ಧರ್ಮ ಪ್ರತಿಯೊಬ್ಬರ ಬದುಕಿನಲ್ಲೂ ನೆಲೆಸಿದೆ. ಆ ಮೂಲಕ ಅದು ದೇಶದ ಉದ್ದಗಲಕ್ಕೂ ತನ್ನ ಪ್ರಭಾವ ಬೀರುತ್ತದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯರು ನುಡಿದರು.
ರಾಣಿಬೆನ್ನೂರು: ಧರ್ಮ ಪ್ರತಿಯೊಬ್ಬರ ಬದುಕಿನಲ್ಲೂ ನೆಲೆಸಿದೆ. ಆ ಮೂಲಕ ಅದು ದೇಶದ ಉದ್ದಗಲಕ್ಕೂ ತನ್ನ ಪ್ರಭಾವ ಬೀರುತ್ತದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯರು ನುಡಿದರು.
ನಗರದ ಕೋಟೆ ಗುತ್ತಲ ರಸ್ತೆಯಲ್ಲಿ ನಿರ್ಮಿಸಲಾದ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಬದುಕಿನಲ್ಲಿ ಹಣ ತನ್ನ ಪ್ರಭಾವ ಬೀರಲಾರದು. ಚುನಾವಣೆಗಳಲ್ಲಿ ಮರುಳಾಗುವ ಜನರು ಧರ್ಮದಲ್ಲಿ ಮರುಳಾಗಲಾರರು ಎಂದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜಿ.ಬಿ.ಮಾಸಣಗಿ ಮಾತನಾಡಿ, ಗುಡಿಗಳು ಮನುಷ್ಯರಲ್ಲಿ ಸಂಸ್ಕೃತಿ ಬೆಳೆಸುತ್ತಿವೆ. ಗುಡಿಗುಂಡಾರಗಳ ಅವಶ್ಯಕತೆ ಇದೆ ಎನ್ನುವ ಸ್ಥಿತಿ ಇಂದು ನಿರ್ಮಾಣಗೊಂಡಿದೆ. ಅಸ್ತಿತ್ವ ಕಳೆದು ಕೊಳ್ಳುವ ಸ್ಥಿತಿ ತಲುಪಿದ್ದ ಗುಡಿ ಗುಂಡಾರಗಳು ಈಗ ನವೀಕರಣಗೊಳ್ಳುತ್ತಿವೆ. ಕೋವಿಡ್ ನಂತರ ಈ ಕಾರ್ಯ ತೀವ್ರಗೊಳ್ಳುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಎಂದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ವಿರೂಪಾಕ್ಷಪ್ಪ ಕೆಂಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಶಿವಪ್ಪ ನಂದಿಹಳ್ಳಿ, ಉಪಾಧ್ಯಕ್ಷ ಈರಣ್ಣ ಮಾಕನೂರ, ಧರ್ಮಸ್ಥಳ ಯೋಜನಾಧಿಕಾರಿ ಮಂಜುನಾಥಗೌಡ,ದೇವಸ್ಥಾನ ಕಮೀಟಿಯ ಸಿ.ಬಿ. ಚನ್ನಗೌಡ, ಮಹೇಶ ಹೂರಗಿ, ಎನ್.ಸಿ. ಮಲ್ಲೇಶ,ಎಲ್.ಜಿ. ಶೆಟ್ರ, ಅಶೋಕ ನಾರಜ್ಜಿ, ಸೌಮ್ಯ ಕೆಂಪಣ್ಣನವರ ಮತ್ತಿತರರಿದ್ದರು.