ಸಾರಾಂಶ
ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಕೇಂದ್ರ ಸರ್ಕಾರ ಕರ್ನಾಟಕದಲ್ಲಿನ ವಿವಾದಾತ್ಮಕ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್)ಗೆ ಅನುಮೋದಿಸಿದ್ದು, ಇದನ್ನು ಮರು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್. ಆರ್. ಹಿರೇಮಠ ಆಗ್ರಹಿಸಿದ್ದಾರೆ.
- ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ವಿರೋಧ
- ಸಮಾಜ ಪರಿವರ್ತನಾ ಸಮುದಾಯದಿಂದ ನಿಯೋಗ ಭೇಟಿಕನ್ನಡಪ್ರಭ ವಾರ್ತೆ ರಾಯಚೂರು
ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಕೇಂದ್ರ ಸರ್ಕಾರ ಕರ್ನಾಟಕದಲ್ಲಿನ ವಿವಾದಾತ್ಮಕ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್)ಗೆ ಅನುಮೋದಿಸಿದ್ದು, ಇದನ್ನು ಮರು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್. ಆರ್. ಹಿರೇಮಠ ಆಗ್ರಹಿಸಿದರು.ಶನಿವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಂದೇ ಎಚ್.ಡಿ ಕುಮಾರಸ್ವಾಮಿ ಕೆಐಒಸಿಎಲ್ ಹಾಗೂ ವಿಐಆರ್‌ಎಲ್ ಗಣಿಗಾರಿಕೆಗೆ ಅನುಮತಿ ನೀಡಿದ್ದು, ಇದನ್ನು ಪ್ರಶ್ನಿಸಿ ರಾಜ್ಯ ಕಾನೂನು ಸಚಿವರಿಗೆ ಆದೇಶ ತಡೆ ಹಿಡಿಯಲು ಸಮಾಜ ಪರಿವರ್ತನಾ ಸಮುದಾಯದಿಂದ ನಿಯೋಗ ಭೇಟಿ ಮಾಡಿ ಒತ್ತಾಯಿಸಲಾಗಿದೆ. ನ್ಯಾಯಾಲಯ ಆದೇಶಗಳನ್ನು ಪರಾಮರ್ಶಿಸದೇ ಗಣಿಗಾರಿಕೆ ಅನುಮತಿ ನೀಡಿರುವ ಆತುರತೆ ಏನಿತ್ತು ಎಂದು ಪ್ರಶ್ನಿಸಿದರು.
ಗಣಿಗಾರಿಕೆಗೆ ಅನುಮತಿ ಕೋರಿ ರಾಜ್ಯ ಸರ್ಕಾರದ ಪ್ರಸ್ತಾವನೆಯಿದ್ದರೂ ಪರಿಶೀಲಸಿ ನಿರ್ಧರಿಸಬೇಕಿರುವುದು ಸಚಿವಾಲಯದ ಜವಾಬ್ದಾರಿ. ಅದಿರು ಗಣಿಗಾರಿಕೆಯಿಂದ ಆಗುವ ಅಪಾಯಗಳನ್ನು ಈಗಾಗಲೇ ಸುಪ್ರಿಂಕೊರ್ಟ್ ಸೇರಿ ಹಲವಾರು ಪರಿಸರ ರಕ್ಷಣಾ ಸಂಸ್ಥೆಗಳು, ಸಮಿತಿಗಳು ವರದಿ ನೀಡಿವೆ. ಅಪಾಯವನ್ನು ಲೆಕ್ಕಿಸದೇ ಅನುಮತಿ ನೀಡಲಾಗಿದೆ. ಕೇಂದ್ರ ಸಚಿವರು ಕನಿಷ್ಠ ವಸ್ತುಸ್ಥಿತಿಯ ಅರಿಯುವ ಮುನ್ನವೇ ಅನುಮತಿಗೆ ಸಹಿ ಮಾಡಿದ್ದಾರೆ. ಅವರು ಇಲಾಖೆ ಅಧಿಕಾರಿಗಳಿಂದ ಮೊದಲು ಮಾಹಿತಿ ಪಡೆಯಬೇಕಿತ್ತು ಎಂದರು.ನಟ ದರ್ಶನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಗಂಭೀಕ ಕೊಲೆಯಾಗಿದ್ದು ಯಾರು ಶಿಫಾರಸ್ಸು ಮಾಡುವುದು ಸರಿಯಲ್ಲ. ಅಪರಾಧದ ಬಗ್ಗೆ ಸಮಗ್ರ ತನಿಖೆ ನಡೆಸಿ ಅದರ ಹಿಂದೆ ಯಾರೇ ಇರಲಿ ಅವರಿಗೆ ಕಾಯ್ದೆ ಪ್ರಕಾರ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಜಾನ್ ವೆಸ್ಲಿ ಕಾತರಕಿ, ಖಾಜಾ ಅಸ್ಲಂ ಅಹ್ಮದ್, ಭೀಮರಾಯ ಜೇರದಬಂಡಿ ಇದ್ದರು.---------------------22ಕೆಪಿಆರ್‌ಸಿಆರ್ 07: ಎಸ್.ಆರ್.ಹಿರೇಮಠ