ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜಕ್ಕೆ ಮಾದರಿ

| Published : Dec 21 2023, 01:15 AM IST

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜಕ್ಕೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ದುಡಿಯುವ ಜನರ ಜೀವನೋಪಾಯಕ್ಕೆ ಭದ್ರತೆ ಒದಗಿಸಿಕೊಟ್ಟು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜಮುಖಿಯಾಗಿ ಮುನ್ನಡೆಯುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಕೆಎಸ್ ಐಸಿ ಮಾಜಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ಹೇಳಿದರು.

ರಾಮನಗರ: ದುಡಿಯುವ ಜನರ ಜೀವನೋಪಾಯಕ್ಕೆ ಭದ್ರತೆ ಒದಗಿಸಿಕೊಟ್ಟು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜಮುಖಿಯಾಗಿ ಮುನ್ನಡೆಯುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಕೆಎಸ್ ಐಸಿ ಮಾಜಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ಹೇಳಿದರು.

ನಗರದ ಹುಣಸನಹಳ್ಳಿ ರಸ್ತೆಯಲ್ಲಿನ ಎಂಡಿಆರ್ ಕಲ್ಯಾಣ ಮಂಟಪದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಂಗಲ್ ವಲಯದ ಒಕ್ಕೂಟ ಸಂಘಗಳ ಪದಗ್ರಹಣ ಮತ್ತು ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮಹಿಳಾ ಗುಂಪು ಸಂಘಗಳ ಸ್ಥಾಪನೆ ಮಾಡಿ ಅವರಿಗೆ ಹಣಕಾಸು ನೆರವನ್ನು ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಕೊಟ್ಟು ಜನರನ್ನು ಆರ್ಥಿಕವಾಗಿ ಉನ್ನತೀಕರಿಸುತ್ತಿದೆ. ಜನರು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಸ್ಥೆಯಿಂದ ದೊರೆಯುವ ಸವಲತ್ತು ಪಡೆದು ಅರ್ಥಿಕವಾಗಿ ಸಬಲರಾಗಿ ಎಂದರು.

ಕೆಂಗಲ್ ಯೋಜನಾಧಿಕಾರಿ ನಾಗಭೂಷಣ್ ಪೈ ಮಾತನಾಡಿ, ಕಳೆದ ಬಾರಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಈ ಭಾಗದ 655 ಕುಟುಂಬಕ್ಕೆ ಸಂಸ್ಥೆಯಿಂದ ಆಹಾರ ಕಿಟ್ ನೀಡಲಾಗಿದೆ. 23 ಜನರಿಗೆ ನಿರ್ಗತಿಕ ಮಾಸಾಶನ, ಆರೋಗ್ಯ ಸಮಸ್ಯೆ ಇರುವ 12 ಜನರಿಗೆ ಆರ್ಥಿಕ ಸಹಾಯಧನ, 32 ವಿಕಲಚೇತನರಿಗೆ ಸಲಕರಣೆ ವಿತರಣೆ, ಡೇರಿ, ಸಮುದಾಯ ಭವನ, ದೇವಾಲಯಗಳಿಗೆ ಶಾಲೆಗಳಿಗೆ ಬೆಂಚು ಡೆಸ್ಕ್ ನೀಡಲಾಗಿದೆ. ಕೆಂಗಲ್ ವ್ಯಾಪ್ತಿಯಲ್ಲಿ 359 ಸ್ವಸಹಾಯ ಸಂಘಗಳಿದ್ದು 3206 ಸದಸ್ಯರಿದ್ದಾರೆ. 7 ಕೋಟಿ ಸಾಲ ನೀಡಲಾಗಿದೆ. ಸಂಸ್ಥೆ ಜನಪರವಾಗಿ ಕೆಲಸ ಮಾಡುತ್ತಿದೆ ಎಂದರು.

ನಗರಸಭಾ ಅಧ್ಯಕ್ಷೆ ವಿಜಯಕುಮಾರಿ, ಸದಸ್ಯೆ ಆಯಿಷಾ ಬಾನು ಮಾತನಾಡಿದರು. ಒಕ್ಕೂಟ ಸಂಘಗಳ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಮುಸ್ಲಿಂ ಸಮುದಾಯ ಗುರು ಅಸ್ಗರ್ ಅಲಿ, ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳಾದ ಕಿರಣ್, ರಯಾನ್, ಮುಖಂಡರಾದ ಅತಾವುಲ್ಲಾ, ಟಿಪ್ಪು ಕ್ರಾಂತಿ ಸೇನೆ ಅಧ್ಯಕ್ಷ ಸೈಯದ್ ಅಸ್ಲಂ, ನಾಗಮ್ಮ, ಜನಜಾಗೃತಿ ವೇದಿಕೆ ಸದಸ್ಯ ವಿಭೂತಿಕೆರೆ ಶಿವಲಿಂಗಯ್ಯ, ಮೇಲ್ವೀಚಾರಕಿ ಚಿನ್ನಮ್ಮ, ಲೆಕ್ಕ ಪರಿಶೋಧಕ ಪ್ರತಾಪ್, ಸೇವಾ ಪ್ರತಿನಿಧಿಗಳಾದ ಜಬೀನ್, ಸಲ್ಮಾ, ತಿಲಕವಲ್ಲಿ, ಜ್ಯೋತಿ, ಮಧು, ಸಿಹೆಚ್.ಸಿ. ಸೇವಾಧಾರರಾದ ಶಾಫಿಯಾ, ಫಾತಿಮಾ, ಒಕ್ಕೂಟ ಸದಸ್ಯರಾದ ಮಧು, ಬಾನು ನಹೀಮಾ ಉಪಸ್ಥಿತರಿದ್ದರು.

20ಕೆಆರ್ ಎಂಎನ್ 1.ಜೆಪಿಜಿ

ರಾಮನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಂಗಲ್ ವಲಯದ ಒಕ್ಕೂಟ ಸಂಘಗಳ ಪದಗ್ರಹಣ ಮತ್ತು ಸಾಧನಾ ಸಮಾವೇಶದಲ್ಲಿ ಸಂಘದ ಪದಾಧಿಕಾರಿಗಳಿಗೆ ಕೆಎಸ್ ಐಸಿ ಮಾಜಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ ಬಹುಮಾನ ವಿತರಿಸಿದರು.