ಸಾರಾಂಶ
ಪುತ್ತೂರು: ಧರ್ಮಸ್ಥಳದ ವಿರುದ್ಧದ ಅಪಪ್ರಚಾರ, ವಿರೋಧ ಆಗುತ್ತಿರುವ ಸಂದರ್ಭ ಕ್ಷೇತ್ರದ ಜೊತೆಗೆ ನಾವಿದ್ದೇವೆ ಎಂಬುದನ್ನು ಸಾರಲು ಮಾಜಿ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ದರ್ಮ ಜಾಗೃತಿ ಯಾತ್ರೆಗೆ ಪುತ್ತೂರಿನಿಂದ ೧೫೦ಕ್ಕೂ ಹೆಚ್ಚು ವಾಹನ ಧರ್ಮಸ್ಥಳಕ್ಕೆ ತೆರಳಲಾಯಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಧರ್ಮ ಜಾಗೃತಿ ಯಾತ್ರೆಗೆ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ತೆಂಗಿನ ಕಾಯಿ ಒಡೆಯುವ ಮೂಲಕ ಧರ್ಮ ಜಾಗೃತಿ ಯಾತ್ರೆಗೆ ಚಾಲನೆ ನೀಡಿದರು.ಮಾಜಿ ಸಂಸದ, ಧರ್ಮಸ್ಥಳದ ಪರವಾಗಿ ನಡೆಯುವ ಸಮಾವೇಶದ ಕೇಂದ್ರ ಸಮಿತಿ ಉಸ್ತುವಾರಿ ಹೊಂದಿರುವ ನಳಿನ್ ಕುಮಾರ್ ಕಟೀಲ್, ಪುತ್ತೂರು ತಾಲೂಕು ಜನಾಗ್ರಹ ಸಮಾವೇಶದ ಉಸ್ತುವಾರಿ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು, ಬಿಜೆಪಿಯ ಹಿರಿಯರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ನಗರಸಭಾ ಸದಸ್ಯ ಕೆ.ಜೀವಂಧರ್ ಜೈನ್, ರಾಜೇಶ್ ಬನ್ನೂರು, ನಾಗೇಂದ್ರ ಬಾಳಿಗ, ನಿರಂಜನ್, ಶಶಿಧರ್ ನಾಯಕ್,, ಸುರೇಶ್ ಆಳ್ವ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು,ಹರಿಪ್ರಸಾದ್ ಯಾದವ,ಚಂದ್ರಶೇಖರ ಬಪ್ಪಳಿಗೆ,ನಿತೇಶ್ ಶಾಂತಿವನ, ಹರೀಶ್ ಬಿಜಾತ್ರೆ, ನವೀನ್ ರೈ ಕೈಕಾರ ಸಹಿತ ನೂರಾರು ಮಂದಿ ಹಾಜರಿದ್ದು ಧರ್ಮಸ್ಥಳಕ್ಕೆ ತೆರಳಿದರು.