ಸಾರಾಂಶ
ಇದೇ ಫೆಬ್ರವರಿ 9ರಿಂದ 16ರ ವರೆಗೆ ನಗರದ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ಧಮ್ಮ ಪ್ರವಚನ ಕಾರ್ಯಕ್ರಮ ಜರುಗಲಿದೆ.
ಕನ್ನಡಪ್ರಭ ವಾರ್ತೆ, ಬೀದರ್
ಇದೇ ಫೆಬ್ರವರಿ 9ರಿಂದ 16ರ ವರೆಗೆ ನಗರದ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ಧಮ್ಮ ಪ್ರವಚನ ಕಾರ್ಯಕ್ರಮ ಜರುಗಲಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ ಗುನ್ನಳ್ಳಿ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಪ್ರತಿ ದಿನ ಸಂಜೆ 6.30ಕ್ಕೆ ಬುದ್ಧ ಧಮ್ಮ ಪ್ರವಚನ ಕಾರ್ಯಕ್ರಮ ಜರುಗಲಿದೆ. ಫೆ. 9ರಂದು 6.30ಕ್ಕೆ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಲಿದ್ದು, ಅಣದೂರು ವೈಶಾಲಿ ನಗರದ ಭಂತೆ ಮಹಾ ಥೇರೋ ಸಾನಿಧ್ಯ ವಹಿಸಲಿದ್ದು, ಸಮಾರಂಭದಲ್ಲಿ ಬಸವಕಲ್ಯಾಣ ತಾಲೂಕಿನ ಹಕ್ಯಾಳ ಬುದ್ಧ ವಿಹಾರದ ಭಂತೆ ಧಮ್ಮನಾಗ, ಅಣದೂರು ವೈಶಾಲಿ ನಗರದ ಭಂತೆ ಜ್ಞಾನಸಾಗರ ಥೇರೊ, ರೇಕುಳಿಗಿ ಬುದ್ಧ ವಿಹಾರದ ಭಂತೆ ರೇವತ್, ಹಾಲಹಳ್ಳಿ ಬುದ್ಧ ವಿಹಾರದ ಭಂತೆ ಧಮ್ಮದೀಪ ದೇವನಾಂಪ್ರಿಯ, ಹಿಪ್ಪಳ ಗಾಂವ್ ಬುದ್ಧ ವಿಹಾರದ ಭಂತೆ ಬೋಧೀರತ್ನ, ಅಮಲಾಪುರದ ಭಂತೆ ಧಮ್ಮ ಕೀರ್ತಿ ಹಾಗೂ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು. ಮಹಾರಾಷ್ಟ್ರ ಅಹ್ಮದ್ ನಗರದ ಭಂತೆ ಮಹಾವೀರ ಧಮ್ಮ ಪ್ರಭೋದನ ಮಾಡುವರು. ಭಾರತೀಯ ಬೌದ್ಧ ಮಹಾಸಭಾ ತಾಲೂಕು ಅಧ್ಯಕ್ಷ ಶಿವಕುಮಾರ ಸದಾಪುಲೇ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿಎಸ್‌ಐ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷರಾದ ಮನೋಹರ ಮೋರೆ, ಅತಿಥಿಗಳಾಗಿ ಮುಂಬೈನ ಬಿಎಸ್‌ಐ ರಾಷ್ಟ್ರೀಯ ಸಂಘಟಕಿ ವೈಶಾಲಿ ಮೋರೆ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಜಗನ್ನಾಥ ಮೂರ್ತಿ, ಡಿಡಿಪಿಯು ಚಂದ್ರಕಾಂತ ಶಹಬಾದಕರ್, ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರೇಮಸಾಗರ ದಾಂಡೇಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿಆರ್ ದೊಡ್ಡೆ, ಔರಾದ್ ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಹುಲಸೂರ ತಹಸೀಲ್ದಾರ್ ಶಿವಾನಂದ ಮೆತ್ರೆ, ನಿವೃತ್ತ ಪ್ರಾಂಶುಪಾಲ ಶಿವಶರಣಪ್ಪ ಹುಗ್ಗೆ ಪಾಟೀಲ್, ಇಎಸ್‌ಐ ಉಪಾಧ್ಯಕ್ಷ ಜಗನ್ನಾಥ ಕಾಂಬಳೆ, ಬಿಎಸ್‌ಐ ರಾಜ್ಯ ಸಂಘಟಕ ಬಾಬುರಾವ್ ಅಣದುರೆ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.ಹೀಗೆಯೇ ಫೆ. 16ರ ವರೆಗೆ ವಿವಿಧ ಕಾರ್ಯಕ್ರಮಗಳು ನೆರವೇರಲಿವೆ. ಒಂದು ವಾರದ ಕಾಲ ನಡೆಯುವ ಈ ಪ್ರವಚನ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಧರ್ಮದ, ಎಲ್ಲ ಜಾತಿಯ ಜನರು ಭಾಗವಹಿಸಿ ಪ್ರವಚನದ ಲಾಭ ಪಡೆದುಕೊಳ್ಳಬೇಕೆಂದು ರಾಜಕುಮಾರ ಗುನ್ನಳ್ಳಿ ಮನವಿ ಮಾಡಿದರು.ವೈಶಾಲಿ ನಗರ ಅಣದೂರಿನ ಧಮ್ಮಸಂಗ ರಖ್ಖಿತ ಅವರು ಮಾತನಾಡಿ, ಪ್ರವಚನವು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು, ಮೂಢನಂಬಿಕೆ ಹೋಗಲಾಡಿಸಲು, ಸಮಾಜದಲ್ಲಿನ ಅನಿಷ್ಟಗಳು, ಯುವ ಜನರಲ್ಲಿರುವ ದುಷ್ಚಟಗಳ ನಿವಾರಣೆ, ಶೋಷಣೆ, ದೌರ್ಜನ್ಯಗಳನ್ನು ಹೋಗಲಾಡಿಸಲು ಆಯೋಜಿಸಲಾಗಿದೆ. ಬುದ್ಧನ ವಿಚಾರಗಳು ಎಲ್ಲ ಸಮುದಾಯದ, ಎಲ್ಲ ಜಾತಿ ಧರ್ಮಗಳ ಒಂದು ಸಂಗಮವಾಗಿದ್ದು ಈ ಅಪರೂಪದ ಪ್ರವಚನದಲ್ಲಿ ತಾವೆಲ್ಲರೂ ಭಾಗಿಗಳಾಗಿ ಪ್ರವಚನ ಯಶಸ್ವಿಗೊಳಿಸಬೇಕೆಂದರು.ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಡಾ.ಕಾಶಿನಾಥ ಚೆಲುವಾ ಮಾತನಾಡಿದರು. ಮಹಾಸಭಾ ಪ್ರಚಾರ ಸಮಿತಿ ಅಧ್ಯಕ್ಷರಾದ ಪಾಂಡುರಂಗ ಬೆಲ್ದಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಂಗೆ ಸೂರ್ಯಕಾಂತ ಮಾತನಾಡಿದರು. ಜಿಲ್ಲಾ ಕೋಶಾಧ್ಯಕ್ಷ ನರಸಪ್ಪ ಮೇಟಿ, ಬೀದರ್ ತಾಲೂಕು ಅಧ್ಯಕ್ಷ ಶಿವಕುಮಾರ ಸದಾಫುಲೆ, ಮಂಜುಳಾ ಬಾವಿದೊಡ್ಡಿ, ಚಂದ್ರಕಲಾ ಬಡಿಗೇರ್ ಹಾಗೂ ಧನರಾಜ ಜ್ಯೋತಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.