ಜೈನ್‌ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭ

| Published : Feb 02 2024, 01:04 AM IST

ಜೈನ್‌ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬಹುತೇಕ ಎಲ್ಲ ರೋಗ ನಿರ್ಣಯ ಸೇವೆಗಳನ್ನ ರಿಯಾಯಿತಿ ದರದಲ್ಲಿ ಮಾಡುತ್ತಾ ಬರಲಾಗಿದೆ. ಈಗಾಗಲೇ ಸಿಟಿ ಸ್ಕ್ಯಾನ್ ಸೇವೆ ಆರಂಭಿಸಿದ್ದು ಸುಮಾರು 160ಕ್ಕೂ ಹೆಚ್ಚು ರೋಗಿಗಳಿಗೆ ಸ್ಕ್ಯಾನ್ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರ ಹೊರ ವಲಯದ ಜೈನ್ ಮಿಷನ್ ಆಸ್ಪತ್ರೆಯಲ್ಲಿ ಫೆಭ್ರವರಿ 4 ರಂದು ನೂತನ ಸಿಟಿ ಸ್ಕ್ಯಾನ್ ಮತ್ತು ಸೆಕೆಂಡ್ ಯೂನಿಟ್ ಡಯಾಲಿಸಿಸ್ ಲೋಕಾರ್ಪಣೆ ನಡೆಯಲಿದೆ ಎಂದು ಜೈನ್ ಮಿಷನ್ ಆಸ್ಪತ್ರೆ ಚೇರ್ಮನ್ ಡಾ. ನರ್ಪತ್ ಸೋಲಂಕಿ ಹೇಳಿದರು.ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ 4ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ರವರು ಸಿಟಿ ಸ್ಕ್ಯಾನ್ ಮತ್ತು ಎರಡನೇ ಯುನಿಟ್‌ ನ ಡಯಾಲಿಸಿಸ್ ಯಂತ್ರಗಳನ್ನು ಲೋಕಾರ್ಪಣೆ ಮಾಡಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪ್ರದೀಪ್ ಈಶ್ವರ್ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಕಡಿಮೆ ದರದಲ್ಲಿ ಸೇವೆ

ಚೈನ್ ಮಿಷನ್ ಆಸ್ಪತ್ರೆ ಕಾರ್ಯದರ್ಶಿ ಉತ್ತಮ್ ಚಂದ್ ಜೈನ್ ಮಾತನಾಡಿ, ಬಹುತೇಕ ಎಲ್ಲ ರೋಗ ನಿರ್ಣಯ ಸೇವೆಗಳನ್ನ ರಿಯಾಯಿತಿ ದರದಲ್ಲಿ ಮಾಡುತ್ತಾ ಬರಲಾಗಿದೆ. ಈಗಾಗಲೇ ಸಿಟಿ ಸ್ಕ್ಯಾನ್ ಸೇವೆ ಆರಂಭಿಸಿದ್ದು ಸುಮಾರು 160ಕ್ಕೂ ಹೆಚ್ಚು ರೋಗಿಗಳಿಗೆ ಸ್ಕ್ಯಾನ್ ಮಾಡಲಾಗಿದೆ. ಭಾನುವಾರ ಅಧಿಕೃತವಾಗಿ ಪ್ರಾರಂಭಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಟ್ರಸ್ಟಿ ರಾಕೇಶ್ ಜೈನ್, ಮತ್ತಿತರರು ಇದ್ದರು.