ಸಾರಾಂಶ
ಚನ್ನಗಿರಿ ಪಟ್ಟಣ ವ್ಯಾಪ್ತಿ ನಿವಾಸಿಗಳು ವಾಸದ ಮನೆ ಮತ್ತು ನಿವೇಶಗಳ ತೆರಿಗೆಯನ್ನು ಪಾವತಿಸಿ ಚನ್ನಗಿರಿ ಪಟ್ಟಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಾಸಿಂ ಚನ್ನಗಿರಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ, ಚನ್ನಗಿರಿ
ಪಟ್ಟಣ ವ್ಯಾಪ್ತಿ ನಿವಾಸಿಗಳು ವಾಸದ ಮನೆ ಮತ್ತು ನಿವೇಶಗಳ ತೆರಿಗೆಯನ್ನು ಪಾವತಿಸಿ ಚನ್ನಗಿರಿ ಪಟ್ಟಣ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವಾಸಿಂ ಹೇಳಿದರು.ಸೋಮವಾರ ಆಸ್ತಿ ತೆರಿಗೆ ಪಾವತಿಸಿದ ಆಸ್ತಿಗಳ ಮಾಲೀಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೂತನ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಏ.30ನೇ ತಾರೀಖಿನವರೆಗೆ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5ರಷ್ಟು ರಿಯಾಯಿತಿ ಕಲ್ಪಿಸಲಾಗಿದೆ. ಮೇ 1ರಿಂದ ಜೂನ್ 30ರವರೆಗೆ ರಿಯಾಯಿತಿ ಮತ್ತು ದಂಡವಿಲ್ಲದಂತೆ ತೆರಿಗೆ ಪಾವತಿ ಮಾಡಲು ಅವಕಾಶಗಳಿವೆ ಎಂದ ಅವರು, ಜುಲೈ ತಿಂಗಳಿನಿಂದ ಪ್ರತಿ ತಿಂಗಳು ಶೇಕಡ 2ರಷ್ಟು ದಂಡ ವಿಧಿಸಲಾಗುವುದು. ಏಪ್ರಿಲ್ ತಿಂಗಳಿನಲ್ಲಿಯೇ ಆಸ್ತಿ ತೆರಿಗೆಯನ್ನು ಪಾವತಿಸಿ, ಶೇಕಡ 5ರಷ್ಟು ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿ, ಈಗಾಗಲೇ ತೆರಿಗೆ ಪಾವತಿಯಲ್ಲಿ ದೊರೆಯಬಹುದಾದ ರಿಯಾಯಿತಿ ಸೌಲಭ್ಯಗಳ ಮಾಹಿತಿ ಇರುವಂತಹ ಕರಪತ್ರಗಳನ್ನು ಪ್ರತಿ ಮನೆಗಳಿಗೂ ತಲುಪಿಸಲಾಗಿದೆ. ಧ್ವನಿವರ್ಧಕದ ಮೂಲಕವೂ ಪಟ್ಟಣದಲ್ಲಿ ಪ್ರಚುರಪಡಿಸಲಾಗಿದೆ. ಪಟ್ಟಣದ ನಾಗರಿಕರು ರಿಯಾಯಿತಿ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.ಸಮಾರಂಭದಲ್ಲಿ ಪುರಸಭೆ ಸದಸ್ಯ ಗಾದ್ರಿ ರಾಜು, ಅಮೀರ್ ಅಹಮದ್, ವಿಶ್ವನಾಥ್, ಶಿವು, ಮಂಜುನಾಥ್, ಪ್ರಭು, ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಉಪಸ್ಥಿತರಿದ್ದರು.
- - - -1ಕೆಸಿಎನ್ಜಿ2:ಚನ್ನಗಿರಿ ಪುರಸಭೆ ಮುಖ್ಯಾಧಿಕಾರಿ ವಾಸಿಂ ಅವರು ನಾಗರಿಕರಿಗೆ ಆಸ್ತಿ ತೆರಿಗೆಯ ಚಲನ್ ವಿತರಿಸಿದರು.