ಮೋದಿ ಸರ್ಕಾರದಿಂದ ಬಡವರಿಗೆ ನೇರ ಸೌಲಭ್ಯ: ಕೇಂದ್ರ ಸಚಿವ ಬಿ.ಎಲ್. ವರ್ಮಾ

| Published : Nov 22 2023, 01:00 AM IST

ಮೋದಿ ಸರ್ಕಾರದಿಂದ ಬಡವರಿಗೆ ನೇರ ಸೌಲಭ್ಯ: ಕೇಂದ್ರ ಸಚಿವ ಬಿ.ಎಲ್. ವರ್ಮಾ
Share this Article
  • FB
  • TW
  • Linkdin
  • Email

ಸಾರಾಂಶ

ಮೋದಿ ಸರ್ಕಾರದಿಂದ ಬಡವರಿಗೆ ನೇರ ಸೌಲಭ್ಯ: ಕೇಂದ್ರ ಸಚಿವ ಬಿ.ಎಲ್. ವರ್ಮಾವಿಕಸಿತ ಸಂಕಲ್ಪ ಯಾತ್ರೆ

ಲೀಡ್ ಬ್ಯಾಂಕ್‌ ನಿಂದ ಹಮ್ಮಿಕೊಂಡಿದ್ದ ವಿಕಸಿತ ಸಂಕಲ್ಪ ಯಾತ್ರೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾದ ನಂತರ ಬಡವರನ್ನ ಮೇಲೆತ್ತುವ ಕಾರ್ಯ ನಡೆಯುತ್ತಿದೆ. ಮೋದಿ ಸರ್ಕಾರ ಬಡವರಿಗೆ ಸೌಲಭ್ಯಗಳನ್ನು ನೇರವಾಗಿ ತಲುಪಿಸುತ್ತಿದೆ ಎಂದು ಕೇಂದ್ರ ಸಚಿವ ಬಿ.ಎಲ್. ವರ್ಮಾ ಹೇಳಿದರು.

ಪಟ್ಟಣ ಹೊರವಲಯದ ಹುಲ್ಲುಮಕ್ಕಿಯಲ್ಲಿ ಮಂಗಳವಾರ ಲೀಡ್ ಬ್ಯಾಂಕ್‌ ನಿಂದ ಹಮ್ಮಿಕೊಂಡಿದ್ದ ವಿಕಸಿತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರ ಏಳಿಗೆಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಫಲಾನುಭವಿಗಳಾಗದೇ ಇರುವವರಿಗೆ ಯೋಜನೆಗಳ ಸಲವತ್ತುಗಳನ್ನು ತಲುಪಿಸುವುದು ನಮ್ಮ ಗುರಿಯಾಗಿದೆ ಎಂದರು.

ಹಿಂದಿನ ಸರ್ಕಾರಗಳಲ್ಲಿ 100 ರು. ಬಿಡುಗಡೆಗೊಳಿಸಿದರೆ 15 ರು. ಮಾತ್ರ ಜನರಿಗೆ ತಲುಪುತಿತ್ತು. ನಮ್ಮ ಸರ್ಕಾರದಲ್ಲಿ ಇದು ಬದಲಾಗಿದೆ. ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಜನರಿಗೆ ನೇರವಾಗಿ ಸವಲತ್ತು ಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾಫಿ ಬೋಡ್‌ ಸಿಧೊಓ ಜಗದೀಶ್ ಮಾತನಾಡಿ, ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ತಿಳಿಸು ವುದೇ ವಿಕಸಿತ ಸಂಕಲ್ಪ ಯಾತ್ರೆ ಉದ್ದೇಶವಾಗಿದೆ. ದೇಶದಲ್ಲಿರುವ ಪ್ರತಿಯೊಂದು ಗ್ರಾಮ ಪಂಚಾಯಿತಿ ಗಳಿಗೆ ಮುಂದಿನ 60 ದಿನಗಳಲ್ಲಿ ಭೇಟಿ ನೀಡಿ ಕಾರ್ಯಕ್ರಮಗಳ ಮಾಹಿತಿ ನೀಡಲಾಗುತ್ತದೆ. ವಾಹನಗಳಲ್ಲಿ ಪ್ರತಿದಿನ 2 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದು, ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕೂಡ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಂತ್ರಿಗಳನ್ನು ಕೂಡ ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೊಪ್ಪ ಗ್ರಾಮಾಂತರ ಗ್ರಾ.ಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ವಿಜೇಂದ್ರ, ನರ್ಬಾಡ್ ಸದಸ್ಯ ಪ್ರತಾಪ್ ಮುಂತಾದವರಿದ್ದರು.