ಮುನಿರತ್ನ ಶಾಸಕ ಸ್ಥಾನ ವಜಾ ಮಾಡಿ

| Published : Sep 22 2024, 01:56 AM IST

ಸಾರಾಂಶ

ತುರುವೇಕೆರೆ: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಶಾಸಕ ಸ್ಥಾನವನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಇಲ್ಲಿನ ತಾಲೂಕು ಕಚೇರಿ ಗ್ರೇಡ್‌ 2 ತಹಸೀಲ್ದಾರ್ ಸುಮತಿಗೆ ಮನವಿ ಸಲ್ಲಿಸಿದರು.

ತುರುವೇಕೆರೆ: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಶಾಸಕ ಸ್ಥಾನವನ್ನು ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಇಲ್ಲಿನ ತಾಲೂಕು ಕಚೇರಿ ಗ್ರೇಡ್‌ 2 ತಹಸೀಲ್ದಾರ್ ಸುಮತಿಗೆ ಮನವಿ ಸಲ್ಲಿಸಿದರು.

ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜು ಮಾತನಾಡಿ, ಬಿಜೆಪಿಯವರು ಮಹಿಳೆಯರ ಹಾಗೂ ದಲಿತ ವಿರೋಧಿಗಳಾಗಿದ್ದಾರೆ. ಶಾಸಕ ಮುನಿರತ್ನ ದಲಿತರ, ಮಹಿಳೆಯರ ಮತ್ತು ಒಕ್ಕಲಿಗರ ಸಮಾಜದ ವಿರುದ್ಧ ಕೀಳಾಗಿ ಮಾತನಾಡಿರುವುದು ಖಂಡನೀಯ ಎಂದರು.

ದಲಿತರ ಕುರಿತು ಜಾತಿ ನಿಂದನೆ ಆರೋಪದಲ್ಲಿ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿಯಾಗಿರುವ ಬಿಜೆಪಿ ಶಾಸಕ ಮುನಿರತ್ನರ ವಿರುದ್ಧ ಬಿಜೆಪಿ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಮುನಿರತ್ನ ಕುರಿತು ಪಕ್ಷ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದನ್ನು ಸಾರ್ವಜನಿಕವಾಗಿ ಬಿಜೆಪಿ ಪ್ರಕಟಿಸಬೇಕೆಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷ ದೇವರಾಜು, ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಕಾಂತರಾಜು, ಕೆಂಪರಾಜು, ತ್ರೈಲೋಕಿನಾಥ್, ಪ್ರಕಾಶ್, ರುದ್ರೇಶ್, ಶಶಿಶೇಖರ್, ನಂಜುಂಡಪ್ಪ, ಉಗ್ರೇಗೌಡ, ಗವಿರಂಗಪ್ಪ, ಯೂತ್ ಕಾಂಗ್ರೆಸ್ ನ ಪದಾಧಿಕಾರಿಗಳಾದ ನಂಜೇಶ್, ಕಿರಣ್, ನವೀನ್ ಇದ್ದರು.