ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಎನ್ಎಸ್ಎಸ್‌ನಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ನರಗುಂದ: ಪ್ರತಿವರ್ಷ ಎನ್ಎಸ್ಎಸ್ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳು ದತ್ತು ತೆಗೆದುಕೊಂಡ ಗ್ರಾಮವನ್ನು ಸ್ವಚ್ಛತೆ ಹಾಗೂ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುವುದೆಂದು ಧಾರವಾಡದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ಎಂ.ಬಿ. ದಳಪತಿ ತಿಳಿಸಿದರು.
ಪಟ್ಟಣದ ಯಡೆಯೂರ ಸಿದ್ದಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದ(ಬಿಇಡಿ) ಎನ್ಎಸ್ಎಸ್ ವಿಭಾಗವು ವಿಶೇಷ ಶಿಬಿರವನ್ನು ದತ್ತು ಗ್ರಾಮ ಮದಗುಣಿಕಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ, ಸಾಮಾಜಿಕ ಸೇವೆ, ಸ್ವಚ್ಛತೆ ಮತ್ತು ಗ್ರಾಮೀಣಾಭಿವೃದ್ಧಿ ಬಲಪಡಿಸುವ ಗುರಿಯನ್ನು ಹೊಂದಿದೆ.ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವದ ಗುಣಗಳು ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಎನ್ಎಸ್ಎಸ್‌ನಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ಸಮಾಜಕ್ಕೆ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.
ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿಗ ಪ್ರೊ. ವಿ.ಎಚ್. ಕೊಳ್ಳಿ ಮಾತನಾಡಿ, ಎನ್ಎಸ್ಎಸ್ ಅಂದರೆ ಕೇವಲ ಸ್ವಚ್ಛತೆಯಲ್ಲ, ಅದು ಸಾಮಾಜಿಕ ಪ್ರಜ್ಞೆ ಒಳ್ಳೆಯ ನಾಯಕತ್ವ ಗುಣ ಹಾಗೂ ಶಿಸ್ತುಬದ್ಧ ಜೀವನಕ್ಕೆ ರಹದಾರಿಯಾಗುತ್ತದೆ. ಆದ್ದರಿಂದ ಯುವಕರೆಲ್ಲರೂ ಎನ್ಎಸ್ಎಸ್ ನಲ್ಲಿ ಭಾಗವಹಿಸುವ ಮೂಲಕ ಜೀವನದಲ್ಲಿ ಆದರ್ಶಯುತ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಧಾರವಾಡ ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಡಾ. ಜಯಾನಂದ ಹಟ್ಟಿ ಮಾತನಾಡಿ, ಎನ್ಎಸ್ಎಸ್ ಧ್ಯೇಯವಾಕ್ಯ ನನಗಲ್ಲ ನಿನಗೆ. ಆದ್ದರಿಂದ ಎಲ್ಲ ಯುವಕರಲ್ಲಿ ಶ್ರದ್ಧೆ, ತಾಳ್ಮೆ, ಸಹಕಾರ ಮುಂತಾದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕಾಲೇಜಿನ ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಈ ಶಿಬಿರವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಮರ್ಪಣೆ ಮತ್ತು ತಂಡದ ಕೆಲಸಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.ಪ್ರತಿಜ್ಞಾವಿಧಿ ಬೋಧನೆಯನ್ನು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಎಂ. ಈ. ವಿಶ್ವಕರ್ಮ ಬೋಧಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎ.ವಿ.ಪಾಟೀಲ, ಕಾರ್ಯದರ್ಶಿ ಮಹೇಶಗೌಡ ಪಾಟೀಲ, ಹನುಮಪ್ಪ ದೊಡ್ಡಮನಿ, ಅಡಿವಪ್ಪ ಗೌಡರ, ಕಲ್ಲನಗೌಡರ ಕರಿಗೌಡ್ರ, ಬಸಪ್ಪ ಬೆಳವಟಗಿ, ಜ್ಞಾನದೇವ ಮುನೆನಕೊಪ್ಪ, ನಾಗಪ್ಪ ಬೆನ್ನೂರ, ಬಸಪ್ಪ ಮೆಣಸಗಿ, ನಿಂಗಪ್ಪ ಕುಂಬಾರ, ಮುತ್ತನಗೌಡ ಪಾಟೀಲ, ಶಂಕ್ರಪ್ಪ ಚೌಡಿ, ಶಿವಪುತ್ರಪ್ಪ ಜಾವೂರ ಇತರರು ಇದ್ದರು.