ಶಿರಾ ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆ ವತಿಯಿಂದ ಡಿ. ೨೮ರ ಭಾನುವಾರ ಬೆಳಿಗ್ಗೆ ೭.೩೦ ಗಂಟೆಗೆ ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ರಂಭಾಪುರಿ ಶ್ರೀಗಳ ಪೂಜಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ವೀರಶೈವ ಲಿಂಗಾಯತ ಹಿತರಕ್ಷಣಾ ವೇದಿಕೆ ವತಿಯಿಂದ ಡಿ. ೨೮ರ ಭಾನುವಾರ ಬೆಳಿಗ್ಗೆ ೭.೩೦ ಗಂಟೆಗೆ ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಧೀಶ್ವರ ಶ್ರೀ ೧೦೦೮ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ ೪ ಗಂಟೆಗೆ ಜನ ಜಾಗೃತಿ ಧರ್ಮ ಸಮಾರಂಭ ಏರ್ಪಡಿಸಲಾಗಿದೆ ಎಂದು ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಎಚ್.ಎಸ್.ಆನಂದ್ ತಿಳಿಸಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶಿವದೀಕ್ಷೆ ಪಡೆಯುವ ಆಸಕ್ತ ವೀರಶೈವ ಲಿಂಗಾಯತ ವಟುಗಳು ಶಿವದೀಕ್ಷೆ ಪಡೆಯಲು ಭಸ್ಮಾಂಗಿ ಮಠ್ ಮೊ: ೭೦೨೬೨೪೪೪೦೧, ಲಿಂಗಾನಂದ ಮೂರ್ತಿ ಮೋ; ೬೩೬೦೯೭೩೧೭೯, ಧನುಷ್ ಮೋ: ೮೦೫೦೮೭೨೩೫೬ ಇವರನ್ನು ಸಂಪರ್ಕಿಸಿ ಎಂದು ತಿಳಿಸಿದರು. ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿಯ ಖಜಾಂಚಿ ಪಿ.ಬಿ.ಲಿಂಗಾನಂದ ಮೂರ್ತಿ ಮಾತನಾಡಿ ಶಿವದೀಕ್ಷೆ ಪಡೆಯುವ ವಟುಗಳು ಡಿ. ೨೮ರ ಬೆಳಿಗ್ಗೆ ೬ ಗಂಟೆಗೆ ಹಾಜರಿರಬೇಕು. ದೀಕ್ಷೆ ಪಡೆಯುವ ವಟುಗಳಿಗೆ ವಸ್ತ್ರ ಪಂಚೆ, ಟವಲ್, ಲಿಂಗು ಹಾಗೂ ಕರಡಿಗೆ ಮತ್ತು ಇತರೆ ಪೂಜಾ ಸಾಮಗ್ರಿಗಳನ್ನು ಸಂಘದಿಂದ ಉಚಿತವಾಗಿ ನೀಡಲಾಗುತ್ತದೆ. ವೀರಶೈವ ಲಿಂಗಾಯತ ಸಮಾಜದ ಬಾಂಧವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿಯ ನಿರ್ದೇಶಕ ಧನುಷ್ ಮಾತನಾಡಿ ಡಿ. ೨೮ರ ಮಧ್ಯಾಹ್ನ ೩ ಗಂಟೆಗೆ ನಡೆಯುವ ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ವೀರಶೈವ ಲಿಂಗಾಯಿತ ಪಟುಗಳಿಗೆ ಶಿವದೀಕ್ಷೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟ ಶ್ರೀಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು, ಬೆಳ್ಳಾವಿ ಮಠದ ಶ್ರೀ ಕಾರದ ವೀರಬಸವ ಸ್ವಾಮಿಜಿಗಳು, ಗದಗದ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ದಿವ್ಯ ಸಾನಿಧ್ಯ ವಹಿಸುವರು. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಟಿ.ಬಿ.ಜಯಚಂದ್ರ, ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಅಧ್ಯಕ್ಷ ಶಂಕರ್ ಮಹದೇವ್ ಬಿದರಿ ಸೇರಿದಂತೆ ಹಲವರು ಆಗಮಿಸುವರು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ವೀರಭದ್ರಯ್ಯ.ಎಚ್.ಎಸ್, ಕಾರ್ಯದರ್ಶಿ ಸೋಮಶೇಖರ.ಆರ್, ಭಸ್ಮಾಂಗಿ ಮಠ್, ಪ್ರಕಾಶ.ಜಿ.ಎಸ್, ಮಂಜುನಾಥ.ಎಸ್.ಎಲ್, ಪರಮೇಶ್ವರ.ಎಚ್, ಲೋಕೇಶ್, ಚಿಕ್ಕಪ್ಪಯ ಮಾಸ್ಟರ್, ಶಾಂತಕುಮಾರ್, ರಾಜಶೇಖರ್, ನಾಗರಾಜು.ಎಚ್, ರವಿಶಂಕರ್, ದೀಪ್ತಿ ಮಂಜಣ್ಣ, ರವಿಶಂಕರ್, ನೀಲಕಂಠಪ್ಪ, ಬಸವರಾಜು, ಸುರೇಶ್, ಎಚ್.ಎಂ.ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.