ಸಾರಾಂಶ
ಮಹಿಳೆಯರು ಸಾಮಾಜಿಕವಾಗಿ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮ ಮಹತ್ತರವಾಗಿದೆ ಎಂದು ಹಿರಿಯ ವಕೀಲ ಜಿ. ಆರ್. ಸೋನೆರ್ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಿಳೆಯರು ಸಾಮಾಜಿಕವಾಗಿ ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮ ಮಹತ್ತರವಾಗಿದೆ ಎಂದು ಹಿರಿಯ ವಕೀಲ, ಬ್ಯಾಂಕ್ ಆಪ್ ಮಹಾರಾಷ್ಟ್ರ ಬ್ಯಾಂಕ್ ಕಾನೂನು ಸಲಹೆಗಾರ ಜಿ.ಆರ್. ಸೋನೆರ್ ಹೇಳಿದರು.ಇಲ್ಲಿನ ಹಿಂಡಲಗಾ ಗಣಪತಿ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನಿನ ತಿಳಿವಳಿಕೆ ಇದ್ದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಜತೆಗೆ ನಮ್ಮಿಂದ ಆಗುವ ಅನೇಕ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಮಹಿಳೆಯರು ಪ್ರಾಥಮಿಕ ಕಾನೂನು ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲೆಯ ನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಸಮಾಜದಲ್ಲಿ ಮಹಿಳೆಯರ ಸ್ವ ಉದ್ಯೋಗ ಕಂಡುಕೊಂಡು ಆರ್ಥಿಕ ಅಭಿವೃದ್ಧಿ ಹೊಂದುತ್ತಿದ್ದಾರೆ. ಮಹಿಳೆಯರು ಬಲಿಷ್ಠವಾಗಿ ಬೆಳೆದಾಗ ಮಾತ್ರ ದೇಶ ಅಭಿವೃದ್ಧಿಯಾದಂತೆ. ಮಹಿಳಾ ಸಬಲೀಕರಣದ ಕುರಿತಂತೆ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದ ಉಪನ್ಯಾಸಕರಾದ ಮನಿಷಾ ಅವರು ವಿಚಾರಗೋಷ್ಠಿ ಮಂಡಿಸಿದರು.ಡ್ಯಾಪೋಡೈಲ್ಸ್ ಸಂಸ್ಥೆಯ ನಿರ್ದೇಶಕಿ ಪದ್ಮಜಾ ಮಿಲಿಂದ ಮುತ್ತೇಕರ ಮಾತನಾಡಿ, ಸ್ವಉದ್ಯೋಗಕ್ಕೆ ಮಹಿಳೆಯರು ಒತ್ತು ನೀಡಿದ್ದಾಗ ಕುಟುಂಬಸ್ಥರು ಪ್ರಗತಿ ಹೊಂದಲು ಸಾಧ್ಯ, ಕಷ್ಟಗಳನ್ನು ಸಲಿಸಾಲಿ ನಿಬಾಸಬಹುದು. ತಮ್ಮ ಸಂಸ್ಥೆ ಮುಖೇನ ಮಹಿಳೆಯರಿಗೆ ತರಬೇತಿ ಒದಗಿಸಿಕೊಳ್ಳುವ ಬಗ್ಗೆ ತಿಳಿಸಿದರು.
ಜ್ಞಾನ ವಿಕಾಸ ಕಾರ್ಯಕ್ರಮದ ಯೋಜನಾಧಿಕಾರಿ ಸಂಗೀತಾ, ಶ್ರೀರಾಮ ಸೇನಾ ಜಿಲ್ಲಾ ಅಧ್ಯಕ್ಷ ರವಿಕುಮಾರ ಕೋಕಿತಕರ ಮಾತನಾಡಿದರು. ತಾಲೂಕಿನ ಯೋಜನಾಧಿಕಾರಿ ನಾಗರಾಜ ಹದ್ಲಿ ಸ್ವಾಗತಿಸಿದರು. ಜ್ಞಾನ ವಿಕಾಸಕೇಂದ್ರದ ಸದಸ್ಯರು, ತಾಲೂಕಿನ ಸೇವಾ ಪ್ರತಿನಿಧಿಗಳು, ವಲಯದ ಮೇಲ್ವಿಚಾರಕರಾದ ಕವಿತಾ, ಮಹಾಂತೇಶ ಹೊಸಮನಿ, ನೇತ್ರಾವತಿ ಹೆಬಸೂರ, ನಾಗಪ್ಪಗೌಡ ಇತರರು ಇದ್ದರು. ವೈಶಾಲಿ ಪಟಗಾರ ನಿರೂಪಿಸಿದರು, ಸಂಗೀತಾ ಪೂಜಾರ ವಂದಿಸಿದರು.