ಶ್ರೀ ದೇವಿಯ ದೇವಾಲಯದಲ್ಲಿ ಸೋಮವಾರ ಮುಂಜಾನೆ ಶ್ರೀ ದೇವಿಯ ಮೂರ್ತಿಗೆ ಅಭಿಷೇಕ, ಅಲಂಕಾರ, ಅರ್ಚನೆ ನಡೆಯಿತು. ದೇವಾಂಗ ಬಡಾವಣೆಯ ಸುಮಂಗಲಿಯರಾದ ನಾಗರತ್ನ, ಜ್ಯೋತಿ, ಅನಿತಾ, ಛಾಯಾ, ನಾಗಮ್ಮ, ಪುಷ್ಪ, ಲಕ್ಷ್ಮಿ, ಇತರರು ಶ್ರೀ ದೇವಿಯ ಸ್ತೋತ್ರ ಹಾಗೂ ಲಲಿತ ಸಹಸ್ರನಾಮ ಪಠಿಸಿದರು. ದೇವಾಂಗ ಭಜನಾ ಮಂಡಳಿಯ ಗಾಯಕರಾದ ಗಣೇಶ, ಚಂದ್ರ, ಅರುಣ್ ಹಾಗೂ ನಾರಾಯಣ ಶ್ರೀದೇವಿಯ ಕೀರ್ತನೆಗಳು ಹಾಗೂ ದೇವರನಾಮ ಹಾಡಿದ ನಂತರ ಮಂಗಳಾರತಿ ನೆರವೇರಿಸಿ, ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು ಹಾಗೂ ಅರ್ಚಕರಾದ ಅಭಿಜಿತ್ ಪೂಜಾ ಕೈಂಕರ್ಯ ನೆರವೇರಿಸಿದರು.

ಹೊಳೆನರಸೀಪುರ: ಪಟ್ಟಣದ ದೇವಾಂಗ ಬಡಾವಣೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಲಯದಲ್ಲಿ ಧನುರ್ಮಾಸದ ಅಂಗವಾಗಿ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.