ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳ ಪತ್ತೆ

| Published : Jun 09 2024, 01:30 AM IST

ಸಾರಾಂಶ

ಹನುಮಸಾಗರ ಗ್ರಾಮದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹನುಮಸಾಗರ

ಗ್ರಾಮದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗ್ರಾಮದ ಹೊಸ್ ಬಸ್ ನಿಲ್ದಾಣದ ಹತ್ತಿರ ಹಾಗೂ ಜಹಗೀರ ಗುಡದೂರು ಗ್ರಾಮಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ನಕಲಿ ಕೀಲಿಗಳ ಸಹಾಯದಿಂದ ಕಳ್ಳತನ ಮಾಡಲಾಗಿತ್ತು. ನಂತರ ಅವುಗಳನ್ನು ಮಾರಾಟ ಮಾಡಲು ಕೆಲವು ದಿನ ನಿರ್ಜನ ಪ್ರದೇಶಗಳಲ್ಲಿ ನಿಲ್ಲಿಸಲಾಗಿತ್ತು. ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಶನಿವಾರ ಬೆಳಗಿನ ಜಾವ ಹನುಮಸಾಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಆರೋಪಿ ವೆಂಕಟಾಪುರ ಗ್ರಾಮದ ಆಕಾಶ ಅಲಿಯಾಸ್ ಮಹಾಂತೇಶ ಭಜಂತ್ರಿ (೨೩) ಎಂದು ಗುರುತಿಸಲಾಗಿದೆ. ಆರೋಪಿಯಿಂದ ಹಿರೋ ಸ್ಪೇಂಡರ್ ಪ್ಲಸ್ ಮೊಟಾರ್ ಸೈಕಲ್ ಕೆಎ೩೭ ಇಎಫ್೪೫೦೭, ರಾಯಲ್ ಎನ್‌ಪೀಲ್ಡ್ ಮೊಟಾರ್ ಸೈಕಲ್ ಕೆಎ೦೨ ಕೆಕ್ಯೂ ೪೧೩೨, ಹಿರೋ ಗ್ಲಾಮರ್ ಮೊಟಾರ್ ಸೈಕಲ್ ಕೆಎ೨೯ ಡಬ್ಲೂ೪೭೫೭ ಹೀಗೆ ಅಂದಾಜು ₹೨ ಲಕ್ಷ ೮೦ ಸಾವಿರ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇದನ್ನು ಪತ್ತೆ ಹಚ್ಚುವಲ್ಲಿ ಪಿಎಸ್‌ಐಗಳಾದ ವಿರೂಪಾಕ್ಷಪ್ಪ ಶೆಟ್ಟರ, ಶ್ರೀಶೈಲ್ ಕುಲಕರ್ಣಿ, ಎಸ್‌ಎಸ್‌ಐ ವಸಂತ, ಪೇದೆಗಳಾದ ಸಂಗಮೇಶ ರಾಜೂರ, ಕರಿಸಿದ್ದಪ್ಪ ಜೋಗಿನ, ಮಲ್ಲಪ್ಪ ರಾಜೂರ, ಮಂಜುನಾಥ, ಸಿದ್ರಾಮಪ್ಪ, ಶರಣಪ್ಪ ಹಾಗೂ ಪ್ರಶಾಂತ ಅವರ ನೇತೃತ್ವ ತಂಡ ಶ್ರಮಿಸಿದೆ. ಎಸ್ಪಿ, ಡಿವೈಎಸ್ಪಿ ಹಾಗೂ ಸಿಪಿಐ ಮಾರ್ಗದರ್ಶನದಲ್ಲಿ ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.