ಸಾರಾಂಶ
ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಸೇವೆಗಳನ್ನು ಗುರುತಿಸಿ ಅನಿವಾಸಿ ಕುಂದಾಣದ ಭಾರತೀಯ ರೊನಾಲ್ಡ್ ಕೊಲಾಸೋ ಅವರಿಗೆ ವಿಶ್ವಖ್ಯಾತಿಯ " ಡಿಸ್ಟಿಂಗ್ವಿಶ್ಡ್ " ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿಶ್ವಖ್ಯಾತಿಯ " ಡಿಸ್ಟಿಂಗ್ವಿಶ್ಡ್ " ಫೆಲೋಶಿಪ್ ಪ್ರಶಸ್ತಿ ಫಲಕವನ್ನು ಲಂಡನ್ ಲಾರ್ಡ್ ಮೇಯರ್ ಲಂಡನ್ ಡಿಜಿಟಲ್ ಆರ್ಥಿಕ ಮಂತ್ರಿ ಹಾಗೂ ಲೆಫ್ಟಿನೆಂಟ್ ಜನರಲ್ ಸುರೇಂದ್ರನಾಥ್ಡಾ ಅವರು ರೋನಾಲ್ಡ್ ಕೊಲಾಸೋ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
-ಬ್ರಿಟಿಷ್ ಪಾರ್ಲಿಮೆಂಟ್ ಹೌಸ್ ಆಫ್ ಲಂಡನ್ ನಲ್ಲಿ ಇನ್ಸ್ ಟ್ಯೂಟ್ ಆಫ್ ಡೈರೆಕ್ಟರ್ಸ್‌ನಿಂದ ಗೌರವಕನ್ನಡಪ್ರಭ ವಾರ್ತೆ ಕುಂದಾಣ
ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖಿ ಸೇವೆಗಳನ್ನು ಗುರುತಿಸಿ ಅನಿವಾಸಿ ಭಾರತೀಯ ರೊನಾಲ್ಡ್ ಕೊಲಾಸೋ ಅವರಿಗೆ ವಿಶ್ವಖ್ಯಾತಿಯ " ಡಿಸ್ಟಿಂಗ್ವಿಶ್ಡ್ " ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಬ್ರಿಟಿಷ್ ಪಾರ್ಲಿಮೆಂಟ್ ಹೌಸ್ ಆಫ್ ಲಂಡನ್ ನಲ್ಲಿ ಇನ್ಸ್ ಟ್ಯೂಟ್ ಆಫ್ ಡೈರೆಕ್ಟರ್ಸ್ ಆಯೋಜಿಸಿರುವ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಭಾರತ ಸಂವಿಧಾನದ ಸುಧಾರಣಾ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಂ.ಎನ್ ವೆಂಕಟಾಚಲಯ್ಯ ಅವರು ಸಹಿ ಮಾಡಿರುವ ವಿಶ್ವಖ್ಯಾತಿಯ " ಡಿಸ್ಟಿಂಗ್ವಿಶ್ಡ್ " ಫೆಲೋಶಿಪ್ ಪ್ರಶಸ್ತಿ ಫಲಕವನ್ನು ಲಂಡನ್ ಲಾರ್ಡ್ ಮೇಯರ್ ಲಂಡನ್ ಡಿಜಿಟಲ್ ಆರ್ಥಿಕ ಮಂತ್ರಿ ಹಾಗೂ ಲೆಫ್ಟಿನೆಂಟ್ ಜನರಲ್ ಸುರೇಂದ್ರನಾಥ್ಡಾ ಅವರು ರೋನಾಲ್ಡ್ ಕೊಲಾಸೋ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕೆಪಿಸಿಸಿ ಸಾಮಾಜಿಕ ಜಾಲತಾಣ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂದೀಪ್ ಮಾತನಾಡಿ, ಡಾ. ರೊನಾಲ್ಡ್ ಕೊಲಾಸೋ ಅವರು ಪೊಲೀಸ್ ಠಾಣೆಗಳು, ಸರ್ಕಾರಿ ಹಾಗೂ ಚಾರಿಟಬಲ್ ಟ್ರಸ್ಟ್‌ಗಳು ನಡೆಸುವ ಅತ್ಯಾಧುನಿಕ ಮಾದರಿ ಶಾಲೆಗಳು, ಸಾರ್ವಜನಿಕ ರಸ್ತೆಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು, ನ್ಯಾಯಾಂಗ ಇಲಾಖೆ, ವಕೀಲರ ಭವನ, ಹಾಫ್ ಕಾಮ್ಸ್ ಮಳಿಗೆಗಳು, ನಿರಾಶ್ರಿತರಿಗೆ ಸೂಕ್ತ ಮನೆಗಳ ಕೊಡುಗೆ, ಹಿಂದೂ ದೇವಾಲಯಗಳು, ಚರ್ಚ್ ಗಳು, ಮಸೀದಿಗಳು, ಬೆಸ್ಕಾಂ, ಕೊರೋನಾ ಸಾಂಕ್ರಾಮಿಕದಲ್ಲಿ ಸಹಸ್ರಾರು ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ, ಪ್ರಕೃತಿ ವಿಕೋಪಕ್ಕೆ ತುತ್ತಾದವರೆಗೆ ಸಹಾಯ ಹಸ್ತ ಸೇರಿದಂತೆ ಅನೇಕ ಜನಪರ ಸೇವೆ ಮಾಡಿದ್ದು, ಅದನ್ನು ಗುರುತಿಸಿ ಅವರಿಗೆ ವಿಶ್ವಖ್ಯಾತಿಯ ಪ್ರಶಸ್ತಿ ದೊರೆತಿರುವುದು ದೇಶಕ್ಕೆ ಸಂದ ಗೌರವ ಎಂದರು.