-ಮು
ನರಸಿಂಹರಾಜಪುರ: ಧ.ಗ್ರಾ.ಯೋಜನೆಯ ವತಿಯಿಂದ ತಾಲೂಕಿನ ಮುತ್ತಿನಕೊಪ್ಪ, ವರ್ಕಾಟೆಯ ಸಿ.ಎಸ್.ಸಿ ಕೇಂದ್ರದಲ್ಲಿ ಮಂಗಳವಾರ ಡಿಜಟಲ್ ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಧ.ಗ್ರಾ.ಯೋಜನೆಯ ಶೆಟ್ಟಿಕೊಪ್ಪ ವಲಯದ ಮುತ್ತಿನಕೊಪ್ಪದಲ್ಲಿ ಒಕ್ಕೂಟದ ಪದಾಧಿಕಾರಿ ಶೋಭಾ ಉದ್ಘಾಟಿಸಿ ಮಾತನಾಡಿ, ಡಿಜಿಟಲ್ ಪೇ ಕಾರ್ಯಕ್ರಮ ಉತ್ತಮ ವಿಚಾರವಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಜನರು ಹಳ್ಳಿಯಿಂದ ನಗರ ಪ್ರದೇಶದ ಬ್ಯಾಂಕುಗಳಿಗೆ ತೆರಳಿ ಹಣ ಪಡೆಯಬೇಕಾದರೆ ತಮ್ಮ ಕೆಲಸಕ್ಕೆ ರಜೆ ಹಾಕಿ ತೆರಳುವ ಅನಿವಾರ್ಯತೆ ಇತ್ತು. ಪ್ರಸ್ತುತ ಧ.ಗ್ರಾ.ಯೋಜನೆಯ ವತಿಯಿಂದ ಹಣ ಸಂಗ್ರಹಣೆ ಕೇಂದ್ರದಲ್ಲಿ ಶುಲ್ಕ ರಹಿತ ಡಿಜಟಲ್ ಪೇ ಮೂಲಕ 500 ರಿಂದ 10 ಸಾವಿರ ತನಕ ಪಡೆಯಬಹುದಾಗಿದೆ ಎಂದರು. ವಲಯ ಮೇಲ್ವೀಚಾರಕ ಪುರುಶೋತ್ತಮ್, ಧ.ಗ್ರಾ.ಯೋಜನೆಯ ಕೃಷಿ ಮೇಲ್ವೀಚಾರಕ ಅನುಪ್ ಕುಮಾರ್, ಸಿಎಚ್ಎಸ್ಸಿ ಮ್ಯಾನೇಜರ್ ಮಂಜುನಾಥ್, ಸಿಎಫ್.ಸಿ ಸವಿತಾ, ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕ ಮಧುಸೂದನ್, ಸ್ಥಳೀಯ ಸೇವಾ ಪ್ರತಿನಿಧಿಗಳಾದ ಅಕ್ಷತ, ಪಲ್ಲವಿ, ವಿಎಲ್.ವಿ ಪ್ರಿಯ ಹಾಗೂ ಸಂಘದ ಸದಸ್ಯರು ಇದ್ದರು.ವರ್ಕಾಟೆಯಲ್ಲೂ ಚಾಲನೆ: ಎನ್ಆರ್ ಪುರ ವಲಯದ ವರ್ಕಾಟೆಯಲ್ಲೂ ಸಿ.ಎಸ್.ಸಿ ಕೇಂದ್ರದಲ್ಲಿ ಡಿಜಿಟಲ್ ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಲಯ ಮೇಲ್ವೀಚಾರಕ ರತನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗ್ರಾಮೀಣ ಭಾಗದ ಜನರ ಅನುಕೂಲಕ್ಕೋಸ್ಕರ ಡಿಜಟಲ್ ಪೇ ಸೌಲಭ್ಯ ಕಲ್ಪಿಸಲಾಗಿದೆ. ಎಟಿಎಂ ಬಳಸಿ ಅಥವಾ ಆಧಾರ್ ಕಾರ್ಡ್ ಮೂಲಕ 500 ರಿಂದ 10 ಸಾವಿರ ರು. ತನಕ ಹಣ ತೆಗೆಯಬಹುದು ಎಂದು ಮಾಹಿತಿ ನೀಡಿದರು. ಸೇವಾ ಪ್ರತಿನಿಧಿಗಳಾದ ಭಾನುಮತಿ, ಸುರಕ್ಷಾ, ಸವಿತಾ ಇದ್ದರು.