ಹಳೇ ತಿರುಮಕೂಡಲಿನ ಚೌಡಯ್ಯ ವೃತ್ತದಲ್ಲಿ ಹೊಸ ತಿರುಮಕೂಡಲು ಗ್ರಾಮದ ವಿನೋದ್ ಕುಮಾರ್ ಎಂಬಾತನ ಮೇಲೆ ಧೀರಜ್ ಹಲ್ಲೆ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ ಅಕ್ರಮ ಸಂಬಂಧಕ್ಕೆ ಅಡ್ಡಿ ಪಡಿಸಿದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ತಿರುಮಕೂಡಲು ಗ್ರಾಮದ ಲೇಟ್ ಶಿವರಾಮು ಎಂಬವರ ಪುತ್ರ ಧೀರಜ್ (21) ಎಂಬಾತನೇ ಬಂಧಿತ ಆರೋಪಿ. ಈತ ಲಾಂಗ್ ನಿಂದ ಹೊಡೆದು ಕೊಚ್ಚಿ, ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ.ಕಳೆದ ಶನಿವಾರ ಮುಂಜಾನೆ ಹಳೇ ತಿರುಮಕೂಡಲಿನ ಚೌಡಯ್ಯ ವೃತ್ತದಲ್ಲಿ ಹೊಸ ತಿರುಮಕೂಡಲು ಗ್ರಾಮದ ವಿನೋದ್ ಕುಮಾರ್ ಎಂಬಾತನ ಮೇಲೆ ಧೀರಜ್ ಹಲ್ಲೆ ನಡೆಸಿ ಕೊಲೆ ಗೈದಿದ್ದ, ಕೊಲೆಗೆ ವಿನೋದ್ ಕುಮಾರ್ ಪತ್ನಿ ಯೊಂದಿಗೆ ಧೀರಜ್ ಅನೈತಿಕ ಸಂಬಂಧ ಕಾರಣವೆಂದು ಪಟ್ಟಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿ ಧೀರಜ್ ನನ್ನು ಪಟ್ಟಣ ಪೊಲೀಸರು ಮಂಗಳವಾರ ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.