ಸಮಾನತೆಯ ಸಮಾಜದಲ್ಲಿ ಮಹಿಳೆಗೆ ಅಗೌರವ: ಬಿಇಒ ಜಾಸ್ಮೀನ್‌ ಕಳವಳ

| Published : Jul 01 2024, 01:50 AM IST

ಸಮಾನತೆಯ ಸಮಾಜದಲ್ಲಿ ಮಹಿಳೆಗೆ ಅಗೌರವ: ಬಿಇಒ ಜಾಸ್ಮೀನ್‌ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಸಮಾಜದಲ್ಲಿ ಸಮಾನತೆ ಇದ್ದರೂ ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಡಿಮೆ ಇದೆ. ಇಂದಿಗೂ ಮಹಿಳೆಯನ್ನು ಅಗೌರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮೀನ್‌ ಕಿಲ್ಲೇದಾರ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪ್ರಸ್ತುತ ಸಮಾಜದಲ್ಲಿ ಸಮಾನತೆ ಇದ್ದರೂ ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ಪ್ರಾತಿನಿಧ್ಯ ಕಡಿಮೆ ಇದೆ. ಇಂದಿಗೂ ಮಹಿಳೆಯನ್ನು ಅಗೌರವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಾಸ್ಮೀನ್‌ ಕಿಲ್ಲೇದಾರ ಕಳವಳ ವ್ಯಕ್ತಪಡಿಸಿದರು.ನವನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನದ ಕಾರ್ಯಕ್ರಮದಲ್ಲಿ ಮಹಿಳಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿಗೂ ಬಾಲ್ಯವಿವಾಹ, ಹೆಣ್ಣು ಭ್ರ್ರೂಣಹತ್ಯೆ ಪ್ರಕರಣಗಳು ಕಂಡು ಬರುತ್ತಿವೆ. ಹೆಣ್ಣು ಎಂದರೆ ಸೆರಗಿನ ಕೆಂಡವಾಗಿ ಭಾಸವಾಗುತ್ತದೆ. ಹೀಗಾಗಿ ಪುರಷ ಪ್ರಧಾನ ವ್ಯವಸ್ಥೆ ಮಹಿಳೆಯ ಬೆಳೆವಣಿಗೆಗೆ ಆಧ್ಯತೆ ನೀಡಬೇಕು. ಮಹಿಳೆಯ ಸಾಮಥ್ರ್ಯ ಅರ್ಹತೆ ಅನುಗುಣವಾಗಿ ಸಮಾಜದಲ್ಲಿ ಸ್ಥಾನಮಾನಗಳು ಸಿಗಬೇಕು ತಿಳಿಸಿದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆ ಇಂದಿಗೂ ಪುರುಷನ ಅಡಿಯೊಳಗಡೆ ಕೆಲಸ ನಿರ್ವಹಿಸುವ ವ್ಯವಸ್ಥೆ ಇದೆ. ಅವಳು ಸಮಾಜದಲ್ಲಿ ಸ್ವತಂತ್ರವಾಗಿ ಬದಕಲು ಹಲವು ಅಡೆತಡೆಗಳು ಇಂದಿಗೂ ಜೀವಂತವಾಗಿ ಕಂಡುಬರುತ್ತದೆ ಎಂದರು.ಡಾ.ವೀಣಾ ಕಲ್ಮಠ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಧನೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. ಎಚ್.ಟಿ.ಕೊಡ್ಡನ್ನವರ ಅವರು ಮಹಿಳೆಯರ ಸಬಲೀಕರಣ ಕುರಿತು ಮಾತನಾಡಿದರು. ಉಮಾ ರೇವಡಿಗಾರ, ಜಿಲ್ಲಾ ಕಸಾಪ ಮಹಿಳಾ ಪ್ರತಿನಿಧಿಗಳು ಇದ್ದರು.

ವಿಜಯಶ್ರೀ ಮುರನಾಳ ಸ್ವಾಗತಿಸಿದರು. ಪ್ರಿಯಾ ಕಟ್ಟಿ ನಿರೂಪಿಸಿದರು. ಸುಶೀಲಾ ಅಣ್ಣಿಗೇರಿ ವಂದಿಸಿದರು.