ಬೀದರ್‌ ಸೇರಿ ರಾಜ್ಯದ 22 ಕಡೆ ಪ್ರವಚನ ಕಾರ್ಯಕ್ರಮ ಆಯೋಜನೆ: ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು

| Published : Jul 23 2025, 01:45 AM IST

ಬೀದರ್‌ ಸೇರಿ ರಾಜ್ಯದ 22 ಕಡೆ ಪ್ರವಚನ ಕಾರ್ಯಕ್ರಮ ಆಯೋಜನೆ: ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ಶ್ರಾವಣ ಮಾಸದ ಅಂಗವಾಗಿ ಪಟ್ಟಣ ಸೇರಿ ಬೀದರ್ ಜಿಲ್ಲೆಯಲ್ಲದೇ ನೆರೆಯ ರಾಜ್ಯದ 22 ಕಡೆಗಳಲ್ಲಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಭಾಲ್ಕಿ: ಶ್ರಾವಣ ಮಾಸದ ಅಂಗವಾಗಿ ಪಟ್ಟಣ ಸೇರಿ ಬೀದರ್ ಜಿಲ್ಲೆಯಲ್ಲದೇ ನೆರೆಯ ರಾಜ್ಯದ 22 ಕಡೆಗಳಲ್ಲಿ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವಕಲ್ಯಾಣ ಅನುಭವ ಮಂಟಪದಿಂದ ಪ್ರವಚನ ಆಯೋಜಿಸಲಾಗುತ್ತಿದ್ದು, ಜು.24 ರಿಂದ ಎಲ್ಲ ಕಡೆಗಳಲ್ಲಿ ಪ್ರವಚನ ಉದ್ಘಾಟನೆಗೊಳ್ಳಲಿದೆ. ಮಠಾಧೀಶರು, ಉಪನ್ಯಾಸಕರು, ಸಾಹಿತಿಗಳು, ಶಿಕ್ಷಕರು ವಿವಿಧ ವಿಷಯಗಳ ಮೇಲೆ ಪ್ರವಚನದ ಮೂಲಕ ಜ್ಞಾನದ ದಾಸೋಹ ಉಣಬಡಿಸಲಿದ್ದಾರೆ ಭಕ್ತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪೂಜ್ಯರಿಂದ ವಚನ ದರ್ಶನ ಪ್ರವಚನ: ಪಟ್ಟಣದಲ್ಲಿ ಕಳೆದ ನಾಲ್ಕು ದಶಕಗಳಿಂದ ಶ್ರಾವಣ ಮಾಸದಲ್ಲಿ ನಿರಂತರವಾಗಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪ್ರವಚನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ತಿಳಿಸಿದರು.

ಈ ಬಾರಿಯು ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಪೂಜ್ಯರು ಪ್ರತಿದಿನ ವಚನ ದರ್ಶನ ವಿಷಯದ ಮೇಲೆ ಬೆಳಕು ಚೆಲ್ಲಲ್ಲಿದ್ದಾರೆ. ಜು.25ಕ್ಕೆ ಪ್ರವಚನ ಉದ್ಘಾಟನೆಗೊಳ್ಳಲಿದ್ದು ಪ್ರತಿದಿನ ಸಾಯಂಕಾಲ 6 ರಿಂದ 7 ಗಂಟೆ ವರೆಗೆ ಪ್ರವಚನದ ಮೂಲಕ ಅಧ್ಯಾತ್ಮದ ಜ್ಞಾನವನ್ನು ಧಾರೆಯೆರಯಲ್ಲಿದ್ದಾರೆ. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಹಾಲಿಂಗ ಸ್ವಾಮೀಜಿ, ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಗುಂಡಪ್ಪ ಸಂಗಮಕರ್ ಇದ್ದರು.