ಜ್ಞಾನದ ಜ್ಯೋತಿ ಬೆಳಗುವುದೇ ದೀಪೋತ್ಸವ: ಬಿ.ನಾಗರಾಜು

| Published : Nov 25 2024, 01:00 AM IST

ಸಾರಾಂಶ

ಆಧುನಿಕ ಯುಗದಲ್ಲಿ ಗೋವಿನಿಂದ ದೂರವಾಗಿರುವ ನಾವು ಆಸ್ಪತ್ರೆಗೆ ಹತ್ತಿರವಾಗಬೇಕಾದ ಅನಿವಾರ್ಯ ಎದುರಾಗಿದೆ. ಮನೆಯಲ್ಲಿ ಒಂದು ದೇಶಿ ಹಸುವಿದ್ದರೆ ಒಬ್ಬ ವೈದ್ಯನಿದ್ದಂತೆ. ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಸೆಗಣಿ, ಗೋ ಮೂತ್ರ ಸೇರಿದಂತೆ ಪ್ರತಿಯೊಂದು ಉತ್ಪನ್ನಗಳು ಔಷಧೀಯ ಆಗರ ಪ್ರತಿಯೊಂದು ಮನೆ ಮನೆಯಲ್ಲೂ ದೇಶಿ ಹಸುಗಳನ್ನು ಸಾಕಿ ಗೋವಿನ ಜೊತೆಗೆ ಒಡನಾಟ ಇರಿಸಿಕೊಂಡರೆ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳು ಬರುವುದಿಲ್ಲ.

ಕನ್ನಡಪ್ರಭ ವಾರ್ತೆ ದೇವಲಾಪುರ

ಜ್ಯೋತಿ ಜ್ಞಾನದ ಸಂಕೇತ. ಪ್ರತಿ ಮನೆ ಮನದಲ್ಲಿಯೂ ಅಜ್ಞಾನದ ಕತ್ತಲು ಓಡಿಸಿ ಜ್ಞಾನದ ಜ್ಯೋತಿ ಬೆಳಗುವುದೇ ದೀಪೋತ್ಸವ ಎಂದು ನಿವೃತ್ತ ಪ್ರಾಂಶುಪಾಲ ಬಿ.ನಾಗರಾಜು ತಿಳಿಸಿದರು.

ನಾಗಮಂಗಲ ತಾಲೂಕಿನ ಕುಂಟಾನುಕೊಪ್ಪಲು ಗ್ರಾಮದಲ್ಲಿ ಶ್ರೀ ಬಸವಣ್ಣ ಸ್ವಾಮಿ ಸೇವಾ ಸಮಿತಿ ಮತ್ತು ಸ್ವಾಸ್ಥ್ಯ ಜೀವನಮಾರ್ಗ ಯೋಗ ಪ್ರತಿಷ್ಠಾನ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ದೀಪ ಬೆಳಗುವುದರಿಂದ ನಮ್ಮಲ್ಲಿ ಆಧ್ಯಾತ್ಮಿಕ ಚಿಂತನೆ ಮೊಳಕೆ ಹೊಡೆದು ಅಂದಕಾರ ದೂರವಾಗುವುದರ ಜೊತೆಗೆ ವಾತಾವರಣ ಶುದ್ಧಿಯಾಗಿ ರೋಗಗಳು ನಿವಾರಣೆಯಾಗುತ್ತವೆ ಎಂದರು.

ಗೋ ಮಾತೆಗೆ ಪೂಜೆ ಸಲ್ಲಿಸಿ ಮಾತನಾಡಿದ ಲಕ್ಷ್ಮಣ್ ಜೀ, ಆಧುನಿಕ ಯುಗದಲ್ಲಿ ಗೋವಿನಿಂದ ದೂರವಾಗಿರುವ ನಾವು ಆಸ್ಪತ್ರೆಗೆ ಹತ್ತಿರವಾಗಬೇಕಾದ ಅನಿವಾರ್ಯ ಎದುರಾಗಿದೆ. ಮನೆಯಲ್ಲಿ ಒಂದು ದೇಶಿ ಹಸುವಿದ್ದರೆ ಒಬ್ಬ ವೈದ್ಯನಿದ್ದಂತೆ ಎಂದರು.

ಗೋವಿನ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪ, ಸೆಗಣಿ, ಗೋ ಮೂತ್ರ ಸೇರಿದಂತೆ ಪ್ರತಿಯೊಂದು ಉತ್ಪನ್ನಗಳು ಔಷಧೀಯ ಆಗರ ಪ್ರತಿಯೊಂದು ಮನೆ ಮನೆಯಲ್ಲೂ ದೇಶಿ ಹಸುಗಳನ್ನು ಸಾಕಿ ಗೋವಿನ ಜೊತೆಗೆ ಒಡನಾಟ ಇರಿಸಿಕೊಂಡರೆ ಕ್ಯಾನ್ಸರ್ ನಂತಹ ಮಾರಣಾಂತಿಕ ರೋಗಗಳು ಬರುವುದಿಲ್ಲ ಎಂದು ಹೇಳಿದರು.

ಈ ವೇಳೆ ಶ್ರೀ ಬಸವಣ್ಣ ದೇವಸ್ಥಾನದ ಅರ್ಚಕರಾದ ರಾಜು, ಶನೇಶ್ಚರ ದೇವಸ್ಥಾನದ ಅರ್ಚಕರಾದ ಸಣ್ಣಮರಿಯಪ್ಪ, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ಗುರು ಪ್ರಸಾದ್, ಕಾರ್ಯದರ್ಶಿ ರಾಮಚಂದ್ರು, ಬೆಟ್ಟೇಗೌಡ, ನಿಂಗೇಗೌಡ, ನಂಜೇಗೌಡ, ಶಿವಕುಮಾರ್ ಸೇರಿದಂತೆ ಹಲವರು ಇದ್ದರು ಉಪಸ್ಥಿತರಿದ್ದರು. ಬಿ.ನಾಗರಾಜು ಅವರು ಮತ್ತೋರ್ವ ಭಜನಾ ಮಂಡಳಿ ಸದಸ್ಯರಾದ ತಿರುಮಲೇಗೌಡರ ಜೊತೆಗೂಡಿ ಕೆಲವು ಭಜನಾವಳಿಗಳನ್ನು ಹಾಡಿದರು‌.

ನಾಳೆ ದೀಪೋತ್ಸವ, ಅನ್ನಸಂತರ್ಪಣೆಮಂಡ್ಯ: ತಾಲೂಕಿನ ಕೊತ್ತತ್ತಿ ಗ್ರಾಮದ ಎಲೆತೋಟದ ಕ್ಯಾತಮ್ಮ ದೇವಾಲಯದಲ್ಲಿ ನ.26ರಂದು ಕಡೇ ಕಾರ್ತಿಕ ಮಾಸದ ಪ್ರಯುಕ್ತ ಸಂಜೆ 6 ಗಂಟೆಗೆ ದೀಪೋತ್ಸವ ನಡೆಯಲಿದೆ. ಅಂದು ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಗ್ರಾಮಸ್ಥರ ಪರವಾಗಿ ದೇವಾಲಯದ ಅರ್ಚಕ ಪುಟ್ಟಸ್ವಾಮಿ ತಿಳಿಸಿದ್ದಾರೆ.