ನಾನು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ೨೦೧೭ರ ಡಿ.೨೭ರಲ್ಲಿ ನೇಮಕವಾಗಿ ಸುದೀರ್ಘ ೮ ವರ್ಷ, ೮ ತಿಂಗಳು ಕಾರ್ಯನಿರ್ವಹಿಸಿದ್ದೇನೆ. ನಾನು ಜವಾಬ್ದಾರಿ ವಹಿಕೊಂಡ ಅವಧಿಯಲ್ಲಿ ಪಕ್ಷದ ಹಲವಾರು ಹೋರಾಟ, ಚುನಾವಣೆ, ಪಕ್ಷದ ಸಂಘಟನೆಯಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ನಾಯಕರು ಸಂಪೂರ್ಣ ಸಹಕಾರ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರು ನೇಮಕಗೊಂಡಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೇಮಕ ಮಾಡಿದ್ದ ಎಲ್ಲ ಪದಾಧಿಕಾರಿಗಳು, ಉಸ್ತುವಾರಿಗಳನ್ನು ವಿಸರ್ಜಿಸಿರುವುದಾಗಿ ನಿರ್ಗಮಿತ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಯಶಸ್ವಿಯಾಗಿ ಪಕ್ಷವನ್ನು ಮುನ್ನಡೆಸಲು ಸಂಪೂರ್ಣ ಸಹಕಾರ ನೀಡಿದ ನನ್ನ ಎಲ್ಲ ಕಾರ್ಯಗಳಿಗೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಮಂಡ್ಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿ ೨೦೧೭ರ ಡಿ.೨೭ರಲ್ಲಿ ನೇಮಕವಾಗಿ ಸುದೀರ್ಘ ೮ ವರ್ಷ, ೮ ತಿಂಗಳು ಕಾರ್ಯನಿರ್ವಹಿಸಿದ್ದೇನೆ. ನಾನು ಜವಾಬ್ದಾರಿ ವಹಿಕೊಂಡ ಅವಧಿಯಲ್ಲಿ ಪಕ್ಷದ ಹಲವಾರು ಹೋರಾಟ, ಚುನಾವಣೆ, ಪಕ್ಷದ ಸಂಘಟನೆಯಲ್ಲಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ನಾಯಕರು ಸಂಪೂರ್ಣ ಸಹಕಾರ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಪಕ್ಷದ ಜವಾಬ್ದಾರಿ ವಹಿಸಿಕೊಂಡ ನಂತರ ಎರಡು ಎಂಎಲ್‌ಎ ಚುನಾವಣೆ, ೨ ಲೋಕಸಭೆ, ೪ ಎಂಎಲ್‌ಸಿ, ೨ ಡಿಸಿಸಿ ಬ್ಯಾಂಕ್, ನಗರಸಭೆ, ಗ್ರಾಪಂ, ಮನ್‌ಮುಲ್, ಟಿಎಪಿಸಿಎಂಎಸ್, ಪಿಎಲ್‌ಡಿ ಬ್ಯಾಂಕ್, ಆರ್‌ಎಪಿಸಿಎಂಎಸ್ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ತುಂಬಾ ಶ್ರಮ ವಹಿಸಿದ್ದೇನೆ. ಜಿಲ್ಲೆಯಾದ್ಯಂತ ನಡೆದ ಪಕ್ಷದ ಕಾರ್ಯಕ್ರಮಗಳಾದ ಪ್ರಜಾಧ್ವನಿ, ಭಾರತ್ ಜೋಡೋ, ಮೇಕೆದಾಟು ಇನ್ನು ಹಲವಾರು ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಯಶಸ್ವಿಗೊಳಿಸಿರುವುದಾಗಿ ತಿಳಿಸಿದರು.

ಮುಖಂಡರಾದ ಸಿ.ಆರ್.ರಮೇಶ್, ಉದಯಕುಮಾರ್, ವಿಜಯಕುಮಾರ್, ಮುಜಾಹಿದ್, ವೀಣಾ ಶಂಕರ್, ಮಂಜುಳಾ ಇತರರು ಗೋಷ್ಠಿಯಲ್ಲಿದ್ದರು.

ತಿಮ್ಮನ ಹೊಸೂರು ಶಾಲಾ ವಿದ್ಯಾರ್ಥಿಗಳಿಗೆ ಆಟೋ ವ್ಯವಸ್ಥೆ

ಕನ್ನಡಪ್ರಭ ವಾರ್ತೆ ಮಂಡ್ಯಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ವತಿಯಿಂದ ‘ಬನ್ನಿ ಸರ್ಕಾರಿ ಶಾಲೆಗೆ’ ಎನ್ನುವ ಅಭಿಯಾನದಡಿ ತಾಲೂಕಿನ ತಿಮ್ಮನಹೊಸೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಆಟೋ ಸೌಕರ್ಯ ಕಲ್ಪಿಸಿದ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿನಯ್‌ಕುಮಾರ್, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಕ್ಕಳಿಗೆ ಅನುಕೂಲವಾಗಬೇಕೆಂಬುದು ನನ್ನ ಮತ್ತು ಟ್ರಸ್ಟ್ ಆಸೆಯಾಗಿದೆ. ಮತ್ತಷ್ಟು ಸೇವೆ ನೀಡಲು ನಾನು ಬದ್ಧನಿದ್ದೇನೆ. ಆಟೋ ವ್ಯವಸ್ಥೆಯಿಂದ ಮಕ್ಕಳು ಸಂತೋಷಗೊಂಡಿರುವುದನ್ನು ನೋಡಿದರೆ ನನಗೂ ಸಂತಸವಾಗುತ್ತಿದೆ ಎಂದರು.

ವಿದ್ಯಾರ್ಥಿಗಳು ಸಮಾಜದಿಂದ ಸಹಾಯ ಪಡೆದು ಮತ್ತೆ ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು. ಶ್ರದ್ಧೆಯಿಂದ ಓದಿದರೆ ಎಲ್ಲವೂ ಸಾಧ್ಯ ಎನ್ನುವುದನ್ನು ಮರೆಯಬಾರದು. ಅದರಂತೆ ಅಧ್ಯಯನದಲ್ಲಿ ಆಸಕ್ತಿಯಿಂದ ತೊರಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಪ್ರಶಸ್ತಿ ಪುರಸ್ಕೃತೆ ಕೆ.ಪಿ.ಅರುಣಕುಮಾರಿ, ಹಿರಿಯ ವಿದ್ಯಾರ್ಥಿಗಳ ವೇದಿಕೆ ಅಧ್ಯಕ್ಷ ಸುರೇಶ್, ನಿರ್ದೇಶಕ ಆನಂದ್, ಮುಖ್ಯ ಶಿಕ್ಷಕ ಎನ್.ಎನ್.ಯೋಗೇಶ್, ಸಹ ಶಿಕ್ಷಕರಾದ ಮಂಚೇಗೌಡ, ಮಲ್ಲೇಶ್‌ಗೌಡ, ಮಾದಯ್ಯ, ರಾಣಿ, ಪ್ರತಿನಾ, ನಾಗರತ್ನ, ಹಿಂದೂಮತಿ, ಅಶ್ವಿನಿ, ಎಸ್‌ಡಿಎಎಂಸಿ ಸದಸ್ಯರಾದ ಮಂಜುನಾಥ್, ದಿವ್ಯ, ಲಕ್ಷ್ಮೀ ಭಾಗವಹಿಸಿದ್ದರು.