ಸಾರಾಂಶ
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಚೇರಿ ಮತ್ತು ಕಾಲೇಜುಗಳ ಅಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ಸಂಬಂಧಿಸಿದ ಪ್ರಾಧಿಕಾರದಿಂದ ರಜೆ ಪಡೆಯದೇ ಕೇಂದ್ರ ಕಚೇರಿಗೆ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಇಲಾಖಾ ಆಯುಕ್ತರು ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಕಚೇರಿ ಮತ್ತು ಕಾಲೇಜುಗಳ ಅಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ಸಂಬಂಧಿಸಿದ ಪ್ರಾಧಿಕಾರದಿಂದ ರಜೆ ಪಡೆಯದೇ ಕೇಂದ್ರ ಕಚೇರಿಗೆ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಇಲಾಖಾ ಆಯುಕ್ತರು ಎಚ್ಚರಿಸಿದ್ದಾರೆ.ಇಲಾಖಾ ವ್ಯಾಪ್ತಿಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಂಸ್ಕೃತ ಕಾಲೇಜು, ಚಿತ್ರಕಲಾ ಕಾಲೇಜು, ಶಿಕ್ಷಣ ಕಾಲೇಜು, ಕಾನೂನು ಕಾಲೇಜು ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಕ್ಷಮ ಪ್ರಾಧಿಕಾರದಿಂದ ರಜೆ ಪಡೆಯದೇ ಕುಟುಂಬ ಸದಸ್ಯರೊಂದಿಗೆ ಕೇಂದ್ರ ಕಚೇರಿಗೆ ವೈಯಕ್ತಿಕ ಕೆಲಸಗಳಿಗೆ ಭೇಟಿ ನೀಡುತ್ತಿರುವುದರಿಂದ ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶೈಕ್ಷಣಿಕ ಚಟುವಟಿಕೆಗೆ ಧಕ್ಕೆ ಆಗುತ್ತಿದೆ. ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಇಲಾಖಾ ಸಿಬ್ಬಂದಿ ಅನಗತ್ಯವಾಗಿ ಕೇಂದ್ರ ಕಚೇರಿಗೆ ಭೇಟಿ ನೀಡಬಾರದು. ತಮ್ಮ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಬಂಧಿಸಿದ ಪ್ರಾದೇಶಿಕ ಜಂಟಿ ನಿರ್ದೇಶಕರ ಮೂಲಕ ತಮ್ಮ ಮನವಿ, ಕೋರಿಕೆ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಅದೇ ರೀತಿ, ಇಲಾಖಾ ವ್ಯಾಪ್ತಿಯ ಕಾಲೇಜುಗಳ ಪ್ರಭಾರ ಪ್ರಾಂಶುಪಾಲರು ಪ್ರಾದೇಶಿಕ ಜಂಟಿ ನಿರ್ದೇಶಕರ ಪೂರ್ವಾನುಮತಿ ಇಲ್ಲದೆ ದೀರ್ಘ ರಜೆ ತೆರಳುವುದು ಅಥವಾ ಕಾರ್ಯ ಸ್ಥಾನದಲ್ಲಿ ಇಲ್ಲದಿರುವುದು ಕಂಡು ಬಂದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.--
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ನಂತರ ಬಂಡಾಯ ಸಾರಿದ್ದ ಸಯ್ಯದ್ ಅಜ್ಜಂಪೀರ ಖಾದ್ರಿ ಅವರ ಜತೆ ಒಂದು ಸ್ನೇಹಮಯ ಕ್ಷಣ.