ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಅಥವಾ ದಂಡ ವಿಧಿಸಬೇಕೇ ಎಂಬ ಜನ ಸಾಮಾನ್ಯರ ಪ್ರಶ್ನೆಗಳಿಗೆ ಪೌರಾಡಳಿತ ನಿರ್ದೇಶಕನಾಲಯ ಕೆಲ ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದೆ.ಪ್ರಶ್ನೆ೧: ಪ್ರಥಮವಾಗಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಯಾವೆಲ್ಲ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು?ಉತ್ತರ: ಕರ್ನಾಟಕ ಪೌರ ಸಭೆಗಳ ಅಧಿ ನಿಯಮ ೧೯೬೪ ಪ್ರಕರಣ ೯ ಮತ್ತು ಕರ್ನಾಟಕ ಪೌರ ನಿಗಮಗಳ ಅಧಿ ನಿಯಮ ೧೯೭೬ ಪ್ರಕರಣ ೧೧೦ ರಲ್ಲಿ ವಿನಾಯಿತಿಗೊಳಪಟ್ಟ ಆಸ್ತಿಗಳನ್ನು ಹೊರತು ಪಡಿಸಿ ಉಳಿದಂತಹ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು.
ಪ್ರಶ್ನೆ೨: ಎ ರಿಜಿಸ್ಟರ್‌ನಲ್ಲಿ ನಮೂದಿಸಲಾದ ಆಸ್ತಿಗಳು ಯಾವುವು?ಉತ್ತರ: ಎ) ಗ್ರಾಮ ಠಾಣಾ
ಬಿ) ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು.ಸಿ) ಕಂದಾಯ ಇಲಾಖೆಯಿಂದ ೯೪ ಸಿಸಿ ಅಡಿ ನೀಡಲಾದ ಹಕ್ಕು ಪತ್ರ.
ಡಿ) ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ಬಡಾವಣೆಯಲ್ಲಿನ ಸ್ವತ್ತುಗಳು.ಮೇಲ್ಕಂಡ ಆಸ್ತಿಗಳನ್ನು ಅಧಿಕೃತವೆಂದು ಪರಿಗಣಿಸಿದ್ದು, ಸದರಿ ಆಸ್ತಿಗಳನ್ನು ಎ ರಿಜಿಸ್ಟರ್‌ನಲ್ಲಿ ನಮೂದಿಸಬಹುದಾಗಿದೆ.
ಪ್ರಶ್ನೆ೩: ಬಿ ರಿಜಿಸ್ಟರ್‌ನಲ್ಲಿ ನಮೂದಿಸಲಾದ ಆಸ್ತಿಗಳು ಯಾವುವು?ಎ) ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾಗದ ಬಡಾವಣೆಗಳ ನಿವೇಶನಗಳು/ ಕಟ್ಟಡಗಳು.
ಬಿ) ಭೂ ಪರಿವರ್ತನೆಯಾಗದೇ ಉಪ ವಿಭಜನೆ ಮಾಡಿ ನಿವೇಶನಗಳನ್ನಾಗಿ ಮಾರಾಟ ಮಾಡಿರುವ ನಿವೇಶನಗಳು/ಕಟ್ಟಡಗಳು.ಮೇಲ್ಕಂಡ ಆಸ್ತಿಗಳನ್ನು ಅನಧಿಕೃತ ಆಸ್ತಿಗಳೆಂದು ಪರಿಗಣಿಸಿದ್ದು, ಸದರಿ ಆಸ್ತಿಗಳನ್ನು ಬಿ ರಿಜಿಸರ್‌ನಲ್ಲಿ ನಮೂದಿಸಬೇಕಾಗುತ್ತದೆ.
ಪ್ರಶ್ನೆ೪: ಬಿ ರಿಜಿಸ್ಟರ್‌ನಲ್ಲಿ ದಾಖಲಿಸಲಾದ ಆಸ್ತಿಗಳಿಗೆ ತೆರಿಗೆ ವಿಧಿಸಬೇಕೇ ಅಥವಾ ದಂಡ ವಿಧಿಸಬೇಕೇ?ಉತ್ತರ: ಬಿ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುವ ಆಸ್ತಿಗಳಿಗೆ ಮೊದಲ ಬಾರಿಗೆ ಸ್ವತ್ತು ತೆರಿಗೆಯ ೨ ರಷ್ಟು ತೆರಿಗೆಯನ್ನು ನಂತರದ ವರ್ಷಗಳಲ್ಲಿ ಸ್ವತ್ತು ತೆರಿಗೆಯನ್ನು ಮಾತ್ರ ವಿಧಿಸುವುದು.
ಪ್ರಶ್ನೆ ೫: ಯಾವ ದಿನಾಂಕದವರೆಗೆ ಸೃಜನೆಯಾದ ಆಸ್ತಿಗಳನ್ನು ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು?ಉತ್ತರ: ಕರ್ನಾಟಕ ಪೌ. ಸಭೆಗಳ ಅಧಿ ನಿಯಮ ೧೯೬೪ ಪ್ರಕರಣ ೧೦೬ ಮತ್ತು ಕರ್ನಾಟಕ ಪೌರ ನಿಗಮಗಳ ಅಧಿ ನಿಯಮ ೧೯೭೬ ಪ್ರಕರಣ ೧೧ (ಬಿ)ಗೆ ೨೦೨೪ ರ ಸೆ.೧೦ ರ ತಿದ್ದು ಪಡಿ ತರಲಾಗಿದ್ದು,ಸದರಿ ತಿದ್ದುಪಡಿಯ ಪೂರ್ವದಲ್ಲಿ ಸೃಜಿಸಲಾದ ಅನಧಿಕೃತ ಆಸ್ತಿಗಳಲ್ಲಿ ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕು.
ಪ್ರಶ್ನೆ೬: ಬಿ ರಿಜಿಸ್ಟರ್‌ನಲ್ಲಿ ದಾಖಲಿಸಲು ಪಡೆಯಬೇಕಾದ ದಾಖಲೆಗಳು ಯಾವುದು?ಉತ್ತರ: ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲಿಕತ್ವ ಸಾಬೀತು ಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು.
ಪ್ರಶ್ನೆ೭: ಯಾವ ವರ್ಷದಿಂದ ಬಿ ರಿಜಿಸ್ಟರ್‌ನಲ್ಲಿ ದಾಖಲಿಸುವ ಆಸ್ತಿಗಳಿಗೆ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ?ಉತ್ತರ: ಕರ್ನಾಟಕ ಪೌ. ಸಭೆಗಳ ಅಧಿ ನಿಯಮ ೧೯೬೪ ಪ್ರಕರಣ ೧೦೬ ಮತ್ತು ಕರ್ನಾಟಕ ಪೌರ ನಿಗಮಗಳ ಅಧಿ ನಿಯಮ ೧೯೭೬ ಪ್ರಕರಣ ೧೧ (ಬಿ)ಗೆ ೨೦೨೪ ರ ಸೆ.೧೦ ರಿಂದ ಜಾರಿಗೆ ಬಂದಿದ್ದು,೨೦೨೪-೨೫ ನೇ ಸಾಲಿನಿಂದ ಆಸ್ತಿ ತೆರಿಗೆ ವಿಧಿಸಬೇಕಾಗಿರುತ್ತದೆ.
ಪ್ರಶ್ನೆ೮: ಬಿ ರಿಜಿಸ್ಟರ್‌ನಲ್ಲಿ ನಮೂದಿಸಲು ಅವಕಾಶವಿಲ್ಲದಿರುವ ಸ್ವತ್ತುಗಳು ಯಾವುವು?ಉತ್ತರ: ಸರ್ಕಾರಿ ಜಾಗದಲ್ಲಿರುವ ಸ್ವತ್ತುಗಳು, ಸರ್ಕಾರದ ನಿಗಮ ಮಂಡಳಿಗಳ ಜಾಗಗಳು, ನಗರ ಸ್ಥಳೀಯ ಸಂಸ್ಥೆಗಳ ಜಾಗದ ಸ್ವತ್ತುಗಳು.
ಪ್ರಶ್ನೆ೯: ಬಿ ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಉದ್ಯತಾ/ಖಾತಾ ನೀಡಬಹುದೇ?ಉತ್ತರ: ಬಿ ರಿಜಿಸ್ಟರ್‌ನಲ್ಲಿ ದಾಖಲಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಲ್ಲಿ ನಮೂನೆ ೨ಎ/೩ ಸೃಜಿಸಿ ನೀಡಬಹುದಾಗಿದೆ.
ಪ್ರಶ್ನೆ೧೦: ಅನಧಿಕೃತ ಸ್ವತ್ತುಗಳಿಗೆ ನಮೂನೆ ೨ಎ/೩ಎ ನೀಡಿದ್ದಲ್ಲಿ ಸಕ್ರಮಗೊಳಿದಂತಾಗುವುದೇ?ಉತ್ತರ: ಇಲ್ಲ, ಆಸ್ತಿ ತೆರಿಗೆ ವಿಧಿಸುವ ಉದ್ದೇಶಕ್ಕಾಗಿ ಪ್ರತ್ಯೇಕ ವಹಿಯಲ್ಲಿ ಅನಧಿಕೃತ ಸ್ವತ್ತುಗಳನ್ನು ದಾಖಲಿಸಿ ನಿರ್ವಹಿಸಲಾಗುತ್ತಿದೆ.