ಎಂಐಟಿಯಲ್ಲಿ ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳಿಗೆ ನೇರ ಪ್ರವೇಶದ ಸುವರ್ಣಾವಕಾಶ

| Published : Jun 08 2024, 12:35 AM IST

ಎಂಐಟಿಯಲ್ಲಿ ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳಿಗೆ ನೇರ ಪ್ರವೇಶದ ಸುವರ್ಣಾವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಅಲ್ಲದೆ ಈ ಸಂಸ್ಥೆಯ ಲ್ಯಾಟರಲ್ ಎಂಟ್ರಿ ಆಸಕ್ತ ವಿದ್ಯಾರ್ಥಿಗಳಿಗೆ ಎಂಐಟಿ ಮಣಿಪಾಲದ ಕಾಲೇಜು ಶುಲ್ಕದ ಒಟ್ಟು ಶುಲ್ಕದಲ್ಲಿ ಶೇ .75 ಶುಲ್ಕವನ್ನು ವಿದ್ಯಾರ್ಥಿವೇತನದ ರೂಪದಲ್ಲಿ ವಿಶೇಷವಾಗಿ ಒದಗಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ಎಂಜಿನಿಯರಿಂಗ್ ಪದವಿಯ ಕನಸು ಹೊತ್ತ ಆಸಕ್ತ ವಿದ್ಯಾರ್ಥಿಗಳು, ನೇರವಾಗಿ 10ನೇ ತರಗತಿಯ ಬಳಿಕ 3 ವರ್ಷಗಳ ಡಿಪ್ಲೋಮಾ ಪೂರೈಸಿ, ಯಾವುದೇ ಪ್ರವೇಶ ಪರೀಕ್ಷೆಯ ಒತ್ತಡವಿಲ್ಲದೆ, ಲ್ಯಾಟರಲ್ ಎಂಟ್ರಿ ಸೌಲಭ್ಯದೊಂದಿಗೆ ತಮ್ಮ ಆಯ್ಕೆಯ ಎಂಜಿನಿಯರಿಂಗ್ ಪದವಿಯ ದ್ವಿತೀಯ ವರ್ಷಕ್ಕೆ ಪ್ರವೇಶಿಸುವ ಸುವರ್ಣ ಅವಕಾಶವನ್ನು ಎಂಐಟಿ ಮಣಿಪಾಲದಲ್ಲಿ ಒದಗಿಸಲಾಗುತ್ತಿದೆ.

ಅಲ್ಲದೆ ಈ ಸಂಸ್ಥೆಯ ಲ್ಯಾಟರಲ್ ಎಂಟ್ರಿ ಆಸಕ್ತ ವಿದ್ಯಾರ್ಥಿಗಳಿಗೆ ಎಂಐಟಿ ಮಣಿಪಾಲದ ಕಾಲೇಜು ಶುಲ್ಕದ ಒಟ್ಟು ಶುಲ್ಕದಲ್ಲಿ ಶೇ .75 ಶುಲ್ಕವನ್ನು ವಿದ್ಯಾರ್ಥಿವೇತನದ ರೂಪದಲ್ಲಿ ವಿಶೇಷವಾಗಿ ಒದಗಿಸಲಾಗುತ್ತಿದೆ.

ಜೊತೆಗೆ ಐ.ಟಿ.ಐ. ಶಿಕ್ಷಣ ಪೂರೈಸಿದ ಎನ್.ಸಿ.ವಿ.ಟಿ. ಅಥವಾ ಎನ್‌.ಟಿ.ಸಿ. ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಈ ಕಾಲೇಜಿನಲ್ಲಿ ಲಭ್ಯವಿರುವ ಎಂಟು ವಿಭಾಗಗಳಲ್ಲಿ ತಮ್ಮ ಆಯ್ಕೆಯ ಯಾವುದೇ ವಿಭಾಗಕ್ಕೆ ನೇರವಾಗಿ ದ್ವಿತೀಯ ವರ್ಷಕ್ಕೆ ಪ್ರವೇಶಾತಿಯ ಹೊಸ ಸೌಲಭ್ಯವೂ ಲಭ್ಯ ಇದೆ . ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಕೌಶಲ್ಯ ಅಭಿವೃದ್ಧಿಗಾಗಿ ಕಾಲೇಜು ಆವರಣದಲ್ಲಿಯೇ ಎನ್.ಎಸ್.ಡಿ.ಸಿ. ಸಂಯೋಜಿತ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ಅಂತರಾಷ್ಟ್ರೀಯ ಗುಣಮಟ್ಟದ ವಿವಿಧ 18 ವಿಭಾಗಗಳ ಕೌಶಲ್ಯ ತರಬೇತಿ ಕೇಂದ್ರವು ಇದೇ ವರ್ಷದಿಂದ ಕಾರ್ಯ ಆರಂಭವಾಗಿದೆ.

ವಿದ್ಯಾರ್ಥಿಗಳ ಆಯ್ಕೆಯ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಹವಾ ನಿಯಂತ್ರಿತ ಹಾಗೂ ಹವಾ ನಿಯಂತ್ರಣರಹಿತ ವಸತಿಗೃಹ ಹಾಗೂ ಉಪಹಾರ ಗೃಹಗಳು ಲಭ್ಯವಿವೆ. ಸಾಲ ಸೌಲಭ್ಯ ಮತ್ತು ಪ್ರವೇಶತಿಗಾಗಿ ಹೆಚ್ಚಿನ ವಿವರಗಳಿಗಾಗಿ ಆಸಕ್ತರು ಕಾಲೇಜಿನ ಆಡಳಿತ ಕಚೇರಿ ಅಥವಾ email: admission@tmapai polytechnic.edu.in ಅಥವಾ 78483182179 , 8310276314 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.