ಬಾಳೆಹೊನ್ನೂರು ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನ ಆವರಣದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಯೋಜಿಸಿರುವ ೩೩ನೇ ವರ್ಷದ ಅಯ್ಯಪ್ಪಸ್ವಾಮಿ ಉತ್ಸವ ಅಂಗವಾಗಿ ಶನಿವಾರ ಶ್ರೀ ಸನ್ನಿಧಿಯಲ್ಲಿ ವಿಶೇಷ ಅಪ್ಪ ಸೇವೆ ನಡೆಯಿತು.

ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಅಪ್ಪ ಸೇವೆಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನ ಆವರಣದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಯೋಜಿಸಿರುವ ೩೩ನೇ ವರ್ಷದ ಅಯ್ಯಪ್ಪಸ್ವಾಮಿ ಉತ್ಸವ ಅಂಗವಾಗಿ ಶನಿವಾರ ಶ್ರೀ ಸನ್ನಿಧಿಯಲ್ಲಿ ವಿಶೇಷ ಅಪ್ಪ ಸೇವೆ ನಡೆಯಿತು.ಬಿ.ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಅಪ್ಪ ಸೇವೆಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್ ಹಾಗೂ ಮೆಣಸುಕೊಡಿಗೆ ರುದ್ರಯ್ಯ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿದವು. ಅಪ್ಪ ಸೇವೆ ಅಂಗವಾಗಿ ವಿಶೇಷವಾಗಿ ನಿರ್ಮಿಸಿದ್ದ ಮಂಡಲದಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಇರಿಸಿ ಮಾಲಾಧಾರಿಗಳು, ಗಣ್ಯರು ಪುಷ್ಪಾರ್ಚನೆ ಸಲ್ಲಿಸಿ ಮಹಾ ಮಂಗಳಾರತಿ, ಭಜನಾ ಸೇವೆ ನಡೆಸಿದರು.

ಗುರುಸ್ವಾಮಿಗಳ ನೇತೃತ್ವದಲ್ಲಿ ಬೆಂಕಿಯಲ್ಲಿ ಕಾದ ಬಾಣಲೆಯಲ್ಲಿ ಎಣ್ಣೆ ಹಾಕಿ ಅಯ್ಯಪ್ಪಸ್ವಾಮಿಗೆ ಅತಿ ಪ್ರಿಯವಾದ ಅಪ್ಪ (ನಯ್ಯಪ್ಪ) ವನ್ನು ಬಿಡಲಾಯಿತು. ಇದು ಹದಕ್ಕೆ ಬಂದ ನಂತರ ಬಿಸಿಯಾಗಿದ್ದ ಎಣ್ಣೆಯಲ್ಲಿ ಮಾಲಾಧಾರಿ ಸ್ವಾಮಿಗಳು ಬರಿಗೈ ಯಿಂದ ಅಪ್ಪವನ್ನು ತೆಗೆದು ಸ್ವಾಮಿ ಸಾನ್ನಿಧ್ಯದಲ್ಲಿ ಸಮರ್ಪಿಸಿ ಸೇವೆ ಸಲ್ಲಿಸಿದರು. ಇದೇ ಪ್ರಥಮ ಬಾರಿಗೆ ರೇಣುಕನಗರದಲ್ಲಿ ನಡೆದ ಅಪ್ಪ ಸೇವೆ ವಿಶೇಷ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಸೇರ್ಪಡೆಗೊಂಡಿದ್ದರು.ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಈ ಕುರಿತು ಮಾತನಾಡಿ, ಕಲಿಯುಗ ವರದ ಅಯ್ಯಪ್ಪ ವ್ರತಾಚರಣೆ ವಿಶ್ವದಲ್ಲಿಯೇ ಅತೀ ಶ್ರೇಷ್ಠ ವ್ರತ.ಇದರಿಂದ ಜೀವನದಲ್ಲಿ ಪಾಪ ಕರ್ಮಕಳೆದು ಪುಣ್ಯ ಫಲಗಳು ಲಭಿಸಲಿವೆ. ಕಲಿಯುಗದಲ್ಲಿ ಅಯ್ಯಪ್ಪಸ್ವಾಮಿ ಪವಾಡ ಹಲವು ನಡೆದಿದ್ದು, ಅಸಂಖ್ಯಾತ ಭಕ್ತರು ಇದಕ್ಕೆ ಸಾಕ್ಷಿ. ಅಂತೆಯೇ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ನಡೆಸುವ ಅಪ್ಪ ಸೇವೆ ವಿಶೇಷ ಪವಾಡಗಳಲ್ಲಿ ಒಂದು, ಇಂತಹ ವಿಶೇಷ ಭಕ್ತಿಪೂರ್ವಕ ಧಾರ್ಮಿಕ ಕಾರ್ಯವನ್ನು ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಮೊದಲ ಬಾರಿಗೆ ಆಯೋಜಿಸಿ ಧನ್ಯತೆ ಪಡೆಯಲಾಗಿದೆ ಎಂದರು.ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ರುದ್ರಯ್ಯ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಗೌರವಾಧ್ಯಕ್ಷ ಎಂ.ಆರ್. ರವೀಂದ್ರ, ಪ್ರಧಾನ ಕಾರ್ಯದರ್ಶಿ ರವೀಂದ್ರಾಚಾರ್, ಖಜಾಂಚಿ ಬಿ.ಜಗದೀಶ್ಚಂದ್ರ, ಉಪಾಧ್ಯಕ್ಷ ನಾಗರಾಜ್ ದುರ್ಗಾಂಭ, ಸಹದೇವ್ ಸಾಗರ್, ರವಿ, ಸಹ ಕಾರ್ಯದರ್ಶಿ ಚೇತನ್ ಆಚಾರ್ಯ, ರಾಕೇಶ್, ರಮೇಶ್ ಕೋಟಿ, ಸಹ ಖಜಾಂಚಿ ಸಂದೀಪ್ ಶೆಟ್ಟಿ, ಸಂಚಾಲಕರಾದ ಎಚ್.ಆರ್.ಆನಂದ್, ಪ್ರಭಾಕರ್ ಪ್ರಣಸ್ವಿ, ಸುರೇಂದ್ರ ಕಿಣಿ, ಪ್ರಕಾಶ್ ಬನ್ನೂರು, ನಟರಾಜ್, ಮದನ್, ಮಂಜುನಾಥ್, ಸಿ.ಎಸ್.ಮಹೇಶ್ಚಂದ್ರ, ಸುಮೇಶ್, ಗಣೇಶ್ ಕಿಣಿ ಮತ್ತಿತರರು ಹಾಜರಿದ್ದರು.೦೪ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಆಯೋಜಿಸಿದ್ದ ಅಪ್ಪ ಸೇವೆ ಕಾರ್ಯಕ್ರಮಕ್ಕೆ ಬಿ. ಕಣಬೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಅರುಣೇಶ್ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಎಕೆಪಿ ಕೃಷ್ಣ ಪೊದುವಾಳ್, ಆರ್.ಡಿ.ಮಹೇಂದ್ರ, ಜಗದೀಶ್ಚಂದ್ರ, ರವೀಂದ್ರಾಚಾರ್, ರುದ್ರಯ್ಯ ಹಾಜರಿದ್ದರು.