ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇತ್ತೀಚೆಗೆ ಮನುಷ್ಯ ಪ್ರಕೃತಿ ವಿರುದ್ಧವಾಗಿ ಜೀವನಶೈಲಿ ಬದಲಾಯಿಸಿಕೊಂಡಿದ್ದರಿಂದ ರೋಗಗಳು ಹೆಚ್ಚಾಗುತ್ತಿವೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.ನಗರದ ಹೊಸಹಳ್ಳಿ ವೃತ್ತದಲ್ಲಿರುವ ರುದ್ರಪ್ಪ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ಪ್ರತಿಭಾಂಜಲಿ ಅಲಯನ್ಸ್ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಮತ್ತು ಆರೋಗ್ಯ ತಪಾಸಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯ ಪ್ರಕೃತಿ ಅವಲಂಬಿತ ಜೀವಿ ಅಷ್ಟೇ. ಮನುಷ್ಯನೇ ಪ್ರಕೃತಿಯಲ್ಲ. ಆಧುನಿಕತೆ ಹೆಚ್ಚಾದಂತೆಲ್ಲಾ ಬದಲಾದ ಜೀವನಶೈಲಿಯಿಂದ ಮನಷ್ಯನಲ್ಲಿ ಸಾಕಷ್ಟು ಬದಲಾವಣೆ, ರೋಗಗಳು, ಪ್ರಾಕೃತಿಕ ಸಂಪತ್ತು ದುರ್ಬಳಕೆ, ಅತಿಯಾಗಿ ಸಂಗ್ರಹಿಸುವಿಕೆಯಿಂದ ಮನುಷ್ಯ ಅನಾರೋಗ್ಯದೆಡೆಗೆ ಸಾಗುತ್ತಿದ್ದಾನೆ ಎಂದರು.ಔಷಧಿ ರಹಿತ ಜೀವನ ಕಟ್ಟಿಕೊಳ್ಳಬೇಕಿದೆ. ಅಹಾರವೇ ಔಷಧವಾಗಬೇಕಿದೆ. ಪ್ರಾಕೃತಿಕ ಚಿಕಿತ್ಸೆಯಿಂದ ದೂರವಾಗಿ ಇಂಗ್ಲಿಷ್ ಔಷಧಗಳತ್ತ ಮುಖ ಮಾಡಿದ ಪರಿಣಾಮ ಅನಾರೋಗ್ಯ ಕಾಡತೊಡಗಿದೆ. ಮತ್ತೆ ಪ್ರಕೃತಿ ಚಿಕಿತ್ಸಾ ವಿಧಾನದೆಡೆಗೆ ಸಾಗಬೇಕಿದೆ ಎಂದು ಎಚ್ಚರಿಸಿದರು.
ಪ್ರಕೃತಿ ಚಿಕಿತ್ಸಾಲಯದಲ್ಲಿ ಪಂಚ ಮಹಾಭೂತಗಳಾದ ಭೂಮಿ, ವಾಯು, ಅಗ್ನಿ, ಜಲ, ಆಕಾಶ ಇವುಗಳನ್ನು ಉಪಯೋಗಿಸಿಕೊಂಡು ಚಿಕಿತ್ಸೆಯನ್ನು ನೀಡುತ್ತಾರೆ, ಉತ್ತಮವಾದ ಜೀವನ ಶೈಲಿಗೆ ಪ್ರಕೃತಿ ಚಿಕಿತ್ಸೆಯೊಂದೇ ಪರಿಹಾರ ಎಂಬುದನ್ನು ಮನಗಂಡು ಈ ಚಿಕಿತ್ಸಾ ಪದ್ಧತಿಯನ್ನು ಹಳ್ಳಿಗಾಡಿನ ರೈತಾಪಿ ಜನರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದ ಎಂಟನೇ ಪ್ರಕೃತಿ ಚಿಕಿತ್ಸಾ ದಿನದಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ವೈದ್ಯರು ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಿ, ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ.ಸೌಮ್ಯಗೌಡ, ಡಾ.ಅಶ್ವಿನಿ, ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ, ಜಿಲ್ಲಾ ರಾಜ್ಯಪಾಲ ಮಾದೇಗೌಡ, ಶಿಕ್ಷಕ ಶಶಿಧರ್ ಈಚಗೆರೆ, ೨ನೇ ಉಪ ರಾಜ್ಯಪಾಲ ಚಂದ್ರಶೇಖರ್, ನಾಗರಾಜ್, ಪ್ರತಿಭಾಂಜಲಿ ಪ್ರೊ.ಡೇವಿಡ್ ಮತ್ತಿತರರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))