ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ಡಿಕ್ಟೇಟರ್‌ಶಿಪ್ ರೂಲ್ : ಡಾ ಮಲ್ಲಿಕಾರ್ಜುನ ಖರ್ಗೆ

| Published : Feb 22 2024, 01:48 AM IST

ಮೋದಿ ಮತ್ತೆ ಅಧಿಕಾರಕ್ಕೆ ಬಂದ್ರೆ ಡಿಕ್ಟೇಟರ್‌ಶಿಪ್ ರೂಲ್ : ಡಾ ಮಲ್ಲಿಕಾರ್ಜುನ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಅವರಿಗೆ ಡಿಕ್ಟೇಟರ್‌ಶಿಪ್ ರೂಲ್ ತರುವ ಇಚ್ಛೆ ಇದ್ದಂತೆ ಕಾಣುತ್ತಿದೆ, ಜನ ಇದನ್ನು ತಿಳಿದುಕೊಳ್ಳಬೇಕು. ಮೋದಿ ಇದ್ರೆ ದೇಶ ನಡೆಯುತ್ತೆ ಅನ್ನೋ ಗುಂಗು ಹಲವರಲ್ಲಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಮೋದಿ ಅವರಿಗೆ ಡಿಕ್ಟೇಟರ್‌ಶಿಪ್ ರೂಲ್ ತರುವ ಇಚ್ಛೆ ಇದ್ದಂತೆ ಕಾಣುತ್ತಿದೆ, ಜನ ಇದನ್ನು ತಿಳಿದುಕೊಳ್ಳಬೇಕು. ಮೋದಿ ಇದ್ರೆ ದೇಶ ನಡೆಯುತ್ತೆ ಅನ್ನೋ ಗುಂಗು ಹಲವರಲ್ಲಿದೆ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಇಂದು ಸುದ್ದಿಗರಾರೊಂಡಿಗೆ ಮಾತನಾಡಿದ ಅವರು, ಮೋದಿ ಅವರಿಲ್ಲದೇ ಹಿಂದೆ ದೇಶ ನಡೆದೇ ಇಲ್ಲವಾ? ಎಂದು ಖಾರವಾಗಿ ಪ್ರಶ್ನೆ ಮಾಡಿದರು.

ಹಿಂದೆಲ್ಲಾ ಬಡವರ ಬಗ್ಗೆ ಅನುಕಂಪದ ಸರಕಾರಗಳಿದ್ದವು. ಈಗಿನದು ಬರಿ ಜಾಹಿರಾತು ಸರಕಾರ, ದೇಶದಲ್ಲಿ 543 ಸೀಟ್ ಗೆಲ್ಲುತ್ತೆವೆ ಅಂತ ಅಂತ ಮೋದಿ ಹೇಳ್ತಿದಾರೆ, ಅವರ ನಡವಳಿಕೆಗಳು ಪ್ರಜಾಪ್ರಭುತ್ವಕ್ಕೆ ಸರಿ ಹೊಂದಲ್ಲ, ಮೋದಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಹೆದರಿಸಿ, ಬೆದರಿಸಿ ಹಲವರನ್ನು ಸೆಳೆಯುವ ಪ್ರಯತ್ನ ಮಾಡ್ತಿದಾರೆ, ನಮ್ಮ ಪಕ್ಷದಲ್ಲಿ ಇದ್ದಾಗ ಕರಪ್ಟ್ ಅಂತಾರೆ. ಅವರೇ ಮೋದಿ ಜೊತೆಗೆ, ಬಿಜೆಪಿ ಹೋದ್ರೆ ತಕ್ಷಣ ಸ್ವಚ್ಚ ಅಂತಾರೆ, ಹಂಗೆ ಹೀಗೆ ಹೇಂಗೆ ಆದ್ರು? ಎಂದು ಪ್ರಶ್ನೆ ಮಾಡಿದರು.

ಮೋದಿ ಅವರು ಈ ವಿಚಾರದಲ್ಲಿ ದ್ವಂದ್ವ ರಾಜಕಾರಣ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಸರಿಯಲ್ಲ. ಇದರಿಂದ ಪ್ರಜಾಪ್ರಭುತ್ವಕ್ಕೆ ಉಳಿಗಾಲ ಇಲ್ಲದಂತಾಗುತ್ತದೆ ಎಂದರು.

ಸೀಟು ಹಂಚಿಕೆ ಸಂಬಂಧ ಇಂಡಿಯಾ ಒಕ್ಕೂಟದ ಸಭೆ ನಡೆಯುತ್ತಿವೆ, ಒಂದೊಂದು ರಾಜ್ಯಗಳಲ್ಲಿ ದಿನವೂ ಒಂದೊಂದು ಸಭೆ ನಡೆಯುತ್ತಿವೆ, ಬೇರೆ ಪಕ್ಷದವರ ಜೊತೆ ಮಾತಾಡಲು ಒಂದು ತಂಡ ಮಾಡಿದ್ದೇವೆ, ಮುಕುಲ್ ವಾಸ್ಮಿಕ್ ಹಾಗೂ ಗೆಲ್ಹೋಟ್ ನೇತೃತ್ವದಲ್ಲಿ 6 ಜನರ ಟೀಂ ಮಾಡಿದ್ದೇವೆ, ಅವರ ಕೆಲಸ ಸಾಗಿದೆ ಎಂದರು.

ಕಲಬುರಗಿಯಲ್ಲಿ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಬಿಜೆಪಿ ಪರ ಪ್ರಚಾರ ಮಾಡಿದ ಬಗ್ಗೆ ಮಾತನಾಡಿದ ಖರ್ಗೆ, ಅವರ ಪಕ್ಷ ಅವರು ಪ್ರಚಾರ ಮಾಡಲಿ. ಬಿಜೆಪಿಯವರಿಗೆ ಕಲಬುರಗಿ ಮೇಲೆ ಬಹಳ ಪ್ರೀತಿ ಇದೆ ಎಂದು ಛೇಡಿಸಿದರು.

ಎಲ್ಲಿಗೋ ಹೋಗುವಾಗ ಇಲ್ಲಿ ಇಳಿದು ಸಭೆ ಮಾಡಿ ಹೋಗ್ತಾರೆ. ಒಂದು ಅವರ ಅಭ್ಯರ್ಥಿಯನ್ನು ನೋಡೋಕೆ ಪದೇ ಪದೇ ಬರ್ತಿರಬಹುದು. ಇಲ್ಲಾಂದ್ರೆ ಕಾಂಗ್ರೆಸ್ ಮುಗಿಸಿ ಅಂತ ಹೇಳೋಕೆ ಬರ್ತಿರಬಹುದು, ಕಳೆದ ಭಾರಿಯೂ ಎಲ್ಲರೂ ಇಲ್ಲಿಗೆ ಬಂದಿದ್ದರು‌ ಎಂದರು.

ಅಮಿತ್ ಶಾ ಬಂದು ನೆಲೆಸಿದರು ಎರಡ್ಮೂರು ಭಾರಿ ಸಭೆ ಮಾಡಿದ್ದರು. ಅವರು ಏಕೆ ಬರ್ತಾರೆ ಅನ್ನೋದು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

ಚಂಡಿಗಡ್ ಮೇಯರ್ ಏಲೆಕ್ಷನ್ ನಲ್ಲಿ ಒಬ್ಬ ಅಧಿಕಾರಿಯೇ ಮತ ಹಾಕಿರುವ ಪ್ರಕರಣದಲ್ಲಿ ಮಾತಾಡಿದ ಖರ್ಗೆ, ಹಿಂಗ ಆದ್ರೆ ಹೆಂಗೆ? ದೆಹಲಿಯಿಂದ ಚಂಡಿಗಡ ಕೇವಲ ಒಂದು ಗಂಟೆ ದಾರಿ, ಅಲ್ಲಿಯೇ ಈ ರೀತಿ ಆಗುತ್ತೆ ಅಂದ್ರೆ ಹೇಗೆ? ಇನ್ನು ಬೇರೆ ಕಡೆಯಲ್ಲಿ ಯಾವ ರೀತಿ ನಡೆದಿರಬಹುದು ? ಎಂದು ಆತಂಕ ಹೊರ ಹಾಕಿದರು.

ಹಿಂದೆ ಎಂದೂ ಇಂತದ್ದು ಅಗಿಲ್ಲ‌.. ಒಬ್ಬ ಅಧಿಕಾರಿಯೇ ಮತ ಹಾಕ್ತಾನೆ ಅಂದ್ರೆ ಹೇಗೆ? ಇದು ದೇಶಕ್ಕೆ ಒಳ್ಳೆಯದಲ್ಲ ಪ್ರಜಾಪ್ರಭುತ್ವ ಉಳಿಸಬೇಕು ಅಂದ್ರೆ ಲೆವಲ್ ಪ್ಲೆಯಿಂಗ್ ಗ್ರೌಂಡ್ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.