ಸಾರಾಂಶ
ಮಂಡ್ಯ ನಗರಸಭೆ ಅಧಿಕಾರಿಗಳು ಕೊಳ್ಳೇಗಾಲ ನೌಕರ ಪ್ರಭಾಕರ್ ಎಂಬವರಿಗೆ ಅಂಚೆ ಚೀಟಿಯಿಂದ ಸಂಗ್ರಹವಾದ ಮೊತ್ತ ₹8ಸಾವಿರ ಪಾವತಿಗೆ ನೋಟಿಸ್ ನೀಡಿರುವ ಪ್ರತಿ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆಯ ಡಿಗ್ರೂಪ್ ನೌಕರ ಪ್ರಭಾಕರ್ ಎಂಬವರು ಮಂಡ್ಯ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸುಮಾರು 8 ಸಾವಿರಕ್ಕೂ ಅಧಿಕ ಮೊತ್ತದ ಹಣ ದುರ್ಬಳಕೆ ಮಾಡಿಕೊಂಡಿರುವ ಘಟನೆ ಆಡಿಟ್ ವರದಿ ಮೂಲಕ ಬೆಳಕಿಗೆ ಬಂದಿದೆ.ಮಂಡ್ಯದಲ್ಲಿ ಡಿಗ್ರೂಪ್ ನೌಕರ ಪ್ರಭಾಕರ್ ಅಲ್ಲೂ ಸಹಾ ಬಿಲ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅವರು 11-7-2006 ರಿಂದ 31-3-2007ರ ತನಕ 8ಸಾವಿರಕ್ಕೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿದ್ದು, ಆಡಿಟ್ ವರದಿಯಲ್ಲಿ ಬೆಳಕಿಗೆ ಬಂದ ಬೆನ್ನಲ್ಲೆ ಮಂಡ್ಯ ನಗರಸಭೆ ಆಯುಕ್ತರು ಪ್ರಭಾಕರ್ ಅವರಿಗೆ ನೋಟಿಸ್ ನೀಡಿದ್ದು ಮಂಡ್ಯ ನಗರಸಭೆ ಲೆಕ್ಕ ಶಿರ್ಷಿಕೆಗೆ ಸಾವಿರ ಹಣ ಜಮಾ ಮಾಡುವಂತೆ ಆದೇಶಿಸಿದ್ದಾರೆ. ಪ್ರಭಾಕರ್ ಮಂಡ್ಯ ನಗರಸಭೆ ಶಾಖೆಯಲ್ಲಿ ಟಪಾಲು ವಿಭಾಗದಲ್ಲಿ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಣೆ ವೇಳೆ ಅಂಚೆ ಚೀಟಿ ವಿತರಣೆ ಸಂಬಂಧಿದಂತೆ 11-7-2006ರಿಂದ 31-3-2007ರ ತನಕ ವಿವರಣೆ ನೀಡಿಲ್ಲ, ಹಾಗಾಗಿ ಕೂಡಲೆ ಕ್ರಮವಹಿಸುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.ನಿಯಮ ಉಲ್ಲಂಘಿಸಿ ನೌಕರನಿಗೆ ಹೊಣೆ:ಹಾಲಿ ಕೊಳ್ಳೇಗಾಲ ನಗರಸಭೆ ಡಿಗ್ರೂಪ್ ನೌಕರ ಪ್ರಭಾಕರ್ ಎಂಬವರಿಗೆ ಇಲ್ಲಿನ ಆಯುಕ್ತ ರಾಜಣ್ಣ ಅವರು ನಿಯಮ ಉಲ್ಲಂಘಿಸಿ, ಜಿಲ್ಲಾಧಿಕಾರಿಗಳ ಆದೇಶವಿದ್ದಾಗ್ಯೂ ಕಂದಾಯ ವಿಭಾಗದ ಹೆಚ್ಚುವರಿ ಹೊಣೆ ನೀಡಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪವೂ ಕೇಳಿ ಬಂದಿದೆ ಎನ್ನಲಾಗಿದೆಲೋಕಾಯುಕ್ತಕ್ಕೂ ದೂರು: ಕೊಳ್ಳೇಗಾಲ ನಗರಸಭೆಯಲ್ಲಿ ಖಾತೆ, ಕಂದಾಯ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಲಂಚ ಪಡೆದ ಆರೋಪದಡಿ ಈಗಾಗಲೇ ಪೊಲೀಸ್ ಇಲಾಖೆಯ ಮಹೇಶ್ ಕುಮಾರ್ ಎಂಬವರು ವಿಡಿಯೋ ಚಿತ್ರಿಸಿದ್ದು ಲೋಕಾಯುಕ್ತ ಡಿವೈಎಪ್ಸಿ ಮ್ಯಾಥ್ಯೂ ಅವರಿಗೆ ವಂಚಿಸಿದ ವಿಡಿಯೋ ರವಾನಿಸಿದ್ದು ಇದೇ ವಿಡಿಯೋವನ್ನು ಸಿಬ್ಬಂದಿಗೆ ಸಹಾ ಕಳುಹಿಸಿದ್ದು ಈ ಪ್ರಕರಣ ಯಾವ ವೇಳೆಯಾದರೂ ವಿಚಾರಣೆಗೆ ಬರಬಹುದು ಎಂದು ಹೇಳಲಾಗುತ್ತಿದೆ. ವಿಡಿಯೋದಲ್ಲಿ ಪ್ರಭಾಕರ್ ಮಾತುಕತೆ ನಡೆಸಿ 12ಸಾವಿರ ಲಂಚ ಪಡೆಯುತ್ತಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.ಬೆನ್ನಿಗೆ ನಿಂತ ಬಿಜೆಪಿ ಸದಸ್ಯ:ಬುಧವಾರ ಪ್ರಭಾಕರ್ ವಿರುದ್ಧ ಕನ್ನಡಪ್ರಭ ವರದಿ ಪ್ರಕಟಿಸಿದ ಬೆನ್ನಲ್ಲೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು ಸುದ್ದಿಗೋಷ್ಠಿ ನಡೆಸಿದ ಬಳಿಕ ಅಲ್ಲೆ ಹಾಜರಿದ್ದ ನಗರಸಭೆಯ ಬಿಜೆಪಿ ಸದಸ್ಯರೊಬ್ಬರು ಪ್ರಭಾಕರ್ ಬೆನ್ನಿಗೆ ನಾನು ನಿಲ್ಲುವೆ, ಜಿಲ್ಲಾಧಿಕಾರಿಗಳೇ ನನಗೆ ಗೊತ್ತು, ಶಾಸಕರಿಂದ ಹೇಳಿಸಿ ನಿನ್ನ ರಕ್ಷಿಸುವೆ, ನೀನು ರ್ಧೈರ್ಯವಾಗಿರು ಎಂದು ಧೈರ್ಯತುಂಬಿದ ಘಟನೆ ಜರುಗಿದ್ದು ಈ ವಿಚಾರ ನಗರಸಭೆ ಪಡಸಾಲೆಯಲ್ಲೆ ವ್ಯಾಪಕ ಚರ್ಚೆಯಾಗುತ್ತಿದೆ. ಗುರುವಾರವೂ ಸಹಾ ಈ ವಿಚಾರ ನಗರಸಭೆ ಹೊರಾಂಗಣದಲ್ಲಿ ಚರ್ಚೆಗೆ ಬಂತು ಎನ್ನಲಾಗಿದೆ.
ಅಲ್ಲದೆ 2022ರ ನಗರಸಭೆ ಉಪಚುನಾವಣೆಯಲ್ಲಿ ನೌಕರ ಪ್ರಬಾಕರ್ ಅವರ ವಿರುದ್ಧ ಪಕ್ಕದ ವಾರ್ಡ್ ಸದಸ್ಯರನ್ನು ಚುನಾವಣೆ ನಡೆಯುವ ವಾರ್ಡ್‌ಗೆ ಸೇರಿಸಿ ಕರ್ತವ್ಯ ಲೋಪ ಎಸಗಿದ ಗಂಭೀರ ಆರೋಪವಿದ್ದು ಹಿಂದಿನ ಉಪವಿಭಾಗಾಧಿಕಾರಿಗಳೇ ಈ ಕುರಿತು ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಬಿಎಸ್ಪಿ ಸದಸ್ಯೆ ಜಯಮೇರಿ ಅವರು ಸಹಾ 6ನೇ ವಾರ್ಡ್‌ನಲ್ಲಿ ಖಾತೆ ವೇಳೆ ಲೋಪ ಎಸಗಿದ್ದು ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.