ಅಂಗವಿಕಲರಿಗೆ ಅಗತ್ಯ ಸಹಾಯ, ಪ್ರೋತ್ಸಾಹ, ಸೌಲಭ್ಯ ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಕೇವಲ ದಯೆ ಅಥವಾ ಕರುಣೆಯ ದೃಷ್ಟಿಯಿಂದ ನೋಡದೆ, ಅವರಲ್ಲಿರುವ ಕೌಶಲ್ಯ, ಪ್ರತಿಭೆ, ಹಾಗೂ ಸಾರ್ಮಥ್ಯ ಗುರುತಿಸಿ, ವೇದಿಕೆ ಕಲ್ಪಿಸುವುದು ಮುಖ್ಯ.
ಧಾರವಾಡ:
ಅಂಗವಿಕಲತೆ ದೌರ್ಬಲ್ಯವಲ್ಲ; ಅವರಲ್ಲಿ ವಿಶೇಷ ಚೈತನ್ಯ, ಕೌಶಲ್ಯ ಇರುತ್ತದೆ. ಆತ್ಮ ಸ್ಥೈರ್ಯದಿಂದ ಸಾಧನೆಗೆ ಮುಂದಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಡಾ. ಕಮಲಾ ಬೈಲೂರ ಹೇಳಿದರು.ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಕಲಚೇತನರ ಕ್ರೀಡಾ ಸ್ಪರ್ಧೆ ಉದ್ಘಾಟಿಸಿದ ಅವರು, ಅಂಗವಿಕಲರಿಗೆ ಅಗತ್ಯ ಸಹಾಯ, ಪ್ರೋತ್ಸಾಹ, ಸೌಲಭ್ಯ ಒದಗಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ. ಕೇವಲ ದಯೆ ಅಥವಾ ಕರುಣೆಯ ದೃಷ್ಟಿಯಿಂದ ನೋಡದೆ, ಅವರಲ್ಲಿರುವ ಕೌಶಲ್ಯ, ಪ್ರತಿಭೆ, ಹಾಗೂ ಸಾರ್ಮಥ್ಯ ಗುರುತಿಸಿ, ವೇದಿಕೆ ಕಲ್ಪಿಸುವುದು ಮುಖ್ಯ ಎಂದರು.
ಅತಿಥಿಗಳಾಗಿದ್ದ ಬಸೀರ್ ಅಹಮ್ಮದ್ ಜಮಾದಾರ ಮಾತನಾಡಿ, ಅಂಗವಿಕಲರ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸುವುದು ಸಮಾಜದ ಕರ್ತವ್ಯ. ಅವರನ್ನು ಪ್ರೋತ್ಸಾಹಿಸುವ ಮನೋಭಾವ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಹೇಳಿದರು.ಈ ವೇಳೆ ಮಜೇಥಿಯಾ ಫೌಂಡೇಶನ ಸಿಇಒ ಡಾ. ಸುನೀಲಕುಮಾರ ಕುಕನೂರ, ವಿಶ್ವಧರ್ಮ ಸಮೂಹ ಸಂಸ್ಥೆಯ ಕಾರ್ಯದರ್ಶಿ ಐ.ಕೆ. ಲಕ್ಕುಂಡಿ, ಪ್ರಿಯದರ್ಶಿನಿ ಶ್ರವಣ ನ್ಯೂನತೆವುಳ್ಳ ಮಕ್ಕಳ ಶಾಲೆಯ ಅಧ್ಯಕ್ಷ ಡಿ.ಡಿ. ಮೆಚ್ಚಣ್ಣವರ, ಗುರು ಲಕ್ಕುಂಡಿ, ಎಂ.ಆರ್. ಸಾಬೋಜಿ ಇದ್ದರು. ಅಂಗವಿಕಲ ಕಲ್ಯಾಣಾಧಿಕಾರಿ ಸವಿತಾ ಕಾಳೆ ಸ್ವಾಗತಿಸಿದರು. ಅಣ್ಣಪ್ಪ ಕೋಳಿ ನಿರೂಪಿಸಿದರು.