The practice of using thick registers and pens to record attendance by calling out students names is now becoming a thing of the past. The Department of School Education has initiated a digital transformation in the education sector leveraging Artificial Intelligence (AI), facial recognition, and GPS technology
- ಸುರಪುರ ಸರ್ಕಾರಿ ಶಾಲೆ-ಕಾಲೇಜಲ್ಲಿ ‘ನಿರಂತರ’ ಇ ಹಾಜರಾತಿ ವ್ಯವಸ್ಥೆ ಜಾರಿ । ಶಿಕ್ಷಕರಿಗೆ ‘ಕಾಮ್ಸ್’ ಆ್ಯಪ್‌ನಿಂದ ಜಿಪಿಎಸ್ ಆಧಾರಿತ ಹಾಜರಾತಿ
-----ಚಂದ್ರಶೇಖರನಾಯಕ ಗುಡ್ಡಕಾಯಿ
ಕನ್ನಡಪ್ರಭ ವಾರ್ತೆ ಸುರಪುರದಪ್ಪನೆಯ ರಿಜಿಸ್ಟರ್, ಶಿಕ್ಷಕರ ಕೈಯಲ್ಲಿ ಪೆನ್ನು, ವಿದ್ಯಾರ್ಥಿಗಳ ಹೆಸರು ಕೂಗಿ ಹಾಜರಾತಿ ದಾಖಲಿಸುವ ಪದ್ಧತಿ ಈಗ ಇತಿಹಾಸದ ಪುಟ ಸೇರುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಕೃತಕ ಬುದ್ಧಿಮತ್ತೆ (ಎಐ), ಮುಖ ಗುರುತಿಸುವಿಕೆ ಹಾಗೂ ಜಿಪಿಎಸ್ ತಂತ್ರಜ್ಞಾನದ ನೆರವಿನಿಂದ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಚಾಲನೆ ನೀಡಿದ್ದು, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ‘ನಿರಂತರ’ ಇ-ಹಾಜರಾತಿ ವ್ಯವಸ್ಥೆ ಜಾರಿಯಾಗಿದೆ.
2026–27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ‘ನಿರಂತರ'''' ಇ-ಹಾಜರಾತಿ ವ್ಯವಸ್ಥೆ ಮತ್ತು ಶಿಕ್ಷಕರು, ಮುಖ್ಯಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು ಸೇರಿದಂತೆ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ‘ಕಾಮ್ಸ್ ಮೊಬೈಲ್ ಆ್ಯಪ್ ಮೂಲಕ ಜಿಪಿಎಸ್ ಆಧಾರಿತ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ.‘ನಿರಂತರ'''' ಆ್ಯಪ್‌ನಲ್ಲಿ ವಿದ್ಯಾರ್ಥಿಯ ಮುಖವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು, ಅದನ್ನು ಎಸ್‌ಎಟಿಎಸ್ ದತ್ತಾಂಶದೊಂದಿಗೆ ಹೊಂದಾಣಿಕೆ ಮಾಡಿ ಕ್ಷಣಾರ್ಧದಲ್ಲೇ ಹಾಜರಾತಿ ದಾಖಲಿಸಲಾಗುತ್ತದೆ. ದಿನಕ್ಕೆ ಎರಡು ಬಾರಿ ಹಾಜರಾತಿ ಕಡ್ಡಾಯ, ವಿದ್ಯಾರ್ಥಿಗಳ ಹಾಜರಾತಿ ಮೇಲ್ವಿಚಾರಣೆ ಇನ್ನಷ್ಟೂ ಪರಿಣಾಮಕಾರಿಯಾಗಿದೆ.
ಬೋಧಕ-ಬೋಧಕೇತರ ಸಿಬ್ಬಂದಿಗೂ ಡಿಜಿಟಲ್ ಶಿಸ್ತು ಜಾರಿಯಾಗಿದೆ. ''''''''ಕಾಮ್ಸ್'''''''' ಆ್ಯಪ್ ಮೂಲಕ ನಿಗದಿತ ಸಮಯದೊಳಗೆ ಚೆಕ್-ಇನ್ ಕಡ್ಡಾಯವಾಗಿದ್ದು, ನಿಗದಿತ ಸಮಯಕ್ಕೂ ಮುನ್ನ ಚೆಕ್-ಔಟ್ ಮಾಡಿದರೆ ಸಾಂದರ್ಭಿಕ ರಜೆ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಸಮಯಪಾಲನೆ ಮತ್ತು ಆಡಳಿತಾತ್ಮಕ ಪಾರದರ್ಶಕತೆ ಹೆಚ್ಚುತ್ತಿದೆ.ಸುರಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಾಗಿದೆ. ಒಟ್ಟು 429 ವಿದ್ಯಾರ್ಥಿನಿಯರಲ್ಲಿ 398 ಮಂದಿ ಈಗಾಗಲೇ ‘ನಿರಂತರ'''''''' ಆ್ಯಪ್‌ನಲ್ಲಿ ನೋಂದಣಿಯಾಗಿದ್ದು, ಪ್ರತಿದಿನ ಎಐ ಆಧಾರಿತ ಹಾಜರಾತಿ ದಾಖಲಿಸಲಾಗುತ್ತಿದೆ. ವಾರ್ಷಿಕ ಪರೀಕ್ಷೆಗೆ ಕಡ್ಡಾಯ ಶೇ. 75ರಷ್ಟು ಹಾಜರಾತಿ ಕಾಪಾಡಿಕೊಳ್ಳಲು ಈ ವ್ಯವಸ್ಥೆ ನೆರವಾಗುತ್ತಿದೆ.
ಜೊತೆಗೆ, ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್‌ಎಸ್‌ಕ್ಯುಎಫ್) ಅಡಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಐ ವಿಷಯವನ್ನು ಪರಿಚಯಿಸಲಾಗಿದ್ದು, ವಿದ್ಯಾರ್ಥಿಗಳಲ್ಲಿ 21 ಶತಮಾನದ ಕೌಶಲ್ಯಗಳು ಹಾಗೂ ತಾಂತ್ರಿಕ ಜ್ಞಾನ ಬೆಳೆಸುವ ಉದ್ದೇಶದಿಂದ ಎಐ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ಆರಂಭವಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸಂಪರ್ಕ, ಸರ್ವರ್ ನಿಧಾನಗತಿ ಹಾಗೂ ಮುಖ ಗುರುತಿಸುವಿಕೆಯಲ್ಲಿ ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದರೂ, ಅವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. ಒಟ್ಟಾರೆ, ಡಿಜಿಟಲ್ ಹಾಜರಾತಿ ವ್ಯವಸ್ಥೆ ಸರ್ಕಾರಿ ಶಿಕ್ಷಣದಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಗುಣಮಟ್ಟ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ ಪರಿಣಮಿಸಿದೆ.
ಕೋಟ್- 1
ಪೋಷಕರು ಮಕ್ಕಳನ್ನು ನಿಯಮಿತವಾಗಿ ಕಾಲೇಜಿಗೆ ಕಳುಹಿಸುವ ಮೂಲಕ ಶೇ. 75ರಷ್ಟು ಹಾಜರಾತಿ ಕಾಪಾಡಲು ಸಹಕರಿಸಬೇಕು. ‘ಕಾಮ್ಸ್'''''''' ಆ್ಯಪ್‌ನಿಂದ ಸಿಬ್ಬಂದಿಯಲ್ಲಿ ಸಮಯಪಾಲನೆ ಹೆಚ್ಚಿದ್ದು, ಆಡಳಿತಾತ್ಮಕ ಪಾರದರ್ಶಕತೆಯೂ ವೃದ್ಧಿಯಾಗಿದೆ.”- ಮೋನಯ್ಯ ಗೋನಾಲ, ಪ್ರಾಚಾರ್ಯಾ, ಸುರಪುರ. (4ವೈಡಿಆರ್2)
----ಕೋಟ್-2
“ನಿರಂತರ ಆ್ಯಪ್ ಮೂಲಕ ಒಂದೇ ಬಾರಿ 30 ವಿದ್ಯಾರ್ಥಿಗಳ ಹಾಜರಾತಿ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೂಲಕ ದಾಖಲಿಸಬಹುದು. ಕಡಿಮೆ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಇದು ಅತ್ಯಂತ ಸುಲಭ. ಹೆಚ್ಚಿನ ವಿದ್ಯಾರ್ಥಿಗಳಿರುವ ಕಾಲೇಜುಗಳಲ್ಲಿ ಮಾತ್ರ ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ.” : -ಸೈದಾಬಿ ಜಮಾದಾರ, ಉಪನ್ಯಾಸಕರು, ಸುರಪುರ. (4ವೈಡಿಆರ್3)ಪ್ರಮುಖಾಂಶಗಳು
•ಮುಖ ಗುರುತಿಸುವಿಕೆ (ಎಐ) ತಂತ್ರಜ್ಞಾನದಿಂದ ಕ್ಷಣರ‍್ಧದಲ್ಲಿ ಹಾಜರಾತಿ.•ಸಿಬ್ಬಂದಿಗೆ ಜಿಪಿಎಸ್ ಆಧಾರಿತ ‘ಕಾಮ್ಸ್'''''''' ಡಿಜಿಟಲ್ ವ್ಯವಸ್ಥೆ.
•ಎಐ ಮೂಲಕ ಶಿಕ್ಷಣದಲ್ಲಿ ಶಿಸ್ತು, ಸಮಯಪಾಲನೆ, ಪಾರದರ್ಶಕತೆಗೆ ಉತ್ತೇಜನ.•ಗೈರುಹಾಜರಿಗೆ ಕಡಿವಾಣ, ಶಾಲೆ ತೊರೆಯುವಿಕೆ ತಡೆ
-4ವೈಡಿಆರ್1 :
ಸುರಪುರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ನಿರಂತರ'''''''' ಆ್ಯಪ್ ಮೂಲಕ ವಿದ್ಯಾರ್ಥಿನಿಯರ ಮುಖ ಗುರುತಿಸುವಿಕೆ ಆಧಾರಿತ ಡಿಜಿಟಲ್ (ಎಐ) ಹಾಜರಾತಿ ದಾಖಲಿಸುತ್ತಿರುವ ದೃಶ್ಯ.