ಸಾರಾಂಶ
ಕಾಂಗ್ರೆಸ್ ಪಕ್ಷದಲ್ಲಿ 4 ದಶಕಕ್ಕೂ ಹೆಚ್ಚು ಕಾಲದಿಂದಲೂ ನಿಷ್ಟಾವಂತನಾಗಿ ದುಡಿದ ತಮಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವುದಿರಲಿ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದಿಂದಲೂ ವಂಚಿಸಿ, ಪಕ್ಷಾಂತರಿಗಳು, ಉಳ್ಳವರಿಗೆ ಮಣೆ ಹಾಕಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ, ಅವಾಂತರ ಪತ್ರಿಕೆ ಸಂಪಾದಕ ಎಚ್.ದುಗ್ಗಪ್ಪ ಅವಾಂತರ ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ ಪಕ್ಷದಲ್ಲಿ 4 ದಶಕಕ್ಕೂ ಹೆಚ್ಚು ಕಾಲದಿಂದಲೂ ನಿಷ್ಟಾವಂತನಾಗಿ ದುಡಿದ ತಮಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವುದಿರಲಿ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನದಿಂದಲೂ ವಂಚಿಸಿ, ಪಕ್ಷಾಂತರಿಗಳು, ಉಳ್ಳವರಿಗೆ ಮಣೆ ಹಾಕಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ, ಅವಾಂತರ ಪತ್ರಿಕೆ ಸಂಪಾದಕ ಎಚ್.ದುಗ್ಗಪ್ಪ ಅವಾಂತರ ಆಕ್ರೋಶ ಹೊರ ಹಾಕಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಜಾತಿಗೆ ಸೇರಿದ ತಾವು ಕಾಂಗ್ರೆಸ್ ಪಕ್ಷದ ನಿ಼ಷ್ಠಾವಂತನಾಗಿ ನಿರಂತರ ಸೇವೆ ಸಲ್ಲಿಸಿಕೊಂಡು ಬಂದಿದ್ದೇನೆ. ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡುವುದಿರಲಿ, ನಿಮಗ ಮಂಡಳಿ ನೇಮಕದ ವೇಳೆಯೂ ತಮ್ಮನ್ನು ಪರಿಗಣಿಸದೇ, ಅನ್ಯ ಪಕ್ಷದಿಂದ ಬಂದ ಪಕ್ಷಾಂತರಿಗಳು, ಉಳ್ಳವರಿಗಷ್ಟೇ ಮಣೆ ಹಾಕುತ್ತಿದ್ದರೆ ಕಾಂಗ್ರೆಸ್ ನಿಷ್ಟರ ಪಾಡೇನು ಎಂದು ಪಕ್ಷದ ವರಿಷ್ಟರು, ಸಿಎಂ, ಡಿಸಿಎಂಗೆ ಪ್ರಶ್ನಿಸಿದ್ದಾರೆ.
ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿ 25 ವರ್ಷ ನಿರಂತರ ಸೇವೆ ಸಲ್ಲಿಸಿದ ತಾವು ನಿರಂತರ ಹೋರಾಟಗಳಲ್ಲೂ ಭಾಗಿಯಾಗಿದ್ದೇನೆ. ಎಸ್‌ಸಿ ಮೀಸಲು ಕ್ಷೇತ್ರಕ್ಕೆ ಟಿಕೆಟ್ ಕೇಳಿದರೂ ನೀಡದೇ ವಂಚಿಸಲಾಗಿದೆ. ಕಡೆಗೆ ಸಣ್ಣಪುಟ್ಟ ಹುದ್ದೆಗಳನ್ನು ನೀಡುವುದಕ್ಕೂ ಪಕ್ಷ ನಿರಾಕರಿಸಿದೆಯೆಂದರೆ ಇದರ ಹಿಂದಿರುವ ಕಾಣದಂತಹ ಕೈಗಳು ಯಾವುದು ಎಂದು ಕಿಡಿಕಾರಿದ್ದಾರೆ.ಕಾಂಗ್ರೆಸ್ ಸಂಘಟನೆಗಾಗಿ ನಿಸ್ವಾರ್ಥದಿಂದ ದುಡಿದವನು ನಾನು. ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನಾದರೂ ನನಗೆ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಿಫಾರಸು ಮಾಡಿದ್ದರು. ಆದರೂ ನನಗೆ ಯಾವುದೇ ಸ್ಥಾನಮಾನ, ಅವಕಾಶಗಳನ್ನು ನೀಡಿಲ್ಲ. ಕಾಂಗ್ರೆಸ್ ನಿಷ್ಠನಾಗಿದ್ದ ತಮಗೆ ಪಕ್ಷದಲ್ಲಿ ಅನ್ಯಾಯವಾಗಿದೆ ಎಂದು ದೂರಿದ್ದಾರೆ.
ಹಗಲಿರುಳೆನ್ನದೇ ಮನೆ, ಕೆಲಸ, ಕಾರ್ಯಗಳನ್ನೆಲ್ಲಾ ತೊರೆದು, ಪಕ್ಷಕ್ಕಾಗಿ ದುಡಿದಂತಹ ತಮ್ಮಂತಹ ಅನೇಕ ನಿಷ್ಠಾವಂತ, ಹಿರಿಯ ಮುಖಂಡರು, ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ, ಅವಕಾಶ ನೀಡದೇ ಅನ್ಯಾಯ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಈ ಎಲ್ಲಾ ವಿಚಾರವನ್ನೂ ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಉಸ್ತುವಾರಿಗಳ ಗಮನಕ್ಕೂ ತಂದಿದ್ದು, ಪಕ್ಷ ನಿಷ್ಠರಿಗೆ ಅನ್ಯಾಯವಾಗದಂತೆ ವರಿಷ್ಠರು ನಿಗಾ ವಹಿಸಲಿ ಎಂದು ಎಚ್.ದುಗ್ಗಪ್ಪ ಅವಾಂತರ ಒತ್ತಾಯಿಸಿದ್ದಾರೆ.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))