ್ಯಕ್ಷರಾದ ಆಂಜಿನೇಯ ಕುಲಕರ್ಣಿ ಹೇಳಿದರು.ಅಫಜಲ್ಪುರ ಪಟ್ಟಣದ ಶಂಕರಾಚಾರ್ಯರ ಮಠದಲ್ಲಿ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ಶಂಕರಾಚಾರ್ಯರು ಪ್ರತಿಪಾದಿಸಿದ ತತ್ವವು ಇಂದು ಜಗತ್ತಿಗೆ ಬೆಳಕು ನೀಡಿದೆ. ಶಂಕರಾಚಾರ್ಯರ ತತ್ವಸಿದ್ದಾಂತ ಎಲ್ಲರಿಗೂ ಅನ್ವಯವಾಗುವಂತವು ಅವುಗಳನ್ನು ಯಾರು ಮೈಗೂಡಿಸಿಕೊಂಡು ಬದುಕು ಸಾಗಿಸುತ್ತಾರೋ ಅವರ ಬದುಕು ಸಾರ್ಥಕವಾಗಲಿದೆ ಎಂದರು.
ಇನ್ನೂ ಅಫಜಲ್ಪುರ ಪಟ್ಟಣದಲ್ಲಿ 2007ರಿಂದ ಶಂಕರಾಚಾರ್ಯರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಮಠಕ್ಕೆ ಜಾಗವು ಇರಲಿಲ್ಲ. ಸಮಾಜದವರೆಲ್ಲ ಕೂಡಿಕೊಂಡು ಜಾಗ ಖರೀದಿ ಮಾಡಿ ಶೃಂಗೇರಿ ಪೀಠಕ್ಕೆ ಹಸ್ತಾಂತರ ಮಾಡಿದ ಬಳಿಕ ಶೃಂಗೇರಿ ಪೀಠದವರು ಮತ್ತು ಇಲ್ಲಿನ ಭಕ್ತರು ನೀಡಿದ ಹಣದಲ್ಲಿ ಭವ್ಯ ಮಠ ನಿರ್ಮಾಣವಾಗಿದೆ ಎಂದರು.ಶಂಕರ ಜಯಂತಿ ನಿಮಿತ್ತ ಕಾಕಡಾರತಿ ಜರುಗಿತು. 8 ಗಂಟೆಗೆ ಶಂಕರಾಚಾರ್ಯರ ಭಾವಚಿತ್ರದ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. 10.30ಕ್ಕೆ ಕಲ್ಯಾಣವೃಷ್ಠಿತ್ಸವ, ಶಂಕರಾಚಾರ್ಯರ ಅಷ್ಟೋತ್ತರ, ಭಜನೆ, ತೊಟ್ಟಿಲೋತ್ಸವ ಕಾರ್ಯಕ್ರಮಗಳು ನಡೆದವು. ಬಳಿಕ ಮಹಾನೈವೇದ್ಯ, ಮಹಾಮಂಗಳಾರತಿ ಜರುಗಿದವು.
ಈ ಸಂದರ್ಭದಲ್ಲಿ ದತ್ತಂಭಟ್ ಪುರೋಹಿತ, ಸಂಜೀವಭಟ್ ಪುರೋಹಿತ, ರಾಮಚಂದ್ರ ಆಲಮೇಲಕರ, ಪಾಂಡುರಂಗ ಮೋಹರೀರ, ಕಿರಣ ಮೋಹರೀ, ಸಮರ್ಥ ಕುಲಕರ್ಣಿ, ಆನಂದ ಆಲಮೇಲಕರ, ದತ್ತಾತ್ರೇಯ ನಿಂಬಾಳ, ಹಣಮಂತ್ರಾವ ಕುಲಕರ್ಣಿ, ಮಹೇಶ ಪುರೋಹಿತ, ಗುರುಭಟ್ ಪುರೋಹಿತ, ಗಿರೀಶ ಮಠ, ರಮೇಶ ಆಲಮೇಲಕರ, ನಂದಾ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.