ತಾಲೂಕಿನ ಹಲವು ಭಾಗಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಯಲ್ಲಿ ಬೆಂಕಿ ರೋಗ ಹಾಗೂ ಗೋವಿನ ಜೋಳ ಬೆಳೆಗೆ ಸೈನಿಕ ಹುಳದ ಬಾಧೆಯ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸಹಾಯಕ ಕೃಷಿ ನಿರ್ದೇಶಕರ ತಂಡ ಗದ್ದೆಗಳಿಗೆ ಭೇಟಿ ನೀಡಿ ರೊಗ ನಿಯಂತ್ರಣಕ್ಕಾಗಿ ರೈತರಿಗೆ ಸಲಹೆ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ತಾಲೂಕಿನ ಹಲವು ಭಾಗಗಳಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಯಲ್ಲಿ ಬೆಂಕಿ ರೋಗ ಹಾಗೂ ಗೋವಿನ ಜೋಳ ಬೆಳೆಗೆ ಸೈನಿಕ ಹುಳದ ಬಾಧೆಯ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಸಹಾಯಕ ಕೃಷಿ ನಿರ್ದೇಶಕರ ತಂಡ ಗದ್ದೆಗಳಿಗೆ ಭೇಟಿ ನೀಡಿ ರೊಗ ನಿಯಂತ್ರಣಕ್ಕಾಗಿ ರೈತರಿಗೆ ಸಲಹೆ ನೀಡಿದ್ದಾರೆ.ಪ್ರತಿ ಲೀಟರ್ ನೀರಿಗೆ ೧.೦ ಗ್ರಾಂ ಟ್ರೈಸೈಕ್ಲೋಜೋಲ್ (ಬಿಮ್ ಪೌಡರ್) ಔಷಧಿಯನ್ನು ಬೇರೆಸಿ ಸಿಂಪಡಿಸಬೇಕು. ಹಾಗೂ ಬೆಂಕಿ ರೋಗ ಕಂಡು ಬಂದ ಕ್ಷೇತ್ರದಲ್ಲಿ ಯೂರಿಯಾ ಗೊಬ್ಬರ ಅಳವಡಿಸಬಾರದು.
ಗೋವಿನ ಜೋಳ:ಗೋವಿನ ಜೋಳ ಬೆಳೆದಂತಹ ರೈತರ ಹೊಲದಲ್ಲಿ ಈಗಾಗಲೇ ಸೈನಿಕ ಹುಳದ ಬಾಧೆ ಕಂಡು ಬರುತ್ತಿದ್ದು, ಹತೋಟಿಗಾಗಿ ನಿಯಂತ್ರಣೋಪಾಯಗಳನ್ನು ಬಳಸಲು ರೈತರಲ್ಲಿ ವಿನಂತಿಸಲಾಗಿದೆ.
ಜೈವಿಕ ಸಸ್ಯ ಸಂರಕ್ಷಣಾ:ಮೆಟಾರಿಜಿಯಂ ರಿಲೈಯ ಶೀಲಿಂದ್ರವನ್ನು ಪ್ರತಿ ಲೀಟರ್ ನೀರಿಗೆ ೩ ಗ್ರಾಂನಂತೆ ಬೆರೆಸಿ. ೧೫-೨೦ ದಿನದ ಬೆಳೆಯ ಸುಳಿಯಲ್ಲಿ ಹಾಕಬೇಕು. ನಂತರ ಪ್ರತಿ ೧೦ ದಿವಸಗಳ ಅಂತರದಲ್ಲಿ ಕೀಟದ ಸಂಖ್ಯೆಯನ್ನು ಆಧಾರಿಸಿ ಸಿಂಪಡಣೆ ಮುಂದುವರೆಸಬೇಕು. ಒಂದು ವೇಳೆ ಸೈನಿಕ ಹುಳದ ಬಾಧೆಯು ಹೆಚ್ಚಾಗಿ ಕಂಡು ಬಂದರೆ ರೈತರು ರಾಸಾಯನಿಕ ಸಸ್ಯ ಸಂರಕ್ಷಣಾ ಔಷಧಿಗಳಾದ ೦.೨ರಿಂದ ೦.೪ ಗ್ರಾಂ, ಈಮಾಮೆಕ್ಟಿನ್ ಬೆಂಜೋಯೇಟ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ೦.೩ ಮಿ.ಲೀ ಸ್ಟೈನೋಸ್ಯಾಡ್ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಅಥವಾ ೩. ೦.೪ ಮೀ.ಲೀ ಕ್ಲೋರಾಂಟಿನಿಲಿಪ್ರೋಲ್ ಶೇ.೧೮.೫ ಎಸ್.ಸಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕೆಂದು ರೈತರಿಗೆ ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಮಹಾರೆಡ್ಡಿ ಸಲಹೆ ನೀಡಿದ್ದಾರೆ.