ಮಿಡ್ಲ್‌..ಪ್ರಸನ್ನ ಸಾಗರ ಮುನಿ ಮಹಾರಾಜ ಪರಿವಾರಕ್ಕೆ ಭವ್ಯ ಸ್ವಾಗತ

| Published : Apr 29 2024, 01:33 AM IST

ಮಿಡ್ಲ್‌..ಪ್ರಸನ್ನ ಸಾಗರ ಮುನಿ ಮಹಾರಾಜ ಪರಿವಾರಕ್ಕೆ ಭವ್ಯ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನಲ್ಲಿ ಮೂರು ದಿನ ವಾಸ್ತವ್ಯ ಹೂಡಲಿರುವ ಮುನಿಗಳು, ಪ್ರತಿ ದಿನ ವಿಶೇಷ ಪ್ರವಚನ ನೀಡಲಿದ್ದಾರೆ. ಏ.29 ರಂದು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿಗೆ ಆಗಮಿಸಿದ ಆಚಾರ್ಯ 108 ಶ್ರೀ ಪ್ರಸನ್ನ ಸಾಗರ ಮುನಿ ಮಹಾರಾಜರು ಮತ್ತು ಅವರ ಪರಿವಾರದವರನ್ನು ನಗರದ ಫೌಂಟನ್ ವೃತ್ತದ ಬಳಿ ಜೈನ ಸಮುದಾಯದವರು ಭಾನುವಾರ ಪೂರ್ಣಕುಂಭದೊಂದಿಗೆ ಭವ್ಯವಾಗಿ ಸ್ವಾಗತಿಸಿದರು.

ಶ್ರವಣಬೆಳಗೊಳದಿಂದ ಮೈಸೂರು ನಗರಕ್ಕೆ ಧರ್ಮ ಜಾಗೃತಿಗಾಗಿ ಆಗಮಿಸಿದ ಶ್ರೀ ಪ್ರಸನ್ನ ಸಾಗರ ಮಹಾರಾಜ ಮತ್ತು ಅವರ ಪರಿವಾರದವರನ್ನು ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್.

ಶ್ರೀವತ್ಸ ಮತ್ತು ಜೈನ ಸಮಾಜದ ಮುಖಂಡರು ಬರ ಮಾಡಿಕೊಂಡರು.

ಶ್ರೀ ಪ್ರಸನ್ನ ಸಾಗರ ಮುನಿ ಮಹಾರಾಜರು ಫೌಂಟನ್ ವೃತ್ತಕ್ಕೆ ಆಗಮಿಸುತ್ತಿದ್ದಂತೆ ನಂದಿ ಧ್ವಜ, ಡೊಳ್ಳು ಕುಣಿತ ಮತ್ತು ಕಂಸಾಳೆ ಮೂಲಕ ಸ್ವಾಗತ ಕೋರಿ, ಅವರನ್ನು ಅಶೋಕ ರಸ್ತೆಯಿಂದ ಮೆರವಣಿಗೆ ಮೂಲಕ ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನ ತಲುಪಿ ನಂತರ ಚಂದ್ರಗುಪ್ತ ರಸ್ತೆಯಲ್ಲಿರುವ ಶ್ರೀಪಾರ್ಶ್ವನಾಥ ದಿಗಂಬರ ಜೈನ ಮಂದಿರಕ್ಕೆ ಕರೆ ತರಲಾಯಿತು.

ಈ ವೇಳೆ ಭಕ್ತಾಧಿಗಳು ಪುಷ್ಪ ವೃಷ್ಠಿ ಸುರಿಸಿ ಮಂದಿರದ ಮುಂಭಾಗದಲ್ಲಿ ಪಾದಪೂಜೆ ಸಲ್ಲಿಸಿ ಮಂದಿರಕ್ಕೆ ಬರ ಮಾಡಿಕೊಂಡರು.

ಈ ವೇಳೆ ಶ್ರೀ ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್. ಸುನೀಲ್ ಕುಮಾರ್ ಮಾತನಾಡಿ, ಮೈಸೂರಿನಲ್ಲಿ ಮೂರು ದಿನ ವಾಸ್ತವ್ಯ ಹೂಡಲಿರುವ ಮುನಿಗಳು, ಪ್ರತಿ ದಿನ ವಿಶೇಷ ಪ್ರವಚನ ನೀಡಲಿದ್ದಾರೆ. ಏ.29 ರಂದು ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಹಿರಿಯ ವಕೀಲ ಹರೀಶ್ ಹೆಗ್ಡೆ, ಶ್ರೀ ದಿಗಂಬರ ಜೈನ ಸಮಾಜದ ಉಪಾಧ್ಯಕ್ಷ ಬಿ. ಭರತ್ ರಾಜ್, ಪದಾಧಿಕಾರಿಗಳಾದ ಲಕ್ಷ್ಮೀಶ್ ಬಾಬು, ಜ್ವಾಲೇಂದ್ರಪ್ರಸಾದ್, ಜೀನೇಂದ್ರಪ್ರಕಾಶ್, ಬಿ.ಎಸ್. ಸಂತೋಷ್, ಬಿ.ಎಸ್. ಪ್ರಕಾಶ್, ಸೀಮಂತಿನಿ, ಭರತ್, ಧರಣೇಂದ್ರ ಮೊದಲಾದವರು ಇದ್ದರು.

ಮೈಸೂರಿಗೆ ದಿಗಂಬರ ಮಹಾರಾಜರು ಆಗಮಿಸಿರುವುದು ಸೌಭಾಗ್ಯ. ಇವರ ಪಾದಸ್ಪರ್ಶದಿಂದ ನಾಡಿನಲ್ಲಿ ಮಳೆಯಾಗಿ ಉತ್ತಮ ಬೆಳೆ ಬರಲಿ. ಇದರಿಂದ ಜನರು ಮನಸ್ಸಿನಲ್ಲಿ ಶಾಂತಿಯಿಂದ ಇರಲಿ.

ಮುನಿಗಳು ಕಠಿಣ ಉಪವಾಸ, ಮೌನವ್ರತ ಮಾಡಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿರುವುದರಿಂದ ಅದರ ಫಲವಾಗಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ. ರೈತರಿಗೆ ಸಮೃದ್ಧಿಯನ್ನು ಉಂಟು ಮಾಡಲಿ ಎಂದು ಅವರಲ್ಲಿ ಸ್ಮರಿಸಿಕೊಳ್ಳುತ್ತೇನೆ.

-