ಭಕ್ತಿಗೆ ಶ್ರದ್ಧೆಯೇ ಆಧಾರ: ಬ್ರಹ್ಮಾನಂದ ಭಾರತೀ ಸ್ವಾಮೀಜಿ

| Published : Feb 08 2025, 12:34 AM IST

ಭಕ್ತಿಗೆ ಶ್ರದ್ಧೆಯೇ ಆಧಾರ: ಬ್ರಹ್ಮಾನಂದ ಭಾರತೀ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದನ್ನೂ ನೋಡುತ್ತಿರುವವನು ಇದ್ದಾನೆ ಎಂದು ಅರಿತರೆ ತಪ್ಪುಗಳು ಕಡಿಮೆ ಆಗುತ್ತವೆ. ಅದು ಕೇವಲ ಹೊರಗಿನ ಕ್ಯಾಮೆರಾವಲ್ಲ, ಒಳಗೇನು ಆಲೋಚನೆ ಆಗುತ್ತದೆ ಎಂಬುದನ್ನೂ ಆ ಭಗವಂತನೆಂಬ ಕ್ಯಾಮೆರಾ ದಾಖಲಿಸುತ್ತದೆ.

ಶಿರಸಿ: ಶ್ರದ್ಧೆಯಿಲ್ಲದಿದ್ದರೆ ಭಕ್ತಿ ಹುಟ್ಟುವುದಿಲ್ಲ. ಶ್ರದ್ಧೆಗೆ ಆಧಾರವೇ ಭಕ್ತಿಯಾಗಿದ್ದು, ಶ್ರದ್ಧೆ ಹಾಗೂ ತಾಳ್ಮೆಯಿಂದ ದೇವರನ್ನು ಕಾಣಬಹುದು ಎಂದು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ನುಡಿದರು.ಶುಕ್ರವಾರ ತಾಲೂಕಿನ ಮಂಜುಗುಣಿಯಲ್ಲಿ ಕಳೆದ ಫೆ. ೪ರಿಂದ ನಡೆಯುತ್ತಿದ್ದ ಉದ್ಯಾಪನಾ ಉತ್ಸವ ಪರ್ವದ ಸಮಾರೋಪ, ಸಾಮೂಹಿಕ ಸತ್ಯನಾರಾಯಣವ ವ್ರಥಕಥಾ ಪೂಜೆ, ಬ್ರಹ್ಮೋತ್ಸವದದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.ಪ್ರತಿಯೊಂದನ್ನೂ ನೋಡುತ್ತಿರುವವನು ಇದ್ದಾನೆ ಎಂದು ಅರಿತರೆ ತಪ್ಪುಗಳು ಕಡಿಮೆ ಆಗುತ್ತವೆ. ಅದು ಕೇವಲ ಹೊರಗಿನ ಕ್ಯಾಮೆರಾವಲ್ಲ, ಒಳಗೇನು ಆಲೋಚನೆ ಆಗುತ್ತದೆ ಎಂಬುದನ್ನೂ ಆ ಭಗವಂತನೆಂಬ ಕ್ಯಾಮೆರಾ ದಾಖಲಿಸುತ್ತದೆ. ನಮ್ಮ ಮನಸ್ಸು ಪ್ರಶಾಂತವಾದಾಗ ದೇವರಿದ್ದಾನೆ ಎಂಬುದು ಗೊತ್ತಾಗುತ್ತದೆ. ಮಂಜುಗುಣಿಯಲ್ಲಿ ಪೂಜಿತವಾಗುವ ಭಗವಂತನೂ ಶ್ರೀನಿವಾಸ, ಪೂಜಿಸುವವರೂ ಶ್ರೀನಿವಾಸ. ಭಕ್ತಿಗೆ ಆಧಾರವೇ ಶ್ರದ್ಧೆ. ಸತ್ಯವನ್ನು, ಪರಮಾತ್ಮನನ್ನು ದೊರಕಿಸಿಕೊಡುವುದೇ ಶ್ರದ್ಧೆ ಎಂದ ಶ್ರೀಗಳು, ದೇವರು ಇದ್ದಾನೆ ಎಂದು ಭಾವಿಸಿಕೊಂಡರೆ ನಮ್ಮ ಯೋಚನೆ, ಮಾತು ಆಲೋಚಿಸಿ ಮಾತನಾಡುತ್ತೇವೆ ಎಂದರು.ಪ್ರಧಾನ ಅರ್ಚಕ ವಿ. ಶ್ರೀನಿವಾಸ ಭಟ್ಟ ಮಾತನಾಡಿ, ಮಾಡಿದ್ದು ಎಂಬ ಭಾವನೆ ಬಂದರೆ ಅದು ವಾಸ್ತವಿಕತೆ ಅಲ್ಲ. ಆಗುವುದು ಎಂಬುದು ವಾಸ್ತವಿಕತೆ. ಮಾಡಿದ್ದು ಎಂಬ ಭಾವನೆ ಬಂದರೆ ನಾವು ಜಾರಿ ಬಿದ್ದಂತೆ ಆಗುತ್ತದೆ. ಆಗಿದ್ದು ಎಂಬುದು ಋಷಿ ವಿಜ್ಞಾನಿಗಳು ತಿಳಿಸುವ ಕಾರ್ಯ ಮಾಡಿದರು.ಸಾಮಾಜಿಕ ಕಾರ್ಯಕರ್ತ ಮಹಾಬಲೇಶ್ವರ ಜೋಶಿ ಕಾನ್ಮೂಲೆ ಮಾತನಾಡಿ, ಮಂಜುಗುಣಿಯಲ್ಲಿ ಇನ್ನಷ್ಟು ಪ್ರಗತಿಗೆ ಸಂಕಲ್ಪ ಮಾಡೋಣ ಎಂದರು. ಇದೇ ವೇಳೆ ಶ್ರೀಪಾದ ರಾಯ್ಸದ ಗಂಗಾವತಿ, ವೆಂಕಟೇಶ ಬಿಜಾಪೂರ ಧಾರವಾಡ, ಸದಾಶಿವ ಹೆಗಡೆ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.ಅನಂತ ಪೈ, ಶ್ರೀರಾಮ ಹೆಗಡೆ ಭರಸಗುಣಿ, ಎಂ.ಎನ್. ಹೆಗಡೆ ಕೂರ್ಸೆ, ಜಿ.ಎಸ್. ಭಟ್ಟ ಸೂರನಜಡ್ಡಿ ಇದ್ದರು. ಮಂಜುಗುಣಿ ವೆಂಕಟರಮಣ ದೇವರು ಸಾನ್ನಿಧ್ಯ ನೀಡಿತ್ತು. ಕರುಣಾಕರ ಹೆಗಡೆ ಕಲ್ಲಳ್ಳಿ ಸ್ವಾಗತಿಸಿದರು. ಶ್ರೀನಿವಾಸ ಭಾಗವತ್ ನಿರೂಪಿಸಿದರು. ಅನಂತ ಶಾಸ್ತ್ರೀ ವೇದ ಘೋಷ ಹಾಡಿದರು. ಚಿದಂಬರ ಶಾಸ್ತ್ರಿ ಕಲ್ಲಳ್ಳಿ ಶಂಖನಾದ ನಡೆಸಿದರು.ಆಂತರಿಕ ದೂರು ಸಮಿತಿ ರಚಿಸಿ: ಜಿಲ್ಲಾಧಿಕಾರಿ

ಕಾರವಾರ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013ರಂತೆ ಜಿಲ್ಲೆಯ ಖಾಸಗಿ, ಸರ್ಕಾರಿ ಕಚೇರಿ, ಕೈಗಾರಿಕೆ, ಸಂಸ್ಥೆ, ಅಂಗಡಿ, ಮಾಲ್ ಹಾಗೂ ಇತರ ಕೆಲಸದ ಸ್ಥಳಗಳಲ್ಲಿ 10 ಅಥವಾ 10ಕ್ಕಿಂತ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರೆ ಆಂತರಿಕ ದೂರು ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಸಮಿತಿ ರಚನೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಮಾಹಿತಿ ನೀಡುವಂತೆ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.