ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಬುಧವಾರ ಬೆಳಿಗ್ಗೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಜಗಳೂರು

ಜಿಲ್ಲಾ ಆರೋಗ್ಯ ಮತ್ತು ಕುಟುಂಭ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಬುಧವಾರ ಬೆಳಿಗ್ಗೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಯ ಒಳರೋಗಿಗಳ ವಿಭಾಗ, ಹೊರ ರೋಗಿಗಳ ವಿಭಾಗದ ವಾರ್ಡ್‌ಗಳು, ಹೆರಿಗೆ, ಮಕ್ಕಳ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿದರು. ಆಸ್ಪತ್ರೆಯ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ರಾಘವೇಂದ್ರರಿಂದ ಮಾಹಿತಿ ಪಡೆದರು.

ಇದೇವೇಳೆ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ತಾಲ್ಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಜಿ.ಟಿ ಮತ್ತು ಪದಾಧಿಕಾರಿಗಳು ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯದ ಅವ್ಯವಸ್ಥೆ ಸರಿಪಡಿಸಲು ಕೋರಿದರು.

ಲ್ಯಾಬ್ ಇಂಚಾರ್ಜ್ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ಅವರಿಗೆ ಆರೋಗ್ಯದ ಸಮಸ್ಯೆ ಇರುವ ಕಾರಣ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ದೃಷ್ಟಿ ದೋಷದಿಂದ ಅಧಿಕಾರಿ ಬಳಲುತಿದ್ದು ಲ್ಯಾಬ್‌ಗೆ ಬಂದರೂ ಸುಮ್ಮನೆ ಕುಳಿತಿರುತ್ತಾರೆ. ಕಳೆದ ಐದು ವರ್ಷಗಳಿಂದ ಇದೇ ಸಮಸ್ಯೆಯಿದ್ದರೂ ಬದಲಾಯಿಸಲು ಸಾಧ್ಯವಾಗಿಲ್ಲ ಎಂದು ದೂರಿದರು.

ಆಸ್ಪತ್ರೆಯ ಆವರಣದಲ್ಲಿ ಅಂಗವಿಕಲರ ಆಸರೆಗೆ ಇರವು ರ‍್ಯಾಂಪ್ ತುಕ್ಕು ಹಿಡಿದು ಅಲ್ಲಾಡುತ್ತಿದೆ. ಮಳೆ ಬಂದರೆ ಆಸ್ಪತ್ರೆ ಸೋರುತ್ತಿದೆ. ಇದರಿಂದ ರೋಗಿಗಳಿಗೆ ಇರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಆಸ್ಪತ್ರೆಗೆ ಒಳಗೆ ಮಳೆ ಬಂದಾಗ ನೀರುಗಳು ವಾರ್ಡ್‌ಗಳಲ್ಲಿ ನೀರು ಬರುವುದರಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತದೆ. ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ವೈದ್ಯಾಧಿಕಾರಿ ರಾಘವೇಂದ್ರ , ವೈದ್ಯರಾದ ಡಾ.ಜಗನಾಥ್, ಉಪಾಧ್ಯಕ್ಷ . ಸಿದ್ದೇಶ್ ಕೆ.ಎಸ್. ಜಂಟಿ ಕಾರ್ಯದರ್ಶಿ ಡಿ.ವಿ.ನಾಗರಾಜ್, ಎಂ.ಡಿ.ಅಬ್ದುಲ್ ರಖೀಬ್, ರಾಮತ್ ಸೇರಿದಂತೆ ಮತ್ತಿತರರು ಇದ್ದರು.