ಧರ್ಮಸ್ಥಳ ಸಂಸ್ಥೆ ಅನೇಕ ಸಮಾಜ ಸುಧಾರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ: ಕೆಂಪೂಗೌಡ

| Published : Jun 29 2024, 12:32 AM IST

ಧರ್ಮಸ್ಥಳ ಸಂಸ್ಥೆ ಅನೇಕ ಸಮಾಜ ಸುಧಾರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ: ಕೆಂಪೂಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ರೈತರ ಅನುಕೂಲಕ್ಕಾಗಿ ಬಾಡಿಗೆ ಸೇವಾ ಕೇಂದ್ರ, ರೈತ ಕ್ಷೇತ್ರ ಪಾಠಶಾಲೆ, ಕೆರೆ ಹೂಳೆತ್ತುವ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಅಪಾರ ಜನಮನ್ನಣೆಗಳಿಸಿದೆ. ಕೇವಲ ಆರ್ಥಿಕ ಚಟುವಟಿಕೆಗಳನ್ನು ಮಾತ್ರ ಮಾಡದೇ ಸಮಾಜ ಸುಧಾರಣೆಯ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಆರ್ಥಿಕ ಚಟುವಟಿಕೆಗಳನ್ನು ಮಾತ್ರ ಮಾಡದೇ ಸಮಾಜ ಸುಧಾರಣೆಯ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.

ತಾಲೂಕಿನ ಅರಳಕುಪ್ಪೆ ಸಂತೆಮಾಳ ರಂಗ ಮಂದಿರದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಜನಜಾಗೃತಿಗಾಗಿ ಬೀದಿ ನಾಟಕಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಂಸ್ಥೆಯು ರೈತರ ಅನುಕೂಲಕ್ಕಾಗಿ ಬಾಡಿಗೆ ಸೇವಾ ಕೇಂದ್ರ, ರೈತ ಕ್ಷೇತ್ರ ಪಾಠಶಾಲೆ, ಕೆರೆ ಹೂಳೆತ್ತುವ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಅಪಾರ ಜನಮನ್ನಣೆಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಯೋಜನಾಧಿಕಾರಿ ಯಶವಂತ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಗೆ ಧೈರ್ಯ ಮತ್ತು ಜ್ಞಾನಾಭಿವೃದ್ಧಿಗೆ ಪೂರಕವಾಗಿದೆ. ಗ್ರಾಮೀಣ ಭಾಗದಲ್ಲಿ ಮೌಢ್ಯಗಳು ನಿರ್ಮೂಲಣೆ , ಶಿಕ್ಷಣದ ಮಹತ್ವ, ಮಕ್ಕಳಲ್ಲಿ ಉತ್ತಮ ಸದಾಚಾರ, ಕೌಟುಂಬಿಕ ನಿರ್ವಹಣೆ, ಇವೆಲ್ಲದರಲ್ಲಿ ಮಹಿಳೆ ಪಾತ್ರ ಆಗಾಧವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಸುಕ್ಷಿತರನ್ನಾಗಿಸುವುದೇ ಜ್ಞಾನ ವಿಕಾಸ ಕಾರ್ಯಕ್ರಮದ ಏಕೈಕ ಗುರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಅ.ಸಿ.ಸಿದ್ದೇಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೀದಿನಾಟಕದ ಮೂಲಕ ಬಾಲ್ಯವಿವಾಹ, ಹೆಣ್ಣು ಭ್ರೂಣಹತ್ಯೆ, ನೀರಿನ ಮಹತ್ವ, ದುಷ್ಚಟದ ದುಷ್ಪರಿಣಾಮ, ಇವೇ ಮೊದಲಾದ ವಿಷಯಗಳ ಕುರಿತು ಹಾಸ್ಯ ಮಿಶ್ರಿತ ನಾಟಕವನ್ನು ಸ್ನೇಹ ಜೀವಿ ಕಲಾ ತಂಡದ ಕಲಾವಿದರು ಪ್ರದರ್ಶನ ನೀಡಿದರು.

ಈ ವೇಳೆ ಒಕ್ಕೂಟದ ಅದ್ಯಕ್ಷೆ ಲೀಲಾವತಿ, ಜ್ಞಾನ ವಿಕಾಸ ಸಮನ್ವಯಾದಿಕಾರಿ ತೇಜಸ್ವಿ, ಮೇಲ್ವಿಚಾರಕಿ ಸರ್ವಮಂಗಳಾ, ಸೇವಾ ಪ್ರತಿನಿಧಿ ಆಶಾರಾಣಿ ಇತರರಿದ್ದರು.ನಾಳೆ ಅಂಧರು, ವಿಶೇಷಚೇತನರಿಗೆ ಉಚಿತ ಸಂಗೀತ ತರಬೇತಿ

ಕನ್ನಡಪ್ರಭ ವಾರ್ತೆ ಮಂಡ್ಯನಗರದ ಸ್ನೇಹ ಚಾರಿಟಬಲ್ ಟ್ರಸ್ಟ್‌ನಿಂದ ಅಂಧರು, ವಿಶೇಷಚೇತನರಿಗೆ ಉಚಿತ ಕಂಪ್ಯೂಟರ್ ಹಾಗೂ ಸಂಗೀತ ತರಬೇತಿ ಶಿಬಿರವನ್ನು ಜೂ.30ರಂದು ಬೆಳಗ್ಗೆ 10 ಗಂಟೆಗೆ ಸುಭಾಷ್‌ನಗರ ಏಳನೇ ಕ್ರಾಸ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷ ಕೆ.ಎಸ್.ಸುಧೀರ್‌ಕುಮಾರ್ ಹೇಳಿದರು.

ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದು, ಉದ್ಘಾಟನೆಯನ್ನು ಶಾಸಕ ಪಿ.ರವಿಕುಮಾರ್ ನೆರವೇರಿಸುವರು. ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಸುಧೀರ್‌ಕುಮಾರ್ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮುಡಾ ಅಧ್ಯಕ್ಷ ನಹೀಮ್, ಎಸ್ ಬಿಐ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಸುಮನ್, ರೈತ ನಾಯಕಿ ಸುನಂದಾ ಜಯರಾಂ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಎಸ್.ಎಸ್. ಕೋಮಲ್‌ಕುಮಾರ್, ನಗರಸಭೆ ಮಾಜಿ ಸದಸ್ಯ ಎನ್.ಆರ್.ರಾಜೇಶ್, ಮೈಸೂರಿನ ಅಂಧಮಕ್ಕಳ ಸರ್ಕಾರಿ ಶಾಲೆ ಅಽಕ್ಷಕ ಸತೀಶ್, ಸ್ನೇಹಾಲಯ ಸಂಸ್ಥೆಯ ಸಿಸ್ಟರ್ ಮೇರಿ, ಜಯಕರ್ನಾಟಕ ಸಂಘಟನೆಯ ಎಸ್.ನಾರಾಯಣ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಹೆಚ್.ಎಸ್.ಮಲ್ಲೇಶ್ ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಎನ್.ಎಸ್.ಮಂಜುನಾಥ, ವಿನುತಾ. ಭಾಗ್ಯಮ್ಮ, ಶಾನು, ಕೆ.ಜೆ.ಯೋಗೇಶ್ ಇದ್ದರು.