ಸಾರಾಂಶ
ಕೊರಟಗೆರೆ : ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕೊನೆ ಕಾರ್ತೀಕ ಮಾಸದ ಕಡೇ ಶುಕ್ರವಾರ ನ.೨೯ ರಂದು ದೀಪೋತ್ಸವ ಹಾಗೂ ಬ್ರಹ್ಮರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಾಲಯದ ಚಾರಿಟಬಲ್ ಟ್ರಸ್ಟ್ ಖಜಾಂಚಿ ಜಗದೀಶ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕೊನೆ ಕಾರ್ತೀಕ ಮಾಸದ ಕಡೇ ಶುಕ್ರವಾರ ನ.೨೯ ರಂದು ದೀಪೋತ್ಸವ ಹಾಗೂ ಬ್ರಹ್ಮರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಾಲಯದ ಚಾರಿಟಬಲ್ ಟ್ರಸ್ಟ್ ಖಜಾಂಚಿ ಜಗದೀಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತೀಕ ಮಾಸದ ಕಡೇ ಶುಕ್ರವಾರ ನ.೨೯ ರಂದು ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಆಡಳಿತ ಮಂಡಳಿಯಿಂದ ಅಂದು ದೀಪೋತ್ಸವದ ಅಂಗವಾಗಿ ಬೆಳಿಗ್ಗೆ ೭ ಗಂಟೆ ಯಿಂದ ೮-೩೦ ರವರೆಗೆ ಪಂಚಾಮೃತ ಅಭಿಷೇಕ, ೮-೩೦ ರಿಂದ ಮಧ್ಯಾಹ್ನ ೧೨ ಗಂಟೆ ರವರೆಗೆ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಮಹಾಲಕ್ಷ್ಮಿ ಹೋಮ, ಗ್ರಾಮ ದೇವತೆ ದುರ್ಗಾ ಹೋಮ, ಮಧ್ಯಾಹ್ನ ೧೨.೩೫ ಕ್ಕೆ ರಥಾಂಗ ಹೋಮದ ನಂತರ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಅಭಿಜಿತ್ ಲಗ್ನದಲ್ಲಿ ಸಾಂಸ್ಕೃತಿ ಕಲಾತಂಡಗಳೊಂದಿಗೆ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.ಸಂಜೆ ೫.೩೦ ಕ್ಕೆ ದೀಪೋತ್ಸವ ಮತ್ತು ರಾತ್ರಿ ೮ ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಗೊರವನಹಳ್ಳಿ ನರಸಯ್ಯನಪಾಳ್ಯ, ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಆರತಿ ಸೇವೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಶ್ರೀ ಮಹಾಲಕ್ಷ್ಮಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ. .