ಅಸಮಾಧಾನ ಶೀಘ್ರ ಶಮನ: ಸಲೀಂ ಅಹ್ಮದ್

| Published : Oct 11 2025, 12:03 AM IST

ಸಾರಾಂಶ

ಈ ಭಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಅವಕಾಶ ಇದೆ. ವರಿಷ್ಠರು ಭರವಸೆ ನೀಡಿದ್ದಾರೆ

ಗಂಗಾವತಿ: ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್‌ ಮೂರು ಬಾಗಿಲು ಆಗಿದ್ದು, ಶೀಘ್ರ ಒಂದಾಗಲಿದೆ ಎಂದು ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ನಗರದ ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸಕ್ಕೆ ತೆರಳಿ ರಾಮುಲು ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಾಜಿ ಸಂಸದ ಎಚ್.ಜಿ.ರಾಮುಲು ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂಸದರಾಗಿದ್ದರು. ಆ ಸಂದರ್ಭದಲ್ಲಿ ತಾವು ಯುವ ಕಾಂಗ್ರೆಸ್ ಪಕ್ಷದಲ್ಲಿದ್ದು ನೋಡಲು ಬಂದಿದ್ದೆ. ಈಗ ರಾಮುಲು ಮಾರ್ಗದರ್ಶನದಲ್ಲಿ ತಮಗೆ ಪಕ್ಷದಲ್ಲಿ ಹುದ್ದೆ ದೊರೆತಿದೆ ಎಂದರು.

ಗಂಗಾವತಿ ನಗರದಲ್ಲಿ ಕಾಂಗ್ರೆಸ್ ಮೂರು ಬಾಗಿಲು ಆಗಿದೆ. ಇದರಿಂದ ಕಾರ್ಯಕರ್ತರಲ್ಲಿ ಮುಜುಗರ ಉಂಟಾಗಿದೆ. ಇದನ್ನು ಶೀಘ್ರ ಸರಿಪಡಿಸಲಾಗುತ್ತದೆ ಎಂದರು.

ಈ ಭಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಅವಕಾಶ ಇದೆ. ವರಿಷ್ಠರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಗೆ ಈಗ ಆ ವಿಷಯ ಬೇಡ ಮೊದಲು ಸಚಿವ ಸಂಪುಟ ವಿಸ್ತರಣೆಯಾಗಲಿ ಎಂದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಕೊಪ್ಪಳದ ಅಸೀಫ್ ಅಲಿ, ಕೆ.ಎಂ. ಸೈಯದ್, ನಗರಸಭೆ ಸದಸ್ಯ ಹಾಗು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್, ಎಂ. ಸರ್ವೇಶ್, ಸುರೇಶ ಗೌರಪ್ಪ, ರಮೇಶ ಗೌಳಿ ಇದ್ದರು.